More

    ಬಿಗ್​ಬಾಸ್​ ಶೋನಲ್ಲಿ ಶೂನ್ಯ ದ್ವೇಷಿಗಳನ್ನು ಹೊಂದಿರುವ ಏಕೈಕ ಸ್ಪರ್ಧಿ ಇವರಂತೆ?!

    ಬೆಂಗಳೂರು: ಕರೊನಾ ಲಾಕ್​ಡೌನ್​ನಿಂದ ರದ್ದಾಗಿದ್ದ ಬಿಗ್​ಬಾಸ್​ 8ನೇ ಆವೃತ್ತಿಯು ಮತ್ತೆ ಶುರುವಾಗಿರುವುದು ವೀಕ್ಷಕರಿಗೆ ಖುಷಿತಂದಿದೆ. ಸ್ಪರ್ಧಿಗಳೆಲ್ಲ ಮತ್ತೆ ಮನೆ ಸೇರಿದ್ದು, ಅಸಲಿ ಆಟ ಆರಂಭವಾಗಿದೆ.

    ಶೋನಲ್ಲಿರುವ ಮಹಿಳಾ ಸ್ಪರ್ಧಿಗಳ ಬಗ್ಗೆ ಹೇಳುವುದಾದರೆ, ದಿವ್ಯಾ ಉರುಡುಗ ಮತ್ತು ವೈಷ್ಣವಿ ಮೊದಲ ಇನ್ನಿಂಗ್ಸ್​ನಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದರು. ಮನೆಯಿಂದ ಹೊರಬಂದ ನಂತರವೂ ಇಬ್ಬರು ಅಪಾರ ಗಮನವನ್ನು ಮತ್ತು ಖ್ಯಾತಿಯನ್ನು ಪಡೆದಿದ್ದು, ಅವರು ಕೂಡ ನಿರೀಕ್ಷಿಸಿರಲಿಲ್ಲ.

    ಬಿಗ್​ಬಾಸ್​ ಶೋನಲ್ಲಿ ಶೂನ್ಯ ದ್ವೇಷಿಗಳನ್ನು ಹೊಂದಿರುವ ಏಕೈಕ ಸ್ಪರ್ಧಿ ಇವರಂತೆ?!ದಿವ್ಯಾ ಉರುಡುಗ-ಅರವಿಂದ್​ ಜೋಡಿಗೆ ಪ್ರತ್ಯೇಕ ಅಭಿಮಾನಿಗಳ ಗುಂಪೇ ಇದೆ. ಇಬ್ಬರು ಒಳ್ಳೆಯ ಸ್ಪರ್ಧಿಗಳು ಎಂದು ಹೇಳಲಾಗಿತ್ತು. ಆದರೆ, ತಾಜಾ ಸುದ್ದಿಯ ಪ್ರಕಾರ ಬಿಗ್​ಬಾಸ್​ 8ರ ಅತ್ಯುತ್ತಮ ಸ್ಪರ್ಧಿ ವೈಷ್ಣವಿ ಅವರಂತೆ. ಅಲ್ಲದೆ, ಅವರೊಬ್ಬ ಸ್ವತಂತ್ರ ಅಭ್ಯರ್ಥಿ. ಅವರು ಬದಲಾಗಿಲ್ಲ. ಅವರು ಅವರಾಗಿಯೇ ಇದ್ದಾರೆ. ಆದರೆ, ಕೆಲವರು ಮುಖವಾಡ ಧರಿಸಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ಹೊಂದಿದ್ದಾರೆ.

    ಮೊದಲ ಇನ್ನಿಂಗ್ಸ್​ನಲ್ಲಿ ವೈಷ್ಣವಿಯವರು ಆಟದಲ್ಲಿ ತಮ್ಮ ಸಂಪೂರ್ಣ ತೊಡಗಿಸಿಕೊಳ್ಳದಿದ್ದರೂ ಎರಡನೇ ಇನ್ನಿಂಗ್ಸ್​ನಲ್ಲಿ ಮತ್ತೊಂದು ಅವಕಾಶ ದೊರೆತಿದ್ದು, ಈ ಬಾರಿ ಉತ್ತಮವಾಗಿ ಆಡಲಿದ್ದಾರೆ ಎಂಬುದು ಅಭಿಮಾನಿಗಳು ಅಭಿಪ್ರಾಯ. ಬಿಗ್​ಬಾಸ್​ನ ಟಾಪ್​-5 ಸ್ಪರ್ಧಿಗಳಲ್ಲಿ ವೈಷ್ಣವಿ ಸಹ ಒಬ್ಬರಾಗಿರುತ್ತಾರೆ ಎಂದು ಫ್ಯಾನ್ಸ್​ ಭವಿಷ್ಯ ನುಡಿದಿದ್ದಾರೆ.

    ವೈಷ್ಣವಿ ಅವರನ್ನು ಕೊಂಡಾಡಿರುವ ಅಭಿಮಾನಿಗಳು ಶೂನ್ಯ ದ್ವೇಷಿಗಳನ್ನು ಹೊಂದಿರುವ ಏಕೈಕ ಸ್ಪರ್ಧಿಯೆಂದರೆ ಅದು ವೈಷ್ಣವಿ ಎಂದಿದ್ದಾರೆ. ಹೀಗಾಗಿ ಅಭಿಮಾನಿಗಳು ಇಟ್ಟಿರುವ ನಿರೀಕ್ಷೆಯನ್ನು ವೈಷ್ಣವಿ ಉಳಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಬಿಗ್​ಬಾಸ್​ ಎರಡನೇ ಇನ್ನಿಂಗ್ಸ್​ ಆರಂಭದಲ್ಲೇ ಲ್ಯಾಗ್​ ಮಂಜುಗೆ ಶಾಕ್​ ಕೊಟ್ಟ ದಿವ್ಯಾ ಸುರೇಶ್​!

    ಬಿಬಿಕೆ 2ನೇ ಇನ್ನಿಂಗ್ಸ್​ನಲ್ಲಿ ಈ ಸ್ಪರ್ಧಿಯದ್ದೇ ಹವಾ ಎಂದ ನೆಟ್ಟಿಗರು: ಟ್ರೋಫಿ ಗೆಲುವುದು ಖಚಿತವಂತೆ!

    ದಿವ್ಯಾ ಉರುಡುಗರ ಕೊನೆಯ ಪ್ರೋಮೋ ನೋಡಿ ಕಲರ್ಸ್​ ಕನ್ನಡ​ ವಿರುದ್ಧ ತಿರುಗಿಬಿದ್ದ ವೈಷ್ಣವಿ ಫ್ಯಾನ್ಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts