More

    ದಯವಿಟ್ಟು ಅವರಂತೆ ನೀವು ಆಗಬೇಡಿ: ಆರ್​ಸಿಬಿ ಸೋತ ಬೆನ್ನಲ್ಲೇ ಮನಸ್ಸಿನ ನೋವು ಹೊರಹಾಕಿದ ಮ್ಯಾಕ್ಸ್​ವೆಲ್​

    ಶಾರ್ಜಾ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ವೈಫಲ್ಯ ಅನುಭವಿಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-14ರ ಎಲಿಮಿನೇಟರ್ ಹಂತದಲ್ಲೇ ಮುಗ್ಗರಿಸುವ ಮೂಲಕ ಸತತ 14ನೇ ಬಾರಿಯೂ ಪ್ರಶಸ್ತಿ ಜಯಿಸಲು ವಿಫಲವಾಗಿದೆ. ಈ ಮೂಲಕ ಅಸಂಖ್ಯಾತ ಅಭಿಮಾನಿಗಳ ಕನಸು ಮತ್ತೊಮ್ಮೆ ನುಚ್ಚು ನೂರಾಗಿದೆ. ಆದರೂ, ಆರ್​ಸಿಬಿ ಅಭಿಮಾನಿಗಳು ಬೇಜಾರು ಮಾಡಿಕೊಳ್ಳದೇ ಮತ್ತೆ ತಂಡದ ಬೆಂಗಾವಲಾಗಿ ನಿಂತಿದ್ದಾರೆ. ಆದರೆ, ಕೆಲವರು ಕೆಟ್ಟದಾಗಿ ಕಾಮೆಂಟ್​ ಮಾಡುತ್ತಿದ್ದು, ಅವರ ವಿರುದ್ಧ ಆರ್​ಸಿಬಿ ಆಟಗಾರ ಗ್ಲೇನ್​ ಮ್ಯಾಕ್ಸ್​ವೆಲ್​ ಅಸಮಾಧಾನ ಹೊರಹಾಕಿದ್ದಾರೆ.

    ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ 4 ವಿಕೆಟ್‌ಗಳಿಂದ ಕೋಲ್ಕತ ನೈಟ್‌ರೈಡರ್ಸ್‌ಗೆ ಶರಣಾಯಿತು. ಇದರ ಬೆನ್ನಲ್ಲೇ ಟ್ವೀಟ್​ ಮಾಡಿರುವ ಮ್ಯಾಕ್ಸ್​ವೆಲ್​, ಇದೊಂದು ಅತ್ಯುತ್ತಮ ಟೂರ್ನಿ ಆಗಿತ್ತು. ದುರಾದೃಷ್ಟವಶಾತ್​ ಟ್ರೋಫಿ ಎತ್ತಿ ಹಿಡಿಯುವ ಹೊಸ್ತಿಲಲ್ಲೇ ಎಡವಿದೆವು. ಆದರೆ, ಇಂಥಾ ಅದ್ಭುತ ಸೀಸನ್​ನಿಂದ ದೂರಾಗುವುದಿಲ್ಲ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಹರಿಯುತ್ತಿರುವ ಕೆಲವು ಕಸಗಳು ಸಂಪೂರ್ಣವಾಗಿ ಅಸಹ್ಯಕರವಾಗಿದೆ. ನಾವು ಕೂಡ ಮನುಷ್ಯರು ಪ್ರತಿದಿನ ದಿನ ನಮ್ಮ ಕೈಲಾದಷ್ಟು ನಾವು ಉತ್ತಮ ಪ್ರಯತ್ನವನ್ನೇ ನೀಡಿದ್ದೇವೆ. ಅಹಸ್ಯವನ್ನು ಹರಡುವ ಬದಲು ಯೋಗ್ಯ ವ್ಯಕ್ತಿಯಾಗಿರಲು ಪ್ರಯತ್ನಿಸಿ ಎಂದು ಮ್ಯಾಕ್ಸ್‌ವೆಲ್ ಬೇಸರ ವ್ಯಕ್ತಪಡಿಸಿದ್ದಾರೆ.

    ಇದೇ ಸಂದರ್ಭದಲ್ಲಿ ನಿಜವಾದ ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ಮ್ಯಾಕ್ಸ್​ವೆಲ್​, ಯಾವುದೇ ಸಂದರ್ಭದಲ್ಲೂ ನಮ್ಮ ಬೆನ್ನಿಗೆ ನಿಲ್ಲುವ ಅಭಿಮಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಕೆಲವರು ಸಾಮಾಜಿಕ ಜಾಲತಾಣವನ್ನು ಭಯಾನಕ ಸ್ಥಳವನ್ನಾಗಿಸಿಕೊಂಡಿದ್ದಾರೆ. ದಯವಿಟ್ಟು ಅವರಂತೆ ಆಗಬೇಡಿ ಎಂದು ಮ್ಯಾಕ್ಸ್​ವೆಲ್​ ಮನವಿ ಮಾಡಿಕೊಂಡಿದ್ದಾರೆ.

    ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಉತ್ತಮ ಆರಂಭದ ನಡುವೆಯೂ ಸುನೀಲ್ ನಾರಾಯಣ್ (21ಕ್ಕೆ 4) ಸ್ಪಿನ್ ಮೋಡಿಗೆ ದಿಢೀರ್ ಕುಸಿತ 7 ವಿಕೆಟ್‌ಗೆ 138 ರನ್ ಗಳಿಸಿತು. ಸವಾಲಿನ ಮೊತ್ತ ಪೇರಿಸುವ ಯೋಜನೆಯಲ್ಲಿದ್ದ ವಿರಾಟ್ ಕೊಹ್ಲಿ ಬಳಗಕ್ಕೆ ಸುನೀಲ್ ನಾರಾಯಣ್ ಹಾಗೂ ಲಾಕಿ ಫರ್ಗ್ಯುಸನ್ (30ಕ್ಕೆ 2) ವಿಲನ್ ಆದರು. ಪ್ರತಿಯಾಗಿ ವೇಗಿಗಳಾದ ಮೊಹಮದ್ ಸಿರಾಜ್ (19ಕ್ಕೆ 2), ಹರ್ಷಲ್ ಪಟೇಲ್ (19ಕ್ಕೆ 2) ಹಾಗೂ ಚಾಹಲ್ (16ಕ್ಕೆ 2) ಮಾರಕ ದಾಳಿ ನಡುವೆಯೂ ಕೆಕೆಆರ್ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 139 ರನ್‌ಗಳಿಸಿ ಗೆಲುವಿನ ನಗೆ ಬೀರಿತು. (ಏಜೆನ್ಸೀಸ್​)

    ಈ ಸಲವೂ ಆರ್‌ಸಿಬಿ ಕನಸು ಭಗ್ನ , ಕೆಕೆಆರ್ ಎದುರು ಮುಗ್ಗರಿಸಿದ ಬೆಂಗಳೂರು ತಂಡ

    ಡಿವೋರ್ಸ್​ ಬೆನ್ನಲ್ಲೇ ಮಾಡಿದ ಇನ್​ಸ್ಟಾಗ್ರಾಂ ಪೋಸ್ಟ್​ನಿಂದ ಭಯದಲ್ಲಿ ದಿನ ದೂಡುತ್ತಿರುವ ಸಮಂತಾರ ಡಿಸೈನರ್..!​

    ಮದುವೆ ಆಗ್ತಾನೆಂದು ನಂಬಿ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ನೀಡಿದ್ರೆ ಅದು ಅತ್ಯಾಚಾರವಲ್ಲ: ಚಾ.ನಗರ ನ್ಯಾಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts