More

    ಸೂಪರ್​ಫಾಸ್ಟ್​ ‘ವಂದೇ ಭಾರತ್’​ ರೈಲಿಗೆ ಪ್ರಧಾನಿ ಮೋದಿ ಚಾಲನೆ: ಏನಿದರ ವಿಶೇಷತೆ?

    ಗಾಂಧಿನಗರ (ಗುಜರಾತ್): ಮುಂಬೈ ಸೆಂಟ್ರಲ್ ಮತ್ತು ಗಾಂಧಿನಗರ ನಿಲ್ದಾಣಗಳ ನಡುವೆ ಸಂಚರಿಸುವ ಹೈಸ್ಪೀಡ್​ ‘ವಂದೇ ಭಾರತ್​ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದರು.

    ಗಾಂಧಿನಗರ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ರೈಲಿಗೆ ಚಾಲನೆ ನೀಡಿ ಪ್ರಧಾನಿ ಮೋದಿ, ಅದೇ ರೈಲಿನಲ್ಲಿ ಕಲುಪುರ್ ರೈಲು ನಿಲ್ದಾಣದವರೆಗೆ ಪ್ರಯಾಣ ಬೆಳೆಸುತ್ತಿದ್ದಾರೆ ಎಂಬುದು ವಿಶೇಷ. ರೈಲಿನ ಸಿಬ್ಬಂದಿ ಪ್ರಧಾನಿ ಮೋದಿಯವರಿಗೆ ಈ ಪಯಣದಲ್ಲಿ ಸಾಥ್​ ನೀಡಿದರು. ಈ ರೈಲು ಮುಂಬೈ ಸೆಂಟ್ರಲ್ ಮತ್ತು ಗಾಂಧಿನಗರ ನಿಲ್ದಾಣಗಳ ನಡುವೆ ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ.

    ಸೂಪರ್​ಫಾಸ್ಟ್​ 'ವಂದೇ ಭಾರತ್'​ ರೈಲಿಗೆ ಪ್ರಧಾನಿ ಮೋದಿ ಚಾಲನೆ: ಏನಿದರ ವಿಶೇಷತೆ?

    ರೈಲು ಎ,ಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಕಂಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ. ಸ್ಲೈಡಿಂಗ್ ಡೋರ್ಸ್, ಪ್ರತ್ಯೇಕ ಲೈಟ್ ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು, ಅಟೆಂಡೆಂಟ್ ಕಾಲ್ ಬಟನ್‌ಗಳು, ಬಯೋ-ಟಾಯ್ಲೆಟ್‌ಗಳು, ಸ್ವಯಂಚಾಲಿತ ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳು, ಸಿಸಿಟಿವಿ ಕ್ಯಾಮೆರಾಗಳು, ಒರಗಿಕೊಳ್ಳುವ ಸೌಲಭ್ಯ ಮತ್ತು ಆರಾಮದಾಯಕ ಆಸನಗಳಂತಹ ಸೌಲಭ್ಯಗಳನ್ನು ಒಳಗೊಂಡಿದೆ. ಎಲ್ಲಾ ಕೋಚ್‌ಗಳಲ್ಲೂ ಆಟೋಮ್ಯಾಟಿಕ್ ಡೋರ್‌, ಜಿಪಿಎಸ್ ಆಧರಿತ ಆಡಿಯೋ ವಿಶ್ಯುಯಲ್ಸ್, ಉಚಿತ ವೈಫೈ ವ್ಯವಸ್ಥೆ, ಆರಾಮದಾಯಕ ಆಸನಗಳು ಮತ್ತು ಪ್ರತಿ ಆಸನಕ್ಕೂ ಪ್ರತ್ಯೇಕ ಬೆಳಕನಿನ ವ್ಯವಸ್ಥೆ, ಬಯೋ ವ್ಯಾಕ್ಯೂಮ್ ಶೌಚ ಗೃಹಗಳು ಹೀಗೆ ವಂದೇ ಭಾರತ್‌ ರೈಲು ಹತ್ತು ಹಲವು ವಿಶೇಷತೆಗಳಿಂದ ಕೂಡಿದೆ.

    ಫೆಬ್ರುವರಿ 15, 2019ರಂದು ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ನವದೆಹಲಿ-ಕಾನ್ಪುರ- ಅಲಹಾಬಾದ್ -ವಾರಣಾಸಿ ಮಾರ್ಗದಲ್ಲಿ ಈ ರೈಲು ಸಂಚರಿಸುತ್ತಿದೆ. ಮೇಕ್ ಇನ್ ಇಂಡಿಯಾ ಘೋಷ ವಾಕ್ಯದಡಿ ಈ ಸ್ವದೇಶಿ ತಂತ್ರಜ್ಞಾನದ ರೈಲು ನಿರ್ಮಾಣ ಯೋಜನೆ ಚಾಲನೆಯಲ್ಲಿದೆ.

    ವಂದೇ ಭಾರತ್​ ಸಂಚಾರ ಸಮಯ ಹೀಗಿದೆ:

    ಈ ರೈಲು ಮುಂಬೈ ಸೆಂಟ್ರಲ್‌ನಿಂದ ಬೆಳಗ್ಗೆ 6.10ಕ್ಕೆ ಹೊರಟು ಮಧ್ಯಾಹ್ನ 12.30ಕ್ಕೆ ಗಾಂಧಿನಗರ ತಲುಪಲಿದೆ. ಗಾಂಧಿನಗರದಿಂದ ಮಧ್ಯಾಹ್ನ 2.05ಕ್ಕೆ ಹೊರಟು ರಾತ್ರಿ 8.35ಕ್ಕೆ ಮುಂಬೈ ಸೆಂಟ್ರಲ್ ತಲುಪಲಿದೆ. ಇದು ಸೂರತ್, ವಡೋದರಾ ಮತ್ತು ಅಹಮದಾಬಾದ್ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲುತ್ತದೆ. ಇನ್ನು ಶತಾಬ್ದಿ ಎಕ್ಸ್‌ಪ್ರೆಸ್ ಈಗ ಮುಂಬೈ ಸೆಂಟ್ರಲ್‌ನಿಂದ 06.10ಕ್ಕೆ ಬದಲಾಗಿ 06.20ಕ್ಕೆ ಹೊರಡಲಿದೆ. ಮಧ್ಯಾಹ್ನ 12.25ಕ್ಕೆ ಬದಲಾಗಿ 12.45ಕ್ಕೆ ಅಹಮದಾಬಾದ್ ತಲುಪಲಿದೆ. (ಏಜೆನ್ಸೀಸ್​)

    VIDEO: ಅಣ್ಣಾ… ಕೈ ಬಿಡ್ಬೇಡಿ, ಸತ್ತೋಗ್ತೇನೆ… ರೈಲು ಎಂದರೆ ಕನಸಲ್ಲೂ ಕಳ್ಳ ಬೆಚ್ಚಿಬೀಳುವಂತೆ ಮಾಡಿದ ಪ್ರಯಾಣಿಕರು!

    ರಾಜಸ್ಥಾನ ಬಿಕ್ಕಟ್ಟು ಅಂತ್ಯ: ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಗೆಹ್ಲೋಟ್​ ಬೈ ಬೈ- ಶಶಿ, ಸಿಂಗ್​ ನಡುವೆ ಫೈಟ್

    ಬಾರ್​ಗರ್ಲ್​ಗೆ 80 ಲಕ್ಷ ರೂ. ಕೊಟ್ಟು ರೇಪ್​ ಕೇಸ್​ನಿಂದ ಕೈತೊಳೆದುಕೊಂಡ ಸಚಿವನ ಪುತ್ರ! ಕೋರ್ಟ್​ ಅಸ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts