More

    ಕೆಕೆಆರ್​ ತಂಡದ ಕೋಡ್​​ ವರ್ಡ್​ ರಹಸ್ಯ ಬಿಚ್ಚಿಟ್ಟು ತೀವ್ರ ಅಸಮಾಧಾನ ಹೊರಹಾಕಿದ ವೀರೂ!

    ನವದೆಹಲಿ: ಸೋಮವಾರ (ಏಪ್ರಿಲ್​ 26) ನಡೆದ ಐಪಿಎಲ್​ ಪಂದ್ಯದಲ್ಲಿ ಕೋಲ್ಕತ ನೈಟ್​ ರೈಡರ್ಸ್ (ಕೆಕೆಆರ್​)​, ಬಳಸಿದ ವಿವಾದಾತ್ಮಕ “ಕೋಡ್​ ವರ್ಡ್​” ತಂತ್ರದ ವಿರುದ್ಧ ಟೀಂ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ವಿರೇಂದ್ರ ಸೆಹ್ವಾಗ್​ ಅಮಸಧಾನ ಹೊರಹಾಕಿದ್ದಾರೆ.

    ಡಗೌಟ್​ನಲ್ಲಿರುವ ವಿಶ್ಲೇಶಕರು ಆಟವನ್ನು ನಿರ್ದೇಶಿಸಲು ಅನುಮತಿ ಮಾಡಿಕೊಟ್ಟರೆ, ಮೈದಾನದಲ್ಲಿ ಯಾರು ಬೇಕಾದರೂ ನಾಯಕತ್ವವನ್ನು ನಿಭಾಯಿಸಬಹುದು ಎಂದು ಸೆಹ್ವಾಗ್​ ಟೀಕಿಸಿದರು.

    ಕೆಕೆಆರ್​ ತಂಡದ ವಿಶ್ಲೇಷಕ ನ್ಯಾಥನ್​ ಲೇಮನ್​ ಅವರು 54 ಎಂದು ಬರೆದಿದ್ದ ಒಂದು ರಹಸ್ಯ ಫಲಕವನ್ನು ಎದುರಾಳಿ ಪಂಜಾಬ್​ ಕಿಂಗ್ಸ್​ ಬ್ಯಾಟಿಂಗ್​ ಮಾಡುವ ಪಂದ್ಯದ ನಡುವೆಯೇ ಡಗೌಟ್​ನಲ್ಲಿ ಹಿಡಿದುಕೊಂಡಿದ್ದರು. ಇದನ್ನು ನೋಡಿದ ಕಾಮೆಂಟೇಟರ್ಸ್​ ಮತ್ತು ಕ್ರೀಡಾಭಿಮಾನಿಗಳು ಕೋರ್ಡ್​ ವರ್ಡ್​ ಏನಿರಬಹುದು ಎಂದು ಬಿಡಿಸುವ ಪ್ರಯತ್ನ ಮಾಡಿದಾದರೂ ಯಾರಿದಂಲೂ ಅದರ ಹಿಂದಿರುವ ಅರ್ಥ ಏನೆಂಬುದನ್ನು ತಿಳಿಯಲು ಸಾಧ್ಯವಾಗಲಿಲ್ಲ.

    ಈ ಬಗ್ಗೆ ಕ್ರಿಕ್​ಬುಜ್​ ವೆಬ್​ಸೈಟ್​ ಜತೆ ಮಾತನಾಡಿರುವ ಸೆಹ್ವಾಗ್​, ಡಗೌಟ್​ ಸಹಾಯ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಇದು ನಾಯಕನ ಪಾತ್ರವನ್ನು ಹಾಳು ಮಾಡುತ್ತದೆ ಎಂದು ಟೀಕಿಸಿದ್ದಾರೆ.

    ಸೇನೆಯಲ್ಲಿ ಮಾತ್ರ ಇಂತಹ ಕೋಡ್​ ವರ್ಡ್​ಗಳನ್ನು ನಾವು ಬಳಸುತ್ತೇವೆ. ’54’ ಎಂಬುದು ಅವರ ಯೋಜನೆಯ ಹೆಸರು ಎಂದು ನಾನು ಭಾವಿಸುತ್ತೇನೆ, ಅದು ಒಂದು ನಿರ್ದಿಷ್ಟ ಬೌಲರ್ ಅನ್ನು ನಿರ್ದಿಷ್ಟ ಸಮಯದಲ್ಲಿ ಬೌಲಿಂಗ್ ಮಾಡುವ ಬಗ್ಗೆ ಆಗಿರಬಹುದು. ಮ್ಯಾನೇಜ್ಮೆಂಟ್ ಮತ್ತು ತರಬೇತುದಾರರು ಡಗೌಟ್​ನಿಂದ ನಾಯಕನಿಗೆ ನೀಡಲು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಈ ರೀತಿ ಹೊರಗಡೆಯಿಂದ ನಿರ್ದೇಶಿಸಿದರೆ, ಯಾರು ಬೇಕಾದರು ನಾಯಕರಾಗಬಹುದಲ್ಲವೇ? ವಿಶ್ವಕಪ್​ ಗೆಲ್ಲಿಸಿಕೊಟ್ಟ ನಾಯಕ ಇಯಾನ್​ ಮೊರ್ಗಾನ್​ ಪಾತ್ರ ಏನು ಇಲ್ಲ ಎಂಬಂತಾಗುತ್ತದೆ ಎಂದು ಜರಿದರು.

    ಹೀಗಾಗಿ ಈ ರೀತಿಯ ಕೋರ್ಡ್​ ವರ್ಡ್​ ಉಪಯೋಗಿಸಲು ಬಿಡಬಾರದು. ಮೈದಾನದಲ್ಲಿ ಎಲ್ಲವನ್ನು ನಾಯಕನೆ ನಿರ್ಧರಿಸುತ್ತಾನೆ. ಬೇಕಿದ್ದರೆ, ಸಲಹೆ ನೀಡಬಹುದು. ಆದರೆ, ಮೈದಾನದಿಂದ ಹೊರಗಡೆ ಆಟವನ್ನು ನಿರ್ದೇಶಿಸುವುದು ಸರಿಯಲ್ಲ ಎಂಬುದು ಸೆಹ್ವಾಗ್​ ಅಭಿಪ್ರಾಯವಾಗಿದೆ.

    ಪಂದ್ಯದ ವಿಚಾರಕ್ಕೆ ಬಂದಾಗ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಕನ್ನಡಿಗ ಪ್ರಸಿದ್ಧ ಕೃಷ್ಣ (30ಕ್ಕೆ 3), ಪ್ಯಾಟ್ ಕಮ್ಮಿನ್ಸ್ (31ಕ್ಕೆ 2) ಹಾಗೂ ಸುನೀಲ್ ನಾರಾಯಣ್ (22ಕ್ಕೆ 2) ತ್ರಿಮೂರ್ತಿಗಳ ದಾಳಿಗೆ ನಲುಗಿ 9 ವಿಕೆಟ್‌ಗೆ 123 ರನ್ ಪೇರಿಸಲಷ್ಟೆ ಶಕ್ತವಾಯಿತು. ಪ್ರತಿಯಾಗಿ ಆರಂಭಿಕ ಆಘಾತದ ನಡುವೆಯೂ ಕೆಕೆಆರ್ ತಂಡ, ರಾಹುಲ್ ತ್ರಿಪಾಠಿ (41ರನ್, 32 ಎಸೆತ, 7 ಬೌಂಡರಿ) ಹಾಗೂ ನಾಯಕ ಇವೊಯಿನ್ ಮಾರ್ಗನ್ (47*ರನ್, 40 ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಡಿಯ ಜವಾಬ್ದಾರಿಯುತ ನಿರ್ವಹಣೆ ಫಲವಾಗಿ 16.4 ಓವರ್‌ಗಳಲ್ಲಿ 5 ವಿಕೆಟ್‌ಗೆ 126 ರನ್‌ಗಳಿಸಿ ಜಯದ ನಗೆ ಬೀರಿತು. (ಏಜೆನ್ಸೀಸ್​)

    ಭಾರತದ ಆಕ್ಸಿಜನ್ ಪೂರೈಕೆಗಾಗಿ 50 ಸಾವಿರ ಡಾಲರ್ ನೀಡಿದ ಐಪಿಎಲ್ ಆಟಗಾರ

    ಚೆನ್ನೈ ವಿರುದ್ಧ ಸೋತ ಬೆನ್ನಲ್ಲೇ ಆರ್​ಸಿಬಿ ಅಭಿಮಾನಗಳಿಗೆ ಮತ್ತೊಂದು ಶಾಕ್! ಈ ಇಬ್ಬರು ಆಟಗಾರರು ತಂಡದಿಂದ ಔಟ್!

    ಮೊಟೆರಾದಲ್ಲಿ ಕೆಕೆಆರ್ ಜಯದ ನಗೆ; ಪಂಜಾಬ್ ಕಿಂಗ್ಸ್ ಎದುರು 5 ವಿಕೆಟ್ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts