More

    ಮಿಸ್ಟರ್ ಕಬಿನಿ ಆನೆ ಸಾವು: ಎಲ್ಲರ ಗಮನ ಸೆಳೆದಿದ್ದ ಉದ್ದ ಕೊಂಬಿನ ಭೋಗೇಶ್ವರ ಗಜ

    | ಗುರುಪ್ರಸಾದ್ ತುಂಬಸೋಗೆ

    ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗುಂಡ್ರೆ ವಲಯದಲ್ಲಿ ಉದ್ದ ಕೊಂಬಿನ ಆನೆಯೊಂದು ಮೃತಪಟ್ಟಿದ್ದು, ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಎಲ್ಲರ ಆಕರ್ಷಣೆಯಾಗಿದ್ದ ಮಿಸ್ಟರ್ ಕಬಿನಿ(ಭೋಗೇಶ್ವರ) ಆನೆಯೇ ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ.

    ಮಿಸ್ಟರ್ ಕಬಿನಿ ಆನೆ ಸಾವು: ಎಲ್ಲರ ಗಮನ ಸೆಳೆದಿದ್ದ ಉದ್ದ ಕೊಂಬಿನ ಭೋಗೇಶ್ವರ ಗಜ

    ಎರಡು, ಮೂರು ದಿನಗಳ ಹಿಂದೆ ಗುಂಡ್ರೆ ವಲಯ ವ್ಯಾಪ್ತಿಯಲ್ಲಿ ಆನೆಯು ಸಹಜವಾಗಿ ಮೃತಪಟ್ಟಿದ್ದು, ಉದ್ದವಾದ ದಂತಗಳನ್ನು ಹೊಂದಿದೆ. ಬಲಕೊಂಬಿನ ಮೇಲೆ ಎಡ ಕೊಂಬು ಬಂದಿದ್ದು, ಆನೆಗೆ 55 ರಿಂದ 60 ವರ್ಷಗಳಾಗಿರಬಹುದು ಎಂದು ತಿಳಿದುಬಂದಿದೆ. ಕಬಿನಿ ಹಿನ್ನೀರು ಭಾಗದಲ್ಲಿ ವಯಸ್ಸಾದ ಮೂರ‌್ನಾಲ್ಕು ಆನೆಗಳು ಇರುವುದರಿಂದ ಇದು ಮಿಸ್ಟರ್ ಕಬಿನಿ(ಭೋಗೇಶ್ವರ) ಆನೆಯೇ ಎಂಬುದನ್ನು ಅರಣ್ಯಾಧಿಕಾರಿಗಳು ಖಚಿತಪಡಿಸಿಲ್ಲ. ಇತ್ತೀಚಿನ ಆದೇಶದಂತೆ ಆನೆಯ ಕಳೇಬರವನ್ನು ಸಂಸ್ಕಾರ ಮಾಡದೆ ಹಾಗೆ ಬಿಟ್ಟಿದ್ಧಾರೆ ಎಂದು ಅರಣ್ಯ ಇಖಾಲೆಯ ಮೂಲಗಳು ತಿಳಿಸಿವೆ.

    ’ಗಜ’ಗಾಂಭೀರ್ಯ, ಭಿನ್ನ ಹಾವಭಾವ: ಕಬಿನಿ ಹಿನೀರು ಪ್ರದೇಶದ ವ್ಯಾಪ್ತಿಯಲ್ಲಿರುವ ಬರುವ ಬಂಡೀಪುರದ ರಾಷ್ಟ್ರೀಯ ಉದ್ಯಾನವನದ ಗುಂಡ್ರೆ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾವವನದ ಅಂತರಸಂತೆ ಮತ್ತು ಡಿ.ಬಿ.ಕುಪ್ಪೆ ವಲಯ ವ್ಯಾಪ್ತಿಯಲ್ಲಿ ಗಜ ಗಾಂಭೀರ್ಯದಿಂದ ರಾಜನಂತೆ ತಿರುಗಾಡುತ್ತಿತ್ತು. ಆನೆಗಳ ಹಿಂಡಿನಲ್ಲಿ ತನ್ನ ಬಲಿಷ್ಠ ದಂತ ಮತ್ತು ಭಿನ್ನ ನಡಿಗೆ ಶೈಲಿಯ ಮೂಲಕವೇ ಇತರ ಆನೆಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿತ್ತು. 7 ರಿಂದ 8 ಅಡಿಗಿಂತಲೂ ಹೆಚ್ಚು ಉದ್ದವಿರುವ ದಂತಗಳು ನಡೆದಾಡುವಾಗ ನೆಲಕ್ಕೆ ತಾಕುತ್ತಿತ್ತು. ಎರಡೂ ಕೊಂಬುಗಳು ಒಂದಕ್ಕೊಂದು ಕೂಡಿಕೊಂಡಿದ್ದು ಆನೆಯ ಹಿರಿತನಕ್ಕೆ ಸಾಕ್ಷಿಯಾಗಿದೆ.

    ಮಿಸ್ಟರ್ ಕಬಿನಿ ಆನೆ ಸಾವು: ಎಲ್ಲರ ಗಮನ ಸೆಳೆದಿದ್ದ ಉದ್ದ ಕೊಂಬಿನ ಭೋಗೇಶ್ವರ ಗಜ

    ಸ್ಥಳೀಯರು ಕಾಡಿನ ಭಾಗದಲ್ಲಿರುವ ದೇವರ ಹೆಸರಾದ ಭೋಗೇಶ್ವರ ಎಂಬ ಹೆಸರನ್ನು ಇಟ್ಟಿದ್ದರು. ಸಫಾರಿಗೆ ಹೋದವರೆಲ್ಲ ಇದನ್ನು ನೋಡಿ ಸಂತೋಷಪಟ್ಟು ವನ್ಯಜೀವಿ ಪ್ರೇಮಿಗಳೆಲ್ಲ ಮಿಸ್ಟರ್ ಕಬಿನಿ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಸೋಷಿಯಲ್ ಮೀಡಿಯಾಲ್ಲಿ ಇದರ ಗಜಗಾಂಭೀರ್ಯದ ಫೋಟೋಗಳು, ವಿಡಿಯೋಗಳು ಹೆಚ್ಚು ಸಂಖ್ಯೆಯಲ್ಲಿ ಶೇರ್ ಆಗಿದ್ದು, ಕೋಟ್ಯಂತರ ವೀವ್ಸ್ ಕಂಡಿವೆ.

    ಅರಣ್ಯ ಇಲಾಖೆಯಲ್ಲಿ ಯಾವುದೇ ಪ್ರಾಣಿಗೆ ಹೆಸರಿಡುವ ವ್ಯವಸ್ಥೆ ಇಲ್ಲ. ಅದು ವನ್ಯಜೀವಿ ಛಾಯಾಗ್ರಾಹಕರು ಪ್ರೀತಿಯಿಂದ ಇಟ್ಟಿರುವ ಹೆಸರು. ಮೃತಪಟ್ಟಿರುವ ಆನೆಯು ಹಿರಿಯದಾಗಿದ್ದು, ಕಬಿನಿ ಹಿನ್ನೀರು ಪ್ರದೇಶದಲ್ಲಿ ವಯಸ್ಸಾದ ಮೂರ್ನಾಲ್ಕು ಆನೆಗಳಿರುವುದರಿಂದ ಆ ಆನೆಯೇ ಎಂದು ಹೇಳಲಾಗುವುದಿಲ್ಲ.

    | ನವೀನ್, ಎಸಿಎಫ್, ಹೆಡಿಯಾಲ

    ಪ್ರತಿನಿತ್ಯ 3 ಕೆಜಿ ಅನ್ನ, 4 ಕೆಜಿ ರೊಟ್ಟಿ, 3.5 ಕೆಜಿ ಮಾಂಸ ತಿನ್ನುವ ಇಬ್ಬರು ಹೆಂಡಿರ ಗಂಡನ ಕಣ್ಣೀರ ಕತೆಯಿದು!

    ಎಲ್ಲೋ ಕೂತ್ಕೊಂಡು ಮಾತಾಡೋದಲ್ಲ ತಾಕತ್ತಿದ್ರೆ ಬನ್ನಿ: ಮಾಜಿ ಸಿಎಂ ಎಚ್​ಡಿಕೆಗೆ ಶ್ರೀನಿವಾಸ್​ ಬೆಂಬಲಿಗರ ಸವಾಲು

    ಚಪ್ಪಲಿ ವಿವಾದದ ಬಳಿಕ ನಯನತಾರಾಗೆ ಮತ್ತೊಂದು ಬಿಗ್​ ಶಾಕ್​: ಇನ್ನೊಂದು ಮಿಸ್ಟೇಕ್​ CCTVಯಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts