More

    ದಕ್ಷಿಣ ಭಾರತದ ಚಿತ್ರಗಳಲ್ಲಿ ಈವರೆಗೂ ನಟಿಸದಿರಲು ಜಾಹ್ನವಿ ಕಪೂರ್​ ಕೊಟ್ಟ ಕಾರಣ ಹೀಗಿದೆ..!

    ಮುಂಬೈ: ದಿವಂಗತ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಬಾಲಿವುಡ್​ನಲ್ಲೇ ಬಹುಬೇಡಿಕೆಯ ನಟಿಯಾಗಿದ್ದಾರೆ. ತಾಯಿಯಂತೆ ಜಾಹ್ನವಿ ಅವರಿಗೂ ವಿವಿಧ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಆಸೆ ಇದೆಯಂತೆ. ಈಗಾಗಲೇ ದಕ್ಷಿಣ ಭಾರತದ ಅನೇಕ ನಿರ್ದೇಶಕರು ಜಾಹ್ನವಿ​ ಅವರನ್ನು ಸಂಪರ್ಕಿಸಿದ್ದರೂ ಯಾವೊಂದು ಸಿನಿಮಾಗೂ ಸಹಿ ಮಾಡಿಲ್ಲ.

    ಈವರೆಗೂ ದಕ್ಷಿಣ ಭಾರತದ ಸಿನಿಮಾಗಳಿಗೆ ಸಹಿ ಹಾಕದಿರುವುದಕ್ಕೆ ಕಾರಣ ಏನೆಂಬುದನ್ನು ಕೊನೆಗೂ ಮಾಧ್ಯಮ ಸಂದರ್ಶನದಲ್ಲಿ ಜಾಹ್ನವಿ ಹೊರಗಾಕಿದ್ದಾರೆ. ಅನೇಕ ನಿರ್ದೇಶಕರು ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ, ಯಾವೊಂದು ಚಿತ್ರವು ಕೂಡ ಓ ಮೈ ಗಾಡ್​, ನಾನು ಇದನ್ನು ಮಾಡಲೇಬೇಕು ಅನಿಸುವಷ್ಟು ಇಷ್ಟವಾಗಲಿಲ್ಲ ಎಂದಿದ್ದಾರೆ.

    ಆದಾಗ್ಯೂ, ನಾನು ದಕ್ಷಿಣ ಭಾರತ ಚಿತ್ರರಂಗದ ಬಹುದೊಡ್ಡ ಅಭಿಮಾನಿ ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನನ್ನ ನೆಟ್​ಫ್ಲಿಕ್ಸ್​ ವಾಚ್​ ಹಿಸ್ಟರಿಯಲ್ಲಿ ಮಲಯಾಳಂ ಚಿತ್ರಗಳೇ ತುಂಬಿಕೊಂಡಿವೆ ಎಂದು ತಿಳಿಸಿದ್ದಾರೆ. ಅಲ್ಲದೆ, ಮಲಯಾಳಂ ಚಿತ್ರಗಳನ್ನು ಅನ್ವೇಷಿಸಲು ಬಯಸುತ್ತೇನೆಂದು ಜಾಹ್ನವಿ ಹೇಳಿದ್ದಾರೆ. ಅಭಿಮಾನಿಗಳೂ ಕೂ ಜಾಹ್ನವಿ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುವುದನ್ನು ಎದುರು ನೋಡುತ್ತಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಜಾಹ್ನವಿ ಪ್ರಸ್ತುತ ದೋಸ್ತಾನ 2 ಮತ್ತು ಗುಡ್​ ಲಕ್​ ಜೆರ್ರಿ ಸಿನಿಮಾದಲ್ಲಿ ನಟಿಸಿದ್ದು, ಬಿಡುಗಡೆಗಾಗಿ ಕಾಯುತ್ತಿದ್ದಾರೆ. (ಏಜೆನ್ಸೀಸ್​)

    ಶಾರುಖ್‌ರಿಂದ ದೀಪಾವಳಿ ಸಂದೇಶ ಕೊಡಿಸಿದ ಕ್ಯಾಡ್‌ಬರೀಸ್‌ಗೆ ಗ್ರಹಚಾರ- ಶುರುವಾಯ್ತು ಬೈಕಾಟ್‌ ಅಭಿಯಾನ

    ಟೀಮ್​ ಇಂಡಿಯಾ ವಿರುದ್ಧ ಗೆಲುವು: ಪಾಕ್​ ಪರ ಘೋಷಣೆ ವಿರೋಧಿಸಿದ ವಿದ್ಯಾರ್ಥಿನಿಗೆ ಬೆದರಿಕೆ ಕರೆ

    ಕೋಟ್ಯಧಿಪತಿ ಗಂಡನ ದುಡ್ಡು ದೋಚಿ ಆಟೋ ಡ್ರೈವರ್‌ ಯುವಕನ ಜತೆ ಆಂಟಿ ಎಸ್ಕೇಪ್‌: ಪತಿಯಿಂದ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts