More

    VIDEO: ಇರಾನ್​ ಬಳಿಕ ಟರ್ಕಿಯಲ್ಲೂ ಹಿಜಾಬ್​ಗೆ ಪ್ರತಿರೋಧ- ವೇದಿಕೆಯಲ್ಲಿ ಗಾಯಕಿ ಮಾಡಿದ್ದೇನು ನೋಡಿ…

    ಟೆಹರಾನ್‌: ಹಿಜಾಬ್​ ಧರಿಸುವುದು, ಕೂದಲು ಕತ್ತರಿಸುವುದು ಸೇರಿದಂತೆ ಮುಸ್ಲಿಂ ಮಹಿಳೆಯರನ್ನು ಬಂಧಿಸಿಟ್ಟಿರುವ ಕಾನೂನಿನ ವಿರುದ್ಧ ಇರಾನ್​ನಲ್ಲಿ ಎರಡು ವಾರಗಳಿಂದ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆ ಸದ್ಯ ನಿಲ್ಲುವಂತೆ ಕಾಣಿಸುತ್ತಿಲ್ಲ. ಈ ಘಟನೆಯಲ್ಲಿ 70ಕ್ಕೂ ಅಧಿಕ ಮಂದಿ ಇದಾಗಲೇ ಜೀವ ಕಳೆದುಕೊಂಡಿದ್ದಾರೆ.

    ಮಹಿಳೆಯರು ರಸ್ತೆಗಿಳಿದು ಹಿಜಾಬ್​ ಸುಡುವುದು, ಕೂದಲು ಕತ್ತರಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸದ ಕಾರಣಕ್ಕಾಗಿ ಇರಾನ್​ನಲ್ಲಿ ಕುರ್ದಿಸ್ತಾನ್ ಪ್ರಾಂತ್ಯದ ಮಹ್ಸಾ ಆಮಿನಿ ಎಂಬ 22 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿ, ವ್ಯಾನ್​ನಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಮೃತಪಟ್ಟಿದ್ದಳು. ಈ ಘಟನೆಯ ನಂತರ ಇರಾನ್​ನಲ್ಲಿ ಮಹಿಳೆಯರು ಹಿಂದೆಂದೂ ಕಾಣದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಈ ಇರಾನ್​ನ ಪ್ರತಿಭಟನೆಯ ಕಾವು ಮುಸ್ಲಿಮರೇ ಹೆಚ್ಚಾಗಿರುವ ಟರ್ಕಿಗೂ ಹರಡಿದೆ. ಸುಪ್ರಸಿದ್ಧ ಗಾಯಕಿ ಮಾಲೆಕ್‌ ಮೊಸ್ಸೋ ಎಂಬಾಕೆ ವೇದಿಕೆಯ ಮೇಲೆ ಕೂದಲು ಕತ್ತರಿಸಿಕೊಂಡು ತಾನು ಇರಾನ್​ ಮಹಿಳೆಯರಿಗೆ ಬೆಂಬಲ ಸೂಚಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

    ಮಾಲೆಕ್‌ ಮೊಸ್ಸೋ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಪ್ರದರ್ಶನದ ಸಮಯದಲ್ಲಿ ಪ್ರೇಕ್ಷಕರು ಗಾಯಕಿಯನ್ನು ಶ್ಲಾಘಿಸಿದಾಗ ಮೆಲೆಕ್ ಮೊಸ್ಸೊ ತಮ್ಮ ಕೂದಲನ್ನು ಕತ್ತರಿಸಿಕೊಂಡು ಇರಾನ್‌ ಮಹಿಳೆಯರ ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.


    ಅಂದಹಾಗೆ ಈ ಗಾಯಕಿ, ಮಾಲೆಕ್‌ ಮೊಸ್ಸೋ ಮಹಿಳಾ ಹಕ್ಕುಗಳ ಬೆಂಬಲಕ್ಕಾಗಿ ಈಗಾಗಲೇ ಅನೇಕ ಬಾರಿ ಹೋರಾಡಿದ್ದಾರೆ. 2020ರಲ್ಲಿ ಟರ್ಕಿಯಲ್ಲಿ ಅತ್ಯಾಚಾರಿ ಪೊಲೀಸ್ ಅಧಿಕಾರಿಯ ಬಿಡುಗಡೆ ಕುರಿತು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಗಾಯಕಿಯನ್ನು ವೇದಿಕೆಯಿಂದ ಕೆಳಗಿಳಿಸಲಾಗಿತ್ತು. ಇದೀಗ ಇರಾನಿ ಮಹಿಳೆಯರಿಗೆ ಈಕೆ ಬೆಂಬಲ ಸೂಚಿಸಿದ್ದಾರೆ. ಈಕೆಯ ಮಾತಿಗೆ ಅಸಂಖ್ಯ ಜನರು ಬೆಂಬಲ ಕೂಡ ಸೂಚಿಸಿದ್ದಾರೆ (ಏಜೆನ್ಸೀಸ್​)

    ಇಲ್ಲಿದೆ ನೋಡಿ ವಿಡಿಯೋ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts