More

    ಕಾಶಿಯಲ್ಲಿ ಕನ್ನಡಿಗರು ಅತಂತ್ರ: ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಭಕ್ತರು

    ಮಂಡ್ಯ: ಕಾಶಿಗೆಂದು ಪ್ರವಾಸಕ್ಕೆ ತೆರಳಿದ ಕನ್ನಡಿಗರು ಅಗ್ನಿಪಥ್ ಗಲಾಟೆ ನಡುವೆ ಅತಂತ್ರವಾಗಿದ್ದಾರೆ. ರೈಲು ಸಂಚಾರ ರದ್ದಾಗಿರುವ ಪರಿಣಾಮ ಕಾಶಿ ಯಾತ್ರೆಗೆ ತೆರಳಿದ್ದ ಸಾವಿರಾರು ಕನ್ನಡಿಗರು ಅಂತತ್ರಕ್ಕೆ ಸಿಲುಕಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮಂಡ್ಯ ಜಿಲ್ಲೆಯ 46, ತುಮಕೂರಿನ 29 ಮತ್ತು ರಾಮನಗರ ಜಿಲ್ಲೆಯ 23 ಜನರು ಕಾಶಿಯಲ್ಲೇ ಸಿಲುಕಿಕೊಂಡಿದ್ದಾರೆ. ಕಾಶಿ ಪ್ರವಾಸ ಮುಗಿಸಿ ವಾಪಸ್ ಆಗಲು ಸಿದ್ಧತೆ ಮಾಡಿಕೊಳ್ಳುವ ವೇಳೆ ಅಗ್ನಿಪಥ್ ಹಿಂಸಾಚಾರ ನಡೆದಿದೆ. ಪರಿಣಾಮ ರಾಜ್ಯಕ್ಕೆ ಬರಬೇಕಿದ್ದ ರೈಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಶುಕ್ರವಾರ ರಾತ್ರಿ ವಾರಣಾಸಿ ಮಾರ್ಗವಾಗಿ ಕರ್ನಾಟಕಕ್ಕೆ ಹಿಂತಿರುಗಬೇಕಿದ್ದ ಕಾಶಿ ಯಾತ್ರಿಗಳಿಗೆ ರೈಲು ರದ್ದಾಗಿರುವ ವಿಚಾರ ಕೇಳಿ ದಿಕ್ಕುತೋಚದಂತಾಗಿದೆ. ಸಂಚಾರ ಅಸ್ತವ್ಯಸ್ತದಿಂದ ಕನ್ನಡಿಗರು ಆತಂಕದಲ್ಲಿದ್ದಾರೆ. ಸಧ್ಯ ಇವರೆಲ್ಲರೂ ಕಾಶಿಯ ಜಂಗಮ ಮಠದಲ್ಲಿ ಆಶ್ರಯ ಪಡೆದಿದ್ದಾರೆ. ಈ ನಡುವೆ ಸರಿಯಾದ ಸಮಯಕ್ಕೆ ಊಟ, ಅವಶ್ಯವಿರುವವರಿಗೆ ಮಾತ್ರೆ ಸಿಗುತ್ತಿಲ್ಲ. ಪರಿಣಾಮ ಆತಂಕದಲ್ಲಿಯೇ ಕಾಲಕಳೆಯುವಂತಾಗಿದೆ.

    ಇನ್ನು ಕಾಶಿಯಿಂದ ಕರ್ನಾಟಕ ಬರಲು ಪ್ರತಿಯೊಬ್ಬರಿಗೆ ತಲಾ 3,500 ರೂ ಕೊಟ್ಟರೆ ಬಸ್ ವ್ಯವಸ್ಥೆ ಮಾಡುವುದಾಗಿ ತಿಳಿದುಬಂದಿದೆ. ಆದರೆ ಇಷ್ಟು ಹಣ ಕೊಡಲು ಕೆಲವರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನೆರವಿಗೆ ಮನವಿ‌ ಮಾಡಿದ್ದಾರೆ.

    ಇನ್ನು ಮಂಡ್ಯ ಜಿಲ್ಲೆಯಿಂದ ಪ್ರವಾಸಕ್ಕೆ ತೆರಳಿರುವವರ ಪಟ್ಟಿಯನ್ನು ಜಿಲ್ಲಾಡಳಿತ ಪಡೆದುಕೊಂಡಿದೆ. ಅಂತೆಯೇ ಅಲ್ಲಿಂದ ಸುರಕ್ಷಿತವಾಗಿ ಕರೆಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ. ಆದರೆ ಪ್ರವಾಸದಲ್ಲಿರುವವರಿಗೆ ಅಲ್ಲಿ ಪ್ರತಿಕ್ಷಣವೂ ಆತಂಕದ ಪರಿಸ್ಥಿತಿ ಇದ್ದು, ರಾಜ್ಯ ಸರ್ಕಾರ ತ್ವರಿತವಾಗಿ ಸ್ಪಂದಿಸುವ ಕೆಲಸ ಮಾಡಬೇಕಿದೆ.

    MLA ಜತೆ ಲವ್​ ಅಫೇರ್​: ಇನ್ನೇನು ಮದ್ವೆ ಆಗಬೇಕೆನ್ನುವಷ್ಟರಲ್ಲಿ ಯುವತಿಗೆ ಕಾದಿತ್ತು ಬಿಗ್​ ಶಾಕ್​!

    ಸಚಿವೆ ವೀಣಾ ಜಾರ್ಜ್​ ಹೆಸರಲ್ಲಿ ಅಶ್ಲೀಲ ವಿಡಿಯೋ ಮಾಡಲು ಮುಂದಾದ ಕ್ರೈಂ ನಂದಕುಮಾರ್​ ಮುಖವಾಡ ಬಯಲು

    80 ಲಕ್ಷ ರೂ. ಬಂಪರ್​ ಲಾಟರಿ ಹೊಡೆದ ಕೂಡಲೇ ಹೆದರಿ ಠಾಣೆಗೆ ಓಡಿದ ಕಾರ್ಮಿಕ: ಮುಂದಾಗಿದ್ದು ರೋಚಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts