More

    ಮೀನು ಮಾರಾಟ ಮಾಡಿ ಕುಟಂಬಕ್ಕೆ ನೆರವು: ಓದಿನಲ್ಲೂ ಮುಂದಿರುವ ಬಾಲಕನ ಗುಣಕ್ಕೆ ಪೊಲೀಸ್​ ಅಧಿಕಾರಿ ಫಿದಾ!

    ತಿರುವನಂತಪುರಂ: ಚಿಕ್ಕ ವಯಸ್ಸಿನಲ್ಲೇ ದೊಡ್ಡ ಜವಬ್ದಾರಿ ಹೊತ್ತು ಮೀನು ಮಾರಾಟ ಮಾಡಿ ತನ್ನ ಕುಟುಂಬದ ನಿರ್ವಹಣೆಗೆ ನೆರವಾಗುತ್ತಿರುವ 7 ತರಗತಿಯ ಬಾಲಕನ ಗುಣಕ್ಕೆ ಮನಸೋತಿರುವ ಕೇರಳ ರಾಜ್ಯ ಪೊಲೀಸರು ಆತನನ್ನು ಪ್ರಶಂಸಿಸಿದ್ದಾರೆ.

    11 ವರ್ಷದ ಬಾಲಕ ಅಭಿಜಿತ್​ಗೆ ರಾಜ್ಯ ಪೊಲೀಸ್​ ಮುಖ್ಯಸ್ಥ ಅನಿಲ್​ ಕಾಂತ್​ ಲ್ಯಾಪ್​ಟಾಪ್​ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಕರೊನಾ ಸಂದರ್ಭದಲ್ಲಿ ಆನ್​ಲೈನ್​ ಕ್ಲಾಸ್​ಗಳು ನಡೆಯುತ್ತಿರುವುದರಿಂದ ಓದಿನಲ್ಲೂ ಮುಂಚೂಣಿಯಲ್ಲಿರುವ ಬಾಲಕನಿಗೆ ನೆರವಾಗಲಿ ಎಂದು ಲ್ಯಾಪ್​ಟಾಪ್​ ಉಡುಗೊರೆ ಕೊಡಲಾಗಿದೆ.

    ಅಂದಹಾಗೆ ಅಭಿಜಿತ್​, ತಿರುವನಂತಪುರಂನ ಪಂಚಕ್ಕಾರಿಯ ಥಾಂಪುರನ್ಮಕ್ಕು ನಿವಾಸಿ. ಅಭಿಜಿತ್​ ಮತ್ತು ಅವನ ಅಕ್ಕ ಅಮೃತಾಳನ್ನು ಅವರ ಪಾಲಕರು ಚಿಕ್ಕ ವಯಸ್ಸಿನಲ್ಲಿಯೇ ತ್ಯಜಿಸಿದ್ದಾರೆ. ಅವರ ಅಜ್ಜಿ (ತಾಯಿ ಮನೆ ಸಂಬಂಧ) ಸುಧಾ, ಮಕ್ಕಳಿಬ್ಬರನ್ನು ತಮ್ಮ ವಶಕ್ಕೆ ಪಡೆದು, ಅಂದಿನಿಂದ ಅವರ ಲಾಲನೆ-ಪಾಲನೆಯನ್ನು ನೋಡಿಕೊಂಡು ಬಂದಿದ್ದಾರೆ.

    ಇದನ್ನೂ ಓದಿರಿ: ದಯವಿಟ್ಟು ನನಗೆ ಚಿನ್ನ ಬೇಡ: ಮದುವೆಯಲ್ಲಿ ವರದಕ್ಷಿಣೆ ವಿರೋಧಿ ಹೇಳಿಕೆ ನೀಡಿ ಮಾದರಿಯಾದ ಯುವಕ!

    ಅಭಿಜಿತ್​, ಅಕ್ಕ ಅಮೃತಾ ಮತ್ತು ಅಜ್ಜಿ ಸುಧಾ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ. ಅಜ್ಜಿ ಮೀನು ಮಾರಾಟ ಮಾಡಿ ಮಕ್ಕಳನ್ನು ಸಲಹುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಅಭಿಜಿತ್​ ಕೂಡ ಅಜ್ಜಿಯ ಜತೆಯಲ್ಲಿ ತೆರಳಿ ಮೀನು ಮಾರಾಟ ಮಾಡುತ್ತಾನೆ. ಮೀನನ್ನು ತುಂಬಿಕೊಂಡು ಸೈಕಲ್​ ಮೇಲೆ ಹಾಕಿಕೊಂಡು ಮಾರಾಟ ಮಾಡಿ ಕುಟುಂಬಕ್ಕೆ ನೆರವಾಗುತ್ತಿದ್ದಾನೆ.

    ಇನ್ನು ಅಭಿಜಿತ್​ಗೆ ತಾನೊಬ್ಬ ಪೊಲೀಸ್​ ಅಧಿಕಾರಿ ಆಗಬೇಕೆಂಬ ಆಸೆಯಂತೆ. ಅಭಿಜಿತ್​ ಬಗ್ಗೆ ಮಾಧ್ಯಮ ವರದಿ ಮಾಡಿದ ಬಳಿಕ ಅದನ್ನು ನೋಡಿದ ಕೇರಳ ಪೊಲೀಸ್​ ಅಧಿಕಾರಿಗಳು ಆತನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. (ಏಜೆನ್ಸೀಸ್​)

    ದರ್ಶನ್ ಕೇಸ್​ಗೆ ಮೆಗಾ ಟ್ವಿಸ್ಟ್? ಎಚ್​ಡಿಕೆ-ಇಂದ್ರಜಿತ್ ಲಂಕೇಶ್ ಭೇಟಿಯ ಫೋಟೋ ವೈರಲ್​

    ಮಗುವಿಗಾಗಿ ಮಗಳನ್ನೇ ಮದುವೆಯಾದನಾ 75ರ ವೃದ್ಧ!? ವೈರಲ್​ ಫೋಟೋ ಕುರಿತ ಅಸಲಿ ಕಹಾನಿ ಇಲ್ಲಿದೆ

    ಪೆಟ್ರೋಲ್​-ಡೀಸೆಲ್​ ದರವನ್ನು ಏಕೆ ಕಡಿತಗೊಳಿಸಲಾಗದು?: ನೀತಿ ಆಯೋಗದ ಸಿಇಒ ಹೇಳಿದ್ದು ಹೀಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts