More

    VIDEO: ಮಾತಿನ ಭರದಲ್ಲಿ ಪ್ರಧಾನಿ ಮೋದಿಗೇ ಸವಾಲ್​ ಹಾಕಿದ ಬಿಜೆಪಿ ನಾಯಕಿ! ರಾಜಕೀಯ ಸಂಚಲನ

    ಮುಂಬೈ: ‘ನಾನು ವಂಶಪಾರಂಪರಿಕ ರಾಜಕೀಯದ ಪ್ರತೀಕ. ನಾನು ಜನರ ಹೃದಯದಲ್ಲಿ ಆಡಳಿತ ನಡೆಸಲು ಬಯಸಿದರೆ ಪ್ರಧಾನಿ ನರೇಂದ್ರ ಮೋದಿಗೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ, ಮೋದಿ ಅವರೂ ನನ್ನ ರಾಜಕೀಯ ಭವಿಷ್ಯವನ್ನು ಮುಗಿಸಲು ಸಾಧ್ಯವಿಲ್ಲ’ ಎಂದು ಬಿಜೆಪಿ ಕಾರ್ಯದರ್ಶಿ ಮತ್ತು ಮಹಾರಾಷ್ಟ್ರ ಮಾಜಿ ಸಚಿವೆ ಪಂಕಜಾ ಮುಂಡೆ ಹೇಳಿದ್ದು ರಾಜಕೀಯ ಸಂಚಲನ ಉಂಟುಮಾಡಿದೆ.

    ವಂಶಪಾರಂಪರ್ಯ ರಾಜಕೀಯಕ್ಕೆ ಕೊನೆ ಹಾಡಬೇಕೆಂದು ಬಯಸುತ್ತಿರುವ ಮೋದಿಗೆ ಪರೋಕ್ಷ ಸವಾಲು ಹಾಕಿದಂತೆ ಮಾತನಾಡಿದ ಪಂಕಜಾ, ‘ಕಾಂಗ್ರೆಸ್ ಪಕ್ಷದಲ್ಲಿ ರಾಜವಂಶದ ರಾಜಕೀಯವು ಚಾಲ್ತಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಗಾದರೂ ಮಾಡಿ ರಾಜವಂಶದ ಆಳ್ವಿಕೆಯನ್ನು ಕೊನೆಗೊಳಿಸಲು ಬಯಸುತ್ತಾರೆ. ನಾನು ವಂಶಪಾರಂಪರಿಕ ರಾಜಕೀಯ ಕುಟುಂಬದಿಂದ ಬಂದವಳು. ಅಂದರೆ ಪ್ರಧಾನಿಯವರು ನನ್ನಂತಹ ವಂಶಪಾರಂಪರಿಕ ರಾಜಕಾರಣಿಗಳನ್ನು ಕೊನೆಗೊಳಿಸಲು ಬಯಸುತ್ತಿದ್ದಾರೆ’ ಎಂದು ಪಂಕಜಾ ಆರೋಪಿಸಿದ್ದಾರೆ.

    ಇದೇ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ಪಂಕಜಾ, ‘ಪ್ರಧಾನಿ ಮೋದಿ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಎದುರಿಸಿದ್ದ ಎಲ್ಲ ಕಠಿಣ ಸವಾಲುಗಳನ್ನು ಗೆದ್ದಿದ್ದಾರೆ. ಶಾಲೆಯ ಸಮವಸ್ತ್ರ ಖರೀದಿ ಮಾಡಲೂ ಸಹ ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕವರಿದ್ದಾಗ ಹಣ ಇರಲಿಲ್ಲ. ಆದರೂ ಈಗ ಈ ಹಂತಕ್ಕೆ ಏರಿದ್ದಾರೆ’ ಎಂದು ಶ್ಲಾಘಿಸಿದರು.

    ಶ್ಲಾಘನೆ ಏನೇ ಇದ್ದರೂ, ಪಂಕಜಾ ಅವರ ಮಾತು ಈಗ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ ಎಬ್ಬಿಸಿತ್ತು. ಖುದ್ದು ಬಿಜೆಪಿಗೆ ಮುಜುಗರವನ್ನುಂಟುಮಾಡಿದೆ. ರಾಷ್ಟ್ರೀಯ ಬಿಜೆಪಿ ನಾಯಕಿಯೊಬ್ಬರು ಭಾಷಣದಲ್ಲಿ ಹೀಗೆ ಪ್ರಧಾನಿಯವರ ಹೆಸರನ್ನು ಉಲ್ಲೇಖಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮೋದಿಯವರು ಹೇಳಿರುವುದು ಕಾಂಗ್ರೆಸ್ಸಿಗರನ್ನು ಗುರಿಯಾಗಿಸಿಕೊಂಡು. ಆದರೆ ಬಿಜೆಪಿಯ ನಾಯಕಿ ಈ ರೀತಿ ಮಾತನಾಡಿರುವುದು ಅನುಚಿತವಾದದ್ದು ಎಂದಿದ್ದಾರೆ.

    ಅವರ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಮಾಧ್ಯಮಗಳ ವಿರುದ್ಧ ಪಂಕಜಾ ಗರಂ ಆಗಿದ್ದಾರೆ. “ಮೋದಿಜೀ ವಂಶಾಡಳಿತವನ್ನು ಕೊನೆಗಾಣಿಸಲು ಬಯಸುತ್ತಿದ್ದಾರೆ. ನಾನು ಕೂಡ ವಂಶಾಡಳಿತ ರಾಜಕಾರಣದ ಪ್ರತೀಕ. ಆದರೆ ನಾನು ನಿಮ್ಮ (ಜನರ) ಹೃದಯದಲ್ಲಿ ಇದ್ದರೆ ನನ್ನನ್ನು ಯಾರೂ ಮುಗಿಸಲು ಸಾಧ್ಯವಿಲ್ಲ, ಮೋದಿಜೀ ಕೂಡ ಎಂದು ಹೇಳಿರುವುದು ಪ್ರಧಾನಿಯವರ ವಿರುದ್ಧವಾಗಿ ಅಲ್ಲ. ಬದಲಿಗೆ ಯಾರೇ ಆಗಿರಲಿ ಜನರ ಮನಸ್ಸನ್ನು ಗೆಲ್ಲುವುದು ಮುಖ್ಯ ಎನ್ನುವುದು ನನ್ನ ಮಾತಿನ ತಾತ್ಪರ್ಯವಾಗಿತ್ತು. ಆದರೆ ಅದನ್ನು ಕೆಲವು ಮಾಧ್ಯಮದವರು ಹಾಗೂ ವಿಪಕ್ಷಗಳು ಸಂವೇದನಾಶೀಲತೆಯನ್ನು ಕಳೆದುಕೊಂಡು ಮಾತನಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ನಾನು ಈ ಕಾರ್ಯಕ್ರಮದಲ್ಲಿ ಮೋದಿಜಿ ಅವರನ್ನು ಸಾಕಷ್ಟು ಹೊಗಳಿದ್ದೇನೆ. ಅವುಗಳನ್ನು ಬಿಟ್ಟು ಈ ಮಾತನ್ನು ದೊಡ್ಡದು ಮಾಡಲಾಗುತ್ತಿದೆ ಎಂದರು. (ಏಜೆನ್ಸೀಸ್​)

    ಇಲ್ಲಿದೆ ನೋಡಿ ವಿಡಿಯೋ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts