More

    ಯುಎಸ್​ ಮಿಲಿಟರಿ ದಾಳಿಯಲ್ಲಿ ಐಸಿಸ್​ ನಾಯಕ ಅಬು ಇಬ್ರಾಹಿಂ ಅಲ್​ ಹಶಿಮಿ ಅಲ್​ ಖುರೇಶಿ ಹತ್ಯೆ

    ವಾಷಿಂಗ್ಟನ್​​: ಅಮೆರಿಕ ಸೇನೆ ನಡೆಸಿದ ಸಿರಿಯಾ ದಾಳಿಯಲ್ಲಿ ಐಸಿಸ್​ ನಾಯಕ ಅಬು ಇಬ್ರಾಹಿಂ ಅಲ್​ ಹಶಿಮಿ ಅಲ್​ ಖುರೇಶಿ ಹತ್ಯೆಯಾಗಿರುವುದಾಗಿ ವೈಟ್​ ಹೌಸ್​ ತಿಳಿಸಿದೆ. ಐಸಿಸ್​ ನಾಯಕ ಅಬು ಬಕರ್​ ಅಲ್​ ಬಾಗ್ದಾದಿ ಹತ್ಯೆಯಾದ 2019ರ ದಾಳಿಯ ನಂತರದಲ್ಲಿ ನಡೆದಿರುವ ಅತಿದೊಡ್ಡ ಕಾರ್ಯಾಚರಣೆ ಇದಾಗಿದೆ.

    ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಆಡಳಿತಾಧಿಕಾರಿಗಳ ಪ್ರಕಾರ ಹತ್ಯೆಯಾದ ಅಲ್​ ಖುರೇಶಿ ವಾಸವಿದ್ದ ಕಟ್ಟಡದತ್ತ ಅಮೆರಿಕ ಯೋಧರು ತೆರಳುತ್ತಿದ್ದಂತೆ ಖುರೇಶಿ ತನ್ನನ್ನೇ ತಾನು ಸ್ಫೋಟಿಸಿಗೊಂಡ ಎಂದು ಮಾಹಿತಿ ನೀಡಿದ್ದಾರೆ. ಸ್ಫೋಟದ ಪರಿಣಾಮ ನಾಗರಿಕರ ಸಾವು-ನೋವುಗಳು ಸಂಭವಿಸಿದ್ದು, ಅಮೆರಿಕ ಯೋಧರಿಗೆ ಏನು ಆಗಿಲ್ಲ ಎಂದು ಅಮೆರಿಕದ ಸೇನಾ ಕ್ರೇಂದ್ರ ಪೆಂಟಗಾನ್ ಮಾಹಿತಿ ನೀಡಿದೆ.

    ಕಳೆದ ರಾತ್ರಿ ನನ್ನ ನಿರ್ದೇಶನದ ಮೇರೆಗೆ, ವಾಯುವ್ಯ ಸಿರಿಯಾದಲ್ಲಿ ಯುಎಸ್ ಮಿಲಿಟರಿ ಪಡೆಗಳು ಅಮೆರಿಕನ್ನರು ಮತ್ತು ನಮ್ಮ ಮಿತ್ರರಾಷ್ಟ್ರಗಳನ್ನು ರಕ್ಷಿಸಲು ಹಾಗೂ ಜಗತ್ತನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಲು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೊಂಡವು ಎಂದು ಜೋ ಬೈಡೆನ್​ ಹೇಳಿಕೆಯನ್ನು ವೈಟ್​ ಹೌಸ್​ ಬಿಡುಗಡೆ ಮಾಡಿದೆ.

    ನಮ್ಮ ಸಶಸ್ತ್ರ ಪಡೆಗಳ ಕೌಶಲ್ಯ ಮತ್ತು ಶೌರ್ಯಕ್ಕೆ ಧನ್ಯವಾದಗಳು. ನಾವು ಐಸಿಸ್​ ನಾಯಕ ಅಬು ಇಬ್ರಾಹಿಂ ಅಲ್-ಹಶಿಮಿ ಅಲ್-ಖುರೇಷಿಯನ್ನು ಹೊಡೆದು ಹಾಕಿದ್ದೇವೆ. ಎಲ್ಲ ಅಮೆರಿಕನ್ನರು ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಮರಳಿದ್ದಾರೆಂದು ವೈಟ್​ ಹೌಸ್​ ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಖುರೇಷಿ 2019ರಲ್ಲಿ ಐಸಿಸ್ ಸಂಸ್ಥಾಪಕ ಅಬು ಬಕರ್ ಅಲ್-ಬಾಗ್ದಾದಿಯ ಮರಣದ ನಂತರ ಉತ್ತರಾಧಿಕಾರಿಯಾದರು. ಅಬು ಬಕರ್ ಅವರ ಮರಣದ ನಂತರ ಅವರಿಗೆ ಖಲೀಫ್ ಎಂದು ಹೆಸರಿಸಲಾಯಿತು. ಯುಎಸ್​ನ ರಿವಾರ್ಡ್ಸ್ ಫಾರ್ ಜಸ್ಟಿಸ್ ಕಾರ್ಯಕ್ರಮವು ಅವನ ಬಗ್ಗೆ ಮಾಹಿತಿ ನೀಡಿದರೆ 10 ಮಿಲಿಯನ್ ಡಾಲರ್​ ಬಹುಮಾನವನ್ನು ಘೋಷಣೆ ಮಾಡಿತ್ತು. (ಏಜೆನ್ಸೀಸ್​)

    ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಪಂಜಾಬ್​ ಸಿಎಂ ಚನ್ನಿ ಸೋದರಳಿಯನನ್ನು ಬಂಧಿಸಿದ ಇಡಿ

    ದಲಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಅಡ್ಡಿ: ತುಮಕೂರಲ್ಲಿ ನಡೆದ ಅಮಾನವೀಯ ಘಟನೆ

    ನಿರ್ಮಾಣ ಹಂತದ ಕಟ್ಟಡ ಕುಸಿದು ಐವರು ದುರಂತ ಸಾವು: ಸಂತಾಪ ಸೂಚಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts