More

    ದೇಶಾದ್ಯಂತ ಕೇವಲ 20 ಟಿಕೆಟ್​ ಮಾರಾಟ: ಕಂಗನಾರ ಧಾಕಡ್ ಚಿತ್ರದ 8ನೇ ದಿನದ ಕಲೆಕ್ಷನ್​ ಕೇಳಿದ್ರೆ ಬೆರಗಾಗ್ತೀರಾ!

    ಮುಂಬೈ: ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​ ನಟನೆಯ ಧಾಕಡ್​ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ನೆಲಕಚ್ಚಿದೆ. ಈ ವರ್ಷದ ದುರಂತ ಸಿನಿಮಾ ಎಂಬ ಹಣೆ ಪಟ್ಟಿಯನ್ನು ಹೊತ್ತುಕೊಳ್ಳುವ ಎಲ್ಲ ಸಾಧ್ಯತೆ ಇದೆ. ಏಕೆಂದರೆ, ಅದರ ಬಾಕ್ಸ್​ ಆಫೀಸ್​ ಕಲೆಕ್ಷನ್​ ನೋಡಿದರೆ ಬಾಲಿವುಡ್​ ಮಂದಿ ಆಘಾತಕ್ಕೆ ಒಳಗಾಗುವಂತಿದೆ.

    ಚಿತ್ರ ಬಿಡುಗಡೆಯಾಗಿ ಒಂದು ವಾರ ಕಳೆದಿದೆ. 8ನೇ ದಿನ ಧಾಕಡ್​ ಸಿನಿಮಾ ಗಳಿಸಿರುವ ಕೇವಲ 4,420 ರೂಪಾಯಿ ಮಾತ್ರ. ದೇಶಾದ್ಯಂತ ಕೇವಲ 20 ಟಿಕೆಟ್​ ಮಾತ್ರ ಮಾರಾಟವಾಗಿದೆ. ಬಿಡುಗಡೆಯಾದಾಗಿನಿಂದ ಈವರೆಗೂ ಸಿನಿಮಾ ಕೇವಲ 3 ಕೋಟಿ ರೂಪಾಯಿ ಮಾತ್ರ ಗಳಿಕೆ ಮಾಡಿದ್ದು, ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದೆ.

    ಢಾಕಡ್, ಹಿಂದಿ ಚಿತ್ರರಂಗದ ಅತ್ಯಂತ ದುಬಾರಿ ಮಹಿಳಾ ನಾಯಕತ್ವದ ಚಲನಚಿತ್ರವಾಗಿದೆ. ಈ ಚಿತ್ರದಿಂದಾಗ ನಷ್ಟವನ್ನು ಎಣಿಸಲು ಕುಳಿತರೆ, ಇದು ನಿರ್ಮಾಪಕರಿಗೆ ಆದ ಸಾರ್ವಕಾಲಿಕ ದೊಡ್ಡ ನಷ್ಟಗಳಲ್ಲಿ ಒಂದಾಗಿದೆ. ಈಗಾಗಲೇ ಈ ಸಿನಿಮಾವನ್ನು ಅನೇಕ ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗಿದೆ.

    ಈ ಸಿನಿಮಾವನ್ನು ಸುಮಾರು 80 ರಿಂದ 90 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ರಝ್ನೀಶ್​ ಗೈ ನಿರ್ದೇಶನ ಮಾಡಿದ್ದಾರೆ. ಕಂಗನಾ ರಣಾವತ್​ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್​ ರಾಂಪಾಲ್​, ದಿವ್ಯಾ ದತ್ತ ಮತ್ತು ಸಸ್ವತಾ ಚಟರ್ಜಿ ಧಾಕಡ್​ ಸಿನಿಮಾದಲ್ಲಿದ್ದಾರೆ. (ಏಜೆನ್ಸೀಸ್​)

    ಕೆಜಿಎಫ್​ ಬಾಬು ಮನೆ ಮೇಲೆ ಬೆಳ್ಳಂಬೆಳಗ್ಗೆ ಐಟಿ ದಾಳಿ!

    ನದಿಯಲ್ಲಿ ಬೇಸಿಗೆಯ ಬಿಸಿ ತಣಿಸುವಾಗ ದಿಢೀರ್​ ಪ್ರತ್ಯಕ್ಷವಾದ ಭಾರೀ ಗಾತ್ರದ ಹಾವು: ಮುಂದೇನಾಯ್ತು ನೀವೇ ನೋಡಿ

    ರಾತ್ರಿ ಹೊತ್ತು ನಟಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡ ಪೊಲೀಸ್​ ಅಧಿಕಾರಿಗೆ ಎದುರಾಯ್ತು ಸಂಕಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts