More

    ಬಿಬಿಎಂಪಿ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್​: ಹೈಕೋರ್ಟ್​ ನೀಡಿದೆ ಈ ಗಡುವು….

    ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು ಡಿಸೆಂಬರ್​ 31ರ ಒಳಗೆ ನಡೆಸುವಂತೆ ಹೈಕೋರ್ಟ್​ ಸರ್ಕಾರಕ್ಕೆ ನಿರ್ದೇಶಿಸಿದೆ. ಈ ಮೂಲಕ ಚುನಾವಣೆಗೆ ಸಂಬಂಧಿಸಿದಂತೆ ಇದ್ದ ಜಟಾಪಟಿಗೆ ತೆರೆ ಬಿದ್ದಿದೆ.

    ನ.3ರ ಒಳಗೆ ಮೀಸಲಾತಿ ಪಟ್ಟಿಯನ್ನು ಸರಿಪಡಿಸಿ ಮಾಡಿ ನಂತರ ಒಂದು ತಿಂಗಳ ಒಳಗೆ ಚುನಾವಣೆ ನಡೆಸುವಂತೆ ನ್ಯಾಯಮೂರ್ತಿಗಳು ಸರ್ಕಾರಕ್ಕೆ ಖಡಕ್​ ಸೂಚನೆ ನೀಡಿದ್ದಾರೆ.

    ಇದಾಗಲೇ ಹೈಕೋರ್ಟ್​ ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆ ಪ್ರಶ್ನಿಸಿದ್ದ ಎಲ್ಲಾ ಅರ್ಜಿಗಳನ್ನು ವಜಾ ಮಾಡಿತ್ತು. ಶಾಸಕ ಜಮೀರ್ ಅಹಮ್ಮದ್ ಖಾನ್, ಸತೀಶ್ ರೆಡ್ಡಿ, ಸೌಮ್ಯಾ ರೆಡ್ಡಿ ಸೇರಿದಂತೆ 10ಕ್ಕೂ ಅಧಿಕ ಮಂದಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಲಾಗಿತ್ತು. ಇದರ ನಡುವೆಯೇ. ಬಿಬಿಎಂಪಿಯ ಚುನಾವಣೆಯನ್ನು ಶೀಘ್ರದಲ್ಲಿ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಅದರ ನಿರ್ದೇಶನದಂತೆಯೇ ನಡೆದುಕೊಳ್ಳಲಾಗುವುದು ಎಂದು ಸರ್ಕಾರ ಕೂಡ ತಿಳಿಸಿತ್ತು.

    ಈ ಅಂಶಗಳನ್ನು ಪರಿಗಣಿಸಿದ ನ್ಯಾಯಮೂರ್ತಿಗಳು ಯಾವುದೇ ಕಾರಣಕ್ಕೆ ಚುನಾವಣೆ ವಿಳಂಬ ಮಾಡದಂತೆ ನಿರ್ದೇಶಿಸಿದ್ದಾರೆ.

    ಅಂದಹಾಗೆ, ಬಿಬಿಎಂಪಿ ಚುನಾವಣೆ 2022ರ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಪಾಲಿಕೆಯ 243 ವಾರ್ಡ್ ಗಳಲ್ಲಿ ಒಟ್ಟು 79 ಲಕ್ಷ 19 ಸಾವಿರದ 563 ಮತದಾರರು ಇದ್ದಾರೆ. ಇದರಲ್ಲಿ 41 ಲಕ್ಷ14 ಸಾವಿರ 383 ಪುರುಷರು, 38 ಲಕ್ಷ 03 ಸಾವಿರದ 747 ಮಹಿಳೆಯರು ಹಾಗೂ 1433 ಇತರೆ ಮತದಾರರು ಇದ್ದಾರೆ ಎಂದು ಬಿಬಿಎಂಪಿ ಹೇಳಿದೆ. (ಏಜೆನ್ಸೀಸ್​)

    VIDEO: ಮಾತಿನ ಭರದಲ್ಲಿ ಪ್ರಧಾನಿ ಮೋದಿಗೇ ಸವಾಲ್​ ಹಾಕಿದ ಬಿಜೆಪಿ ನಾಯಕಿ! ರಾಜಕೀಯ ಸಂಚಲನ

    ಸೂಪರ್​ಫಾಸ್ಟ್​ ‘ವಂದೇ ಭಾರತ್’​ ರೈಲಿಗೆ ಪ್ರಧಾನಿ ಮೋದಿ ಚಾಲನೆ: ಏನಿದರ ವಿಶೇಷತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts