More

    ಪಠ್ಯದಲ್ಲಿ ಕೆಳದಿ ಚೆನ್ನಮ್ಮ ಹೋರಾಟ ಜೀವನ ಸೇರ್ಪಡೆ: ಸಿಎಂ ಬೊಮ್ಮಾಯಿ‌ ಭರವಸೆ

    ಬೆಂಗಳೂರು:‌ ಕೆಳದಿ ರಾಣಿ ಚೆನ್ನಮ್ಮ ಅವರ ಜೀವನಗಾಥೆ, ಹೋರಾಟದ ಕುರಿತು ಮುಂದಿನ ಪೀಳಿಗೆಗೆ ಮಾಹಿತಿ ನೀಡುವ ಉದ್ದೇಶದಿಂದ ಪಠ್ಯದಲ್ಲಿ ಸೇರಿಸಲು ಸಂಬಂಧಿಸಿದವರಿಗೆ ಸೂಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಭರವಸೆ ನೀಡಿದರು.

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಳದಿ ರಾಣಿ ಚೆನ್ನಮ್ಮ ನವರ 350ನೇ ಪಟ್ಟಾಭಿಷೇಕ ಮಹೋತ್ಸವ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

    ಮುಂದಿನ ವರ್ಷ ಕೆಳದಿಯಲ್ಲೇ ರಾಣಿ ಚೆನ್ನಮ್ಮನವರ ಪಟ್ಟಾಭಿಷೇಕ ಮಹೋತ್ಸವ ಆಚರಿಸಲಾಗುವುದು. ಕೆಳದಿ ಸುತ್ತಮುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ಪುನರುತ್ಥಾನ ಮಾಡಲಾಗುವುದು ಎಂದು ಪ್ರಕಟಿಸಿದರು.

    ಕಂದಾಚಾರದ ವಿರುದ್ಧ ಗಟ್ಟಿತನ, ತನ್ನ ರಾಜ್ಯದ ಮೇಲೆ ದಾಳಿ, ಹತ್ಯೆಗೆ ಪ್ರಯತ್ನಿಸಿದವರಿಗೆ ಕ್ಷಮಿಸಿ, ಆಶ್ರಯ ನೀಡಿದ ಧೀರ ರಾಣಿ ಎಂದು ಬೊಮ್ಮಾಯಿ‌ ಕೊಂಡಾಡಿದರು.

    ಈ ಸಂದರ್ಭದಲ್ಲಿ ಸಚಿವರಾದ ಮುರುಗೇಶ ನಿರಾಣಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮಿಗಳು, ಪಂಚಮಸಾಲಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

    ಅಡಲ್ಟ್​ ಸಿನಿಮಾ ಮೇಕಿಂಗ್​ ವೇಳೆ ಪೊಲೀಸ್​ ಕೈಗೆ ಸಿಕ್ಕಿಬಿದ್ದ ನಟಿ ಉರ್ಫಿ ಜಾವೇದ್: ಕೊನೆಯಲ್ಲಿ ರೋಚಕ ಟ್ವಿಸ್ಟ್​!​​

    ವಿಡಿಯೋದಲ್ಲಿ ಬೇಬಿ ಬಂಪ್ ತೋರಿಸಿದ ಕಾಜಲ್! ಶುಭ ಹಾರೈಸಿದ ಅಭಿಮಾನಿಗಳು…

    ಹಾರ ಬದಲಾಯಿಸುವಾಗ ವಧುವಿಗೆ ತಿಳಿದೇ ಬಿಡ್ತು ವರನ ಆ ಗುಟ್ಟು! ಮೂರ್ಛೆ ಹೋದಳು, ಮದ್ವೆ ಕ್ಯಾನ್ಸಲ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts