More

    ದುಬೈನಲ್ಲಿ 2 ಸಾವಿರ ಮಂದಿಗೆ ಕೆಲಸ ಕೊಟ್ಟಿದ್ದ ಕೇರಳದ ಮಹಿಳೆ ಇಂದು ತುತ್ತು ಅನ್ನಕ್ಕೂ ಪರದಾಟ..!

    ಶಾರ್ಜಾ: ಒಂದು ಕಾಲದಲ್ಲಿ ಐಷಾರಾಮಿ ಬಂಗಲೆಯಲ್ಲಿ ಜೀವಿಸುತ್ತಾ ಎಲ್ಲ ಶ್ರೀಮಂತಿಕೆಯನ್ನು ಆನಂದಿಸುತ್ತಿದ್ದ ಕೇರಳದ ಆಲಪ್ಪುಳ ಜಿಲ್ಲೆಯ ಕಂದಲ್ಲೂರು ಮೂಲದ ಅನಿತಾ ಬಾಲು ಇಂದು ದುಬೈನ ಮರವೊಂದರ ಕೆಳಗೆ ದಿನ ದೂಡುತ್ತಿದ್ದಾರೆ. ಅವರ ಜೀವನಕ್ಕೆ ಸಿಕ್ಕಂತಹ ದುರಂತ ತಿರುವು ಇಂದು ಅವರನ್ನು ಈ ಪರಿಸ್ಥಿತಿಗೆ ದೂಡಿದೆ.

    ಆಲಪ್ಪುಳದ ಮುತ್ತುಕುಲಮ್​ ಮೂಲದ ಬಾಲು ಎಂಬುವರನ್ನು ಮದುವೆಯಾದ ಬಳಿಕ ಅನಿತಾ ಅವರು ಸುಮಾರು 20 ವರ್ಷದಿಂದ ಯುಎಇದಲ್ಲಿ ನೆಲೆಸಿದ್ದಾರೆ. 2000 ಉದ್ಯೋಗಿಗಳನ್ನು ಹೊಂದಿರುವ ಎಲೆಕ್ಟ್ರೋ ಮೆಕ್ಯಾನಿಕಲ್ ವ್ಯಾಪಾರವನ್ನು ನಡೆಸುವಲ್ಲಿ ಗಂಡ-ಹೆಂಡತಿ ಇಬ್ಬರು ಪಾಲುದಾರರಾಗಿದ್ದರು. ಆರಂಭದಲ್ಲಿ ಅದೃಷ್ಟ ಚೆನ್ನಾಗಿಯೇ ಇತ್ತು. ವ್ಯವಹಾರ ಯಾವುದೇ ತಡೆಯಿಲ್ಲದೇ ಸಾಗುತ್ತಿತ್ತು. ಆದರೆ, ಕೆಲವು ವರ್ಷಗಳ ಬಳಿಕ ಕೆಟ್ಟ ದಿನಗಳು ಆರಂಭವಾಗಲು ಶುರುವಾಯಿತು. ಯುಎಇ ಬ್ಯಾಂಕ್​ನಿಂದ ಬಾಲು ತೆಗೆದುಕೊಂಡಿದ್ದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಕ್ಕೆ ಅನಿತಾ ಬಂಧನವಾಯಿತು.

    ಅನಿತಾ ಮೂರು ವರ್ಷಗಳ ಬಳಿಕ ಬಿಡುಗಡೆಯಾಗಿದ್ದಾರೆ. ಆದರೆ, ಆಕೆಯ ಪತಿ ತಲೆಮರೆಸಿಕೊಂಡು ಕೇರಳಕ್ಕೆ ಬಂದ ನಂತರ ಮತ್ತೆ ಆ ಕಡೆ ಸುಳಿದೇ ಇಲ್ಲ. ಅನಿತಾ ಹೆಸರಿನಲ್ಲಿ ಸಾಲವನ್ನು ತೆಗೆದುಕೊಳ್ಳಲಾಗಿದೆಯೇ ಅಥವಾ ಅವಳು ಶ್ಯೂರಿಟಿಯಾಗಿ ನಿಂತಿದ್ದಾಳಾ ಎಂಬುದು ಕೂಡ ಸ್ಪಷ್ಟವಾಗಿಲ್ಲ. ಆಕೆಯ ಪಾಸ್‌ಪೋರ್ಟ್ ಮತ್ತು ವೀಸಾ ಅವಧಿ ಕೂಡ ಮುಗಿದಿದೆ ಮತ್ತು ಸಿವಿಲ್ ಪ್ರಕರಣದಿಂದಾಗಿ ಅವಳು ಪ್ರಯಾಣ ನಿಷೇಧವನ್ನು ಎದುರಿಸುತ್ತಿದ್ದಾರೆ.

    ಐಷಾರಾಮಿ ಜೀವನ ನಡೆಸುತ್ತಿದ್ದ ಅನಿತಾ, ಕಣ್ಣು ಮಿಟುಕಿಸುವಷ್ಟರಲ್ಲಿ ದುರಂತಕ್ಕೆ ಸಿಲುಕಿ, ಶ್ರೀಮಂತಿಕೆಯಿಂದ ಕಳಗೆ ಬಿದ್ದಿದ್ದಾರೆ. ದುಬೈ, ಶಾರ್ಜಾ ಮತ್ತು ರಾಸ್​ ಅಲ್​ ಖೈಮಾದಲ್ಲಿ ಅನಿತಾ ಅವರು ಆಧುನಿಕ ಕಚೇರಿಯನ್ನು ಹೊಂದಿದ್ದರು. ಐಷಾರಾಮಿ ಬಂಗಲೆ ಮತ್ತು ಲಕ್ಷುರಿ ಕಾರುಗಳಿದ್ದವು ಮತ್ತು ತವರಿನಲ್ಲೂ ಅನಿತಾ ಅವರಿಗೆ ಆಸ್ತಿಗಳಿವೆ.

    ಆದಾಗ್ಯೂ, ಅನಿತಾ ಸದ್ಯ ದುಬೈನ ಬೇವಿನ ಮರವೊಂದರ ಅಡಿಯಲ್ಲಿ ಕಳೆದ ಒಂದು ತಿಂಗಳಿಂದ ಬದುಕು ಸಾಗಿಸುತ್ತಿದ್ದಾರೆ. ದುಬೈ ಪೊಲೀಸರು ಮತ್ತು ಸ್ವಯಂಸೇವಕರು ಆಕೆಗೆ ಸಹಾಯವನ್ನು ನೀಡಿದರೂ, ಆ ಸ್ಥಳದಿಂದ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ. ಭಾರತೀಯ ದೂತಾವಾಸದ ಅಧಿಕಾರಿಗಳು ಮತ್ತು ಇತರರು ಸೌಕರ್ಯಗಳನ್ನು ಒದಗಿಸಿದರೂ, ಆಕೆ ಮನಸ್ಸನ್ನು ಬದಲಾಯಿಸುತ್ತಿಲ್ಲ.

    ಅನಿತಾಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಓರ್ವ ದುಬೈನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೊಬ್ಬ ಕೇರಳದಲ್ಲಿದ್ದಾರೆ. ದುಬೈನಲ್ಲಿ ವಾಸಿಸುವ ಮಗ ಕೆಲವೊಮ್ಮೆ ತಾಯಿಯನ್ನು ಭೇಟಿ ಮಾಡುತ್ತಾನೆ. ಆದರೆ. ಆಕೆ ಅವನಿಂದ ಯಾವುದೇ ಹಣಕಾಸಿನ ಸಹಾಯವನ್ನು ಪಡೆಯಲು ನಿರಾಕರಿಸುತ್ತಿದ್ದಾರೆ. ಅಲ್ಲದೆ, ಮನೆಗೆ ಹೋಗಲು ಒಪ್ಪುತ್ತಿಲ್ಲ. ಅನಿತಾ ಪ್ರತಿಭಾವಂತ ಗಾಯಕಿಯು ಹೌದು.

    ದುಬೈ ಪದಾಧಿಕಾರಿ ಶಿಜು ಬಶೀರ್ ಅವರು ಪ್ರಕರಣವನ್ನು ಇತ್ಯರ್ಥಗೊಳಿಸಲು ಮತ್ತು ಆಕೆಗೆ ನಿವಾಸದ ದಾಖಲೆಗಳನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದು, ಆಕೆಗೆ ಕೆಲಸ ಮಾಡಲು ಮತ್ತು ಯೋಗ್ಯವಾಗಿ ಬದುಕಲು ಅನುವು ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಬಡತನದಿಂದ ಬಂಗಾರದವರೆಗೂ: ನೀರಜ್ ಸಾಧನೆಯ ಒಂದೊಂದು ಮೆಟ್ಟಿಲು ಬಲು ರೋಚಕ!

    ಬಿಗ್​ಬಾಸ್​ ವಿನ್ನರ್​ ಲ್ಯಾಗ್​ ಮಂಜುಗಿಂತಲೂ ಅರವಿಂದ್​ಗೆ ಸಿಕ್ಕಿದೆ ಭಾರೀ ಮೊತ್ತದ ಹಣ? ಹೀಗೊಂದು ಲೆಕ್ಕಾಚಾರ..!

    ಅಭಿಮಾನಿಗಳ ಪ್ರಾರ್ಥನೆ ನೆರವೇರಿಲಿಲ್ಲ: ಸ್ಫೂರ್ತಿಯ ಚಿಲುಮೆಯಾಗಿದ್ದ ಯುವ ನಟಿ ಶರಣ್ಯಾ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts