More

    ಜಾಕ್ವೆಲಿನ್​​ ಫಸ್ಟ್​ ಲುಕ್​ ಪೋಸ್ಟರ್​ಗೆ ಅಭಿಮಾನಿಗಳು ಫಿದಾ: ವಿಕ್ರಾಂತ್​ ರೋಣನಿಗೆ ಗಡಂಗ್​ ರಕ್ಕಮ್ಮ ಸಾಥ್​!

    ಬೆಂಗಳೂರು: ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ “ವಿಕ್ರಾಂತ್​ ರೋಣ” ಸಿನಿಮಾ ಬಗ್ಗೆ ಚಿತ್ರತಂಡದಿಂದ ಸರ್ಪ್ರೈಸ್​ ಮೇಲೆ ಸರ್ಪ್ರೈಸ್​ ಹೊರ ಬೀಳುತ್ತಲೇ ಇದೆ. ಇತ್ತೀಚೆಗಷ್ಟೇ ಬಾಲಿವುಡ್​ ಬ್ಯೂಟಿ ಜಾಕ್ವೆಲಿನ್​ ಫರ್ನಾಂಡಿಸ್ ಚಿತ್ರತಂಡವನ್ನು ಸೇರಿಕೊಂಡಿದ್ದು ಭಾರಿ ಸುದ್ದಿಯಾಗಿತ್ತು, ಇದೀಗ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದ ಮತ್ತೊಂದು ಬಿಗ್​ ಸರ್ಪ್ರೈಸ್​ ಹೊರಬಿದ್ದಿದೆ.

    ಶ್ರೀಲಂಕನ್​ ಬ್ಯೂಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಚಿತ್ರದಲ್ಲಿ ಕೇವಲ ಐಟಂ ಸಾಂಗ್​ ಮಾತ್ರವಲ್ಲದೇ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂಬ ಸುದ್ದಿ ಬಹುದಿನಗಳ ಹಿಂದೆಯೇ ಹೊರಬಿದ್ದಿದೆ. ಐಟಂ ಸಾಂಗ್​ ಚಿತ್ರೀಕರಣ ಸಮಯದಲ್ಲಿ ಜಾಕ್ವೆಲಿನ್ ಅವರ ಫಸ್ಟ್​ ಲುಕ್​ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಅನೂಪ್​ ಭಂಡಾರಿ ಅವರು ಹೇಳಿದ್ದರು. ಅದರಂತೆ ಜುಲೈ 31ಕ್ಕೆ ದಿನಾಂಕ ಸಹ ನಿಗದಿಯಾಗಿತ್ತು. ಹೇಳಿದಂತೆಯೇ ಇಂದು ಜಾಕ್ವೆಲಿನ್ ಅವರ ಫಸ್ಟ್​ ಲುಕ್​ ಬಿಡುಗಡೆಯಾಗಿದೆ.

    ಚಿತ್ರದಲ್ಲಿ ಜಾಕ್ವೆಲಿನ್​ ಅವರ ಪಾತ್ರದ ಹೆಸರು “ಗಡಂಗ್​ ರಕ್ಕಮ” . ಫಸ್ಟ್​ ಲುಕ್​ ಮೋಷನ್​ ಪೋಸ್ಟರ್​ ಸಹ ಬಿಡುಗಡೆಯಾಗಿದ್ದು, ಅಜನೀಶ್ ಲೋಕನಾಥ್ ಅವರ ಬ್ಯಾಕ್​ಗ್ರೌಂಡ್​ ಮ್ಯೂಸಿಕ್​ಗೆ ಫಿದಾ ಆಗೋದು ಗ್ಯಾರೆಂಟಿ. ಪೋಸ್ಟರ್​ ಡಿಸೈನ್​ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಜಾಕ್ವೆಲಿನ್​ ಎಂಟ್ರಿಯು ಚಿತ್ರಕ್ಕೆ ಮತ್ತಷ್ಟು ಬೂಸ್ಟ್​ ನೀಡುವುದು ಖಚಿತವಾಗಿದೆ.

    ಟ್ರೆಂಡಿಂಗ್​ನಲ್ಲಿ ವಿಕ್ರಾಂತ್​ ರೋಣ
    ಜಾಕ್ವೆಲಿನ್​ ಫರ್ನಾಂಡಿಸ್​ ಅವರ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡುತ್ತಿದ್ದಂತೆ ಟ್ವಿಟರ್​ನಲ್ಲಿ ವಿಕ್ರಾಂತ್​ ರೋಣನ ಆರ್ಭಟ ಶುರುವಾರಿದೆ. #JacquelineVikrantRonaLook ಎಂಬ ಹ್ಯಾಶ್​ಟ್ಯಾಗ್​ ಟ್ವಿಟರ್​ನಲ್ಲಿ ನಂಬರ್​ 1 ಟ್ರೆಂಡಿಂಗ್​ನಲ್ಲಿದ್ದು, ಜಾಕ್ವೆಲಿನ್​ ಲುಕ್​ಗೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.

    ಚಿತ್ರವನ್ನು ರಂಗಿತರಂಗ ಖ್ಯಾತಿ ಅನೂಪ್​ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಜಾಕ್​ ಮಂಜು ಬಂಡವಾಳವನ್ನು ಹೂಡಿದ್ದಾರೆ. ಕರೊನಾ ಎರಡನೇ ಅಲೆ ಬರದೇ ಹೋಗಿದ್ದರೆ ಮುಂದಿನ ತಿಂಗಳು ಅಂದರೆ ಆಗಸ್ಟ್​ 19ರಂದು ಚಿತ್ರ ತೆರೆಕಾಣಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಇನ್ನು ಮುಚ್ಚಿರುವ ಕಾರಣ ವಿಕ್ರಾಂತ್​ ರೋಣ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts