More

    ನೀರಿನ ಬಾಟಲಿಗೆ 5 ರೂ. ಹೆಚ್ಚುವರಿ ಬಿಲ್​: ಕೋರ್ಟ್​ ವಿಧಿಸಿದ ದಂಡದ ಮೊತ್ತ ನೋಡಿ ಹೋಟೆಲ್ ಮಾಲೀಕ ಶಾಕ್​!​

    ಹೈದರಾಬಾದ್​: ಇತ್ತೀಚೆಗೆ ಗ್ರಾಹಕರೊಬ್ಬರ ಜತೆ 5 ರೂಪಾಯಿ ವಿಚಾರಕ್ಕೆ ಗಲಾಟೆ ಮಾಡಿಕೊಂಡ ಹೈದರಾಬಾದ್​ನ ತಿಲಕ್​ ನಗರದ ಹೋಟೆಲ್​ ಒಂದಕ್ಕೆ ಗ್ರಾಹಕರ ನ್ಯಾಯಾಲಯ ಬರೋಬ್ಬರಿ 55 ಸಾವಿರ ರೂಪಾಯಿ ದಂಡ ವಿಧಿಸಿದೆ.

    ಹೈದರಾಬಾದ್​ನ ಒಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಚಿಲುಕುರಿ ವಂಶಿ ಎಂಬಾಕೆ ಇತ್ತೀಚೆಗೆ ತನ್ನ ನಾಲ್ವರು ಫ್ರೆಂಡ್ಸ್​ ಜತೆಯಲ್ಲಿ ತಿಲಕ್​ ನಗರದ ಲಕ್ಕಿ ಬಿರಿಯಾನಿ ಹೌಸ್​ಗೆ ತೆರಳಿದ್ದರು. ಊಟ ಮಾಡಿದ ಬಳಿಕ ಜಿಎಸ್​ಟಿ ಸೇರಿ 1,127 ರೂಪಾಯಿ ಬಿಲ್​ ಮಾಡಿದ್ದರು. ನೀರಿನ ಬಾಟಲ್​ಗೆ ಹೆಚ್ಚುವರಿಯಾಗಿ 5 ರೂಪಾಯಿ ಬಿಲ್​ ಮಾಡಿರುವ ವಿಚಾರ ತಿಳಿದಾಗ ವಂಶಿ ಅದನ್ನು ಪ್ರಶ್ನಿಸಿದ್ದಾರೆ. ಆದರೆ, ಸರಿಯಾಗಿ ಸ್ಪಂದಿಸಿದ ಹೋಟೆಲ್​ ಸಿಬ್ಬಂದಿ ವಂಶಿ ಜತೆ ಅನುಚಿತವಾಗಿ ನಡೆದುಕೊಂಡಿದ್ದಾರೆ.

    ಇದಾದ ಬಳಿಕ ವಂಶಿ ಹೋಟೆಲ್​ ಮ್ಯಾನೇಜ್​ಮೆಂಟ್​ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯಕ್ಕಾಗಿ ಆಗ್ರಹಿಸಿದರು. ನೀರಿನ ಬಾಟಲ್​ಗೆ ಹೆಚ್ಚುವರಿಯಾಗಿ 5.50 ರೂಪಾಯಿ ವಿಧಿಸಿದ್ದಲ್ಲದೆ ಎಲ್ಲರೆದುರು ಅವಮಾನಿಸಿದ್ದಾರೆ ಎಂದು ದೂರು ನೀಡಿದ್ದರು. ಇದಾದ ಬಳಿಕ ಜಿಲ್ಲಾ ಗ್ರಾಹಕ ಆಯೋಗದ 2ನೇ ಪೀಠದ ಮುಖ್ಯಸ್ಥ ವಕ್ಕಂತಿ ನರಸಿಂಹ ಅವರು ಈ ಪ್ರಕರಣದ ವಿಚಾರಣೆ ನಡೆಸಿದರು. ಹೋಟೆಲ್​ ಸಿಬ್ಬಂದಿ ಅಶ್ಲೀಲ ಪದ ಬಳಸಿ ನಿಂದಿಸಿ, ಗ್ರಾಹಕರಿಗೆ ಸೇವೆ ನೀಡುವಲ್ಲಿ ವಿಫಲವಾಗಿರುವುದು ಮತ್ತು ಹೆಚ್ಚುವರಿ 5.50 ರೂಪಾಯಿ ಬಿಲ್​ ಮಾಡಿರುವುದು ಸಾಬೀತಾಗಿದೆ.

    ಹೆಚ್ಚುವರಿ 5.50 ರೂಪಾಯಿಗೆ ಶೇ.10 ರಷ್ಟು ಬಡ್ಡಿ ಸೇರಿಸಿ 5000 ರೂಪಾಯಿಯನ್ನು ಗ್ರಾಹಕ ವಂಶಿಗೆ ನೀಡಲು ನ್ಯಾಯಾಲಯ ಆದೇಶಿಸಿತು. ಇಷ್ಟಕ್ಕೆ ಸುಮ್ಮನಾಗದ ನ್ಯಾಯಾಲಯ ಜಿಲ್ಲಾ ಗ್ರಾಹಕ ರಕ್ಷಣಾ ಮಂಡಳಿಯ ಕಲ್ಯಾಣಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ 50 ಸಾವಿರ ರೂಪಾಯಿ ದಂಡವನ್ನು 45 ದಿನಗಳ ಒಳಗೆ ಕಟ್ಟುವಂತೆ ಆದೇಶಿಸಿದರು. ಅಲ್ಲದೆ, ಮತ್ತೊಮ್ಮೆ ಈ ತಪ್ಪು ಮಾಡದಂತೆ ನ್ಯಾಯಾಲಯ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​)

    ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟುವುದಿಲ್ಲ: ನೋವು ತೋಡಿಕೊಂಡ ನಟಿ ರಶ್ಮಿಕಾ ಮಂದಣ್ಣ

    ಆಗಾಗ ಮಕ್ಕಳ ಲೈಂಗಿಕ ಅಪರಾಧಿಯ ಭೇಟಿ: ಬಿಲ್​ಗೇಟ್ಸ್ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಪತ್ನಿ

    ದಕ್ಷಿಣ ಕನ್ನಡ ಎಸ್​ಪಿ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದ ಎಎಸ್​ಐ ಕುಸಿದು ಬಿದ್ದು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts