More

    ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟುವುದಿಲ್ಲ: ನೋವು ತೋಡಿಕೊಂಡ ನಟಿ ರಶ್ಮಿಕಾ ಮಂದಣ್ಣ

    ನವದೆಹಲಿ: ಸ್ಯಾಂಡಲ್​ವುಡ್​ ಬ್ಯೂಟಿ ರಶ್ಮಿಕಾ ಮಂದಣ್ಣ ಅವರು ಸ್ಟಾರ್ ಹೀರೋಯಿನ್​ ಎಂಬ ಪಟ್ಟವನ್ನು ಸದ್ಯ ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ಒಳ್ಳೆಯ ಹೆಸರು ಮತ್ತು ಖ್ಯಾತಿಯ ಹೊರತಾಗಿಯೂ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲು ರಶ್ಮಿಕಾಗೆ ಇಷ್ಟವಿಲ್ಲವಂತೆ. ಅದಕ್ಕೆ ಕಾರಣವನ್ನು ರಶ್ಮಿಕಾ ನೀಡಿದ್ದು, ಅದನ್ನು ತಿಳಿಯಲು ಮುಂದೆ ಓದಿ.

    “ಆಡವಾಳು ಮೀಕು ಜೊಹ್ರಾಲು” ಹೆಸರಿನ ತೆಲುಗು ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿದ್ದು, ಶರ್ವಾನಂದ ನಾಯಕರಾಗಿದ್ದಾರೆ. ಚಿತ್ರದ ಪ್ರಚಾರದ ಭಾಗವಾಗಿ ನಡೆದ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ರಶ್ಮಿಕಾ, ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲು ಇಷ್ಟಪಡುವುದಿಲ್ಲ. ಬದಲಾಗಿ ಗಂಡು ಮಗುವಾಗಿ ಜನಿಸಲು ಇಚ್ಛಿಸುತ್ತೇನೆ ಎಂದಿದ್ದಾರೆ.

    ಆಡವಾಳು ಮೀಕು ಜೊಹ್ರಾಲು ಸಿನಿಮಾದಲ್ಲಿ ಓರ್ವ ಮದುಮಗಳಾಗಿ ಹೆಣ್ಣು ಮಗಳು ಎದುರಿಸುವ ಸವಾಲುಗಳನ್ನು ತೋರಿಸಲಾಗಿದೆ. ನಮಗೆ ಇಷ್ಟವೋ? ಇಲ್ಲವೋ? ಹುಡುಗರಿಗೆ ಇಷ್ಟವಾಗುವ ರೀತಿಯಲ್ಲಿ ಬಟ್ಟೆ ಧರಿಸಬೇಕು, ಹುಡುಗರ ಸಂಬಂಧಿಕರ ಮುಂದೆ ನಾವು ತಲೆ ಬಾಗಬೇಕಿದೆ. ಈ ಸಂಕಟವನ್ನು ನೋಡಿ ನಾನು ಮುಂದಿನ ಜನ್ಮದಲ್ಲಾದರೂ ಹೆಣ್ಣಾಗಿ ಹುಟ್ಟಬಾರದು ಎಂದು ಬಯಸಿದ್ದೇನೆ. ಏಕೆಂದರೆ, ಗಂಡು ಮಕ್ಕಳು ಕಾಲು ಮೇಲೆ ಕಾಲು ಹಾಕಿಕೊಂಡು ಬೇಕಾದ ಪ್ರಶ್ನೆಗಳನ್ನು ಕೇಳುತ್ತಾರೆ. ಎಲ್ಲವು ಅವರ ಇಚ್ಛೆಯಂತೆ ನಡೆಯುತ್ತದೆ ಎಂದರು. ಇದೇ ವೇಳೆ ಯಾವ ರೀತಿಯ ಹುಡುಗ ಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, ಮದುವೆ ಆಗುವ ಬಗ್ಗೆ ಯೋಚನೆ ಮಾಡಿಲ್ಲ ಎಂದು ಹೇಳಿದರು.

    ಅಂದಹಾಗೆ ಆಡವಾಳು ಮೀಕು ಜೊಹ್ರಾಲು ಸಿನಿಮಾವನ್ನು ತಿರುಮಲ ಕಿಶೋರ್​ ನಿರ್ದೇಶನ ಮಾಡಿದ್ದಾರೆ. ಚಿತ್ರವು ಮಾರ್ಚ್​ 4ರಂದು ಬಿಡುಗಡೆಯಾಗಿದೆ. ಹಿರಿಯ ನಟಿಯರಾದ ಖುಷ್ಬೂ, ರಾಧಿಕಾ ಶರತ್​ಕುಮಾರ್​, ಊರ್ವಶಿ ಮುಂತಾದವರ ಬಹು ತಾರಾಗಣವೇ ಇದೆ. (ಏಜೆನ್ಸೀಸ್​)

    ಆಗಾಗ ಮಕ್ಕಳ ಲೈಂಗಿಕ ಅಪರಾಧಿಯ ಭೇಟಿ: ಬಿಲ್​ಗೇಟ್ಸ್ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಪತ್ನಿ

    ಕಾಲೇಜಿನಲ್ಲಿ ಡಿಬಾರ್ ಮಾಡಿದ್ದಕ್ಕೆ ಲೇಡಿಸ್​ ಪಿಜಿಯ 5ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ದುರಂತ ಸಾವು

    ರಾಧೆ ಶ್ಯಾಮ್​ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಜತೆ ಕಿಸ್ಸಿಂಗ್​ ಸೀನ್​: ಅಚ್ಚರಿಯ ಹೇಳಿಕೆ ನೀಡಿದ ನಟ ಪ್ರಭಾಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts