More

    2019ರ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಜೆಎನ್​ಯು ವಿದ್ಯಾರ್ಥಿಗಿಲ್ಲ ಬಿಡುಗಡೆಯ ಭಾಗ್ಯ!

    ನವದೆಹಲಿ: 2019ರ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್​ಯು)ದ ವಿದ್ಯಾರ್ಥಿ ಶಾರ್ಜಿಲ್​ ಇಮಾಮ್​ಗೆ ದೆಹಲಿ ಕೋರ್ಟ್​ ಶುಕ್ರವಾರ ಜಾಮೀನು ನೀಡಿದೆ.

    ಶಾರ್ಜಿಲ್​ ನೀಡಿದ ಪ್ರಚೋದನಕಾರಿ ಭಾಷಣವೇ 2019 ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಜಾಮಿಯಾ ನಗರ ಪ್ರದೇಶದಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣ ಎಂಬ ಆರೋಪದಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿತ್ತು.

    ಇದೀಗ ಶಾರ್ಜಿಲ್​ ಜಾಮೀನು ದೊರೆತಿದ್ದರೂ, ಅವರ ವಿರುದ್ಧ ಬಾಕಿ ಉಳಿದಿರುವ ಇತರ ಪ್ರಕರಣಗಳಲ್ಲಿ ಜಾಮೀನು ಪಡೆಯದ ಕಾರಣ ಬಂಧನದಲ್ಲಿಯೇ ಮುಂದುವರಿಯಲಿದ್ದಾರೆ. ಸದ್ಯ ಎನ್​ಎಫ್​ಸಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಎಫ್​ಐಆರ್​ಗೆ ದೆಹಲಿಯ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಅನುಜ್​ ಅಗರ್ವಾಲ್​ ಅವರು ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

    ಎಫ್‌ಐಆರ್‌ ದಾಖಲಾದ ಬಳಿಕ 31 ತಿಂಗಳ ಕಾಲ ಕಸ್ಟಡಿಯಲ್ಲಿ ಉಳಿದಿರುವ ಕಾರಣಕ್ಕಾಗಿ ಸೆಕ್ಷನ್ 436-ಎ ಸಿಆರ್‌ಪಿಸಿ ಅಡಿಯಲ್ಲಿ ಪರಿಹಾರ ಕೋರಿ ಇಮಾಮ್ ಅರ್ಜಿ ಸಲ್ಲಿಸಿದ್ದರು. ಅವರ ಮನವಿಯನ್ನು ಪರಿಗಣಿಸುವಂತೆ ದೆಹಲಿ ಹೈಕೋರ್ಟ್ ವಿಚಾರಣಾ ನ್ಯಾಯಾಲಯವನ್ನು ಕೇಳಿದ ನಂತರ ಈ ಬೆಳವಣಿಗೆ ನಡೆದಿದೆ.

    2019ರ ಡಿಸೆಂಬರ್ 15ರಂದು ಜಾಮಿಯಾ ನಗರದ ವಿದ್ಯಾರ್ಥಿಗಳು ಮತ್ತು ನಿವಾಸಿಗಳು ಪೌರತ್ವ ತಿದ್ದುಪಡಿ ಮಸೂದೆಯ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ಹಿಂಸೆಗೆ ತಿರುಗಿತ್ತು. ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ಗುಂಪೊಂದು ಕಲ್ಲು, ಇಟ್ಟಿಗೆ, ದೊಣ್ಣೆಗಳಿಂದ ಸಾರ್ವಜನಿಕ ಮತ್ತು ಖಾಸಗಿ ವಾಹನಗಳು ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿತ್ತು. ಅದೇ ವರ್ಷ ಡಿಸೆಂಬರ್ 13 ರಂದು ಶಾರ್ಜಿಲ್​ ಇಮಾಮ್ ಮಾಡಿದ ಭಾಷಣದಿಂದ ಗಲಭೆಕೋರರು ಪ್ರಚೋದಿಸಲ್ಪಟ್ಟರು ಮತ್ತು ನಂತರ ಹಿಂಸಾಚಾರ ನಡೆಯಿತು ಎಂಬ ಆರೋಪದ ಅಡಿಯಲ್ಲಿ ಎಫ್​ಐಆರ್​ ದಾಖಲಾಗಿತ್ತು. (ಏಜೆನ್ಸೀಸ್​)

    ಬಿಬಿಎಂಪಿ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್​: ಹೈಕೋರ್ಟ್​ ನೀಡಿದೆ ಈ ಗಡುವು….

    ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಶುರು: ಸಿದ್ದು- ಡಿಕೆಶಿ ಕೈ ಹಿಡಿದು ನಗಾರಿ ಬಾರಿಸಿದ ರಾಹುಲ್ ಗಾಂಧಿ

    VIDEO: ಮಾತಿನ ಭರದಲ್ಲಿ ಪ್ರಧಾನಿ ಮೋದಿಗೇ ಸವಾಲ್​ ಹಾಕಿದ ಬಿಜೆಪಿ ನಾಯಕಿ! ರಾಜಕೀಯ ಸಂಚಲನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts