More

    ಮೊಟೆರಾದಲ್ಲಿ ಕೆಕೆಆರ್ ಜಯದ ನಗೆ; ಪಂಜಾಬ್ ಕಿಂಗ್ಸ್ ಎದುರು 5 ವಿಕೆಟ್ ಜಯ

    ಅಹಮದಾಬಾದ್: ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವೆಂಬ ಖ್ಯಾತಿಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಐಪಿಎಲ್ ಹಣಾಹಣಿಯಲ್ಲಿ ಬೌಲರ್‌ಗಳೇ ಮೇಲುಗೈ ಸಾಧಿಸಿದರು. ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತ ನೈಟ್ ರೈಡರ್ಸ್‌ ತಂಡ ಐಪಿಎಲ್-14ರ ತನ್ನ 6ನೇ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಪಂಜಾಬ್ ತಂಡವನ್ನು ಮಣಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಿತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೆಕೆಆರ್ ತಂಡಕ್ಕೆ ಈ ಗೆಲುವು ಲೀಗ್‌ನಲ್ಲಿ ಚೇತರಿಕೆ ನೀಡಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಕನ್ನಡಿಗ ಪ್ರಸಿದ್ಧ ಕೃಷ್ಣ (30ಕ್ಕೆ 3), ಪ್ಯಾಟ್ ಕಮ್ಮಿನ್ಸ್ (31ಕ್ಕೆ 2) ಹಾಗೂ ಸುನೀಲ್ ನಾರಾಯಣ್ (22ಕ್ಕೆ 2) ತ್ರಿಮೂರ್ತಿಗಳ ದಾಳಿಗೆ ನಲುಗಿ 9 ವಿಕೆಟ್‌ಗೆ 123 ರನ್ ಪೇರಿಸಲಷ್ಟೆ ಶಕ್ತವಾಯಿತು. ಪ್ರತಿಯಾಗಿ ಆರಂಭಿಕ ಆಘಾತದ ನಡುವೆಯೂ ಕೆಕೆಆರ್ ತಂಡ, ರಾಹುಲ್ ತ್ರಿಪಾಠಿ (41ರನ್, 32 ಎಸೆತ, 7 ಬೌಂಡರಿ) ಹಾಗೂ ನಾಯಕ ಇವೊಯಿನ್ ಮಾರ್ಗನ್ (47*ರನ್, 40 ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಡಿಯ ಜವಾಬ್ದಾರಿಯುತ ನಿರ್ವಹಣೆ ಫಲವಾಗಿ 16.4 ಓವರ್‌ಗಳಲ್ಲಿ 5 ವಿಕೆಟ್‌ಗೆ 126 ರನ್‌ಗಳಿಸಿ ಜಯದ ನಗೆ ಬೀರಿತು.

    ಪಂಜಾಬ್ ಕಿಂಗ್ಸ್; 9 ವಿಕೆಟ್‌ಗೆ 123 (ಕೆಎಲ್ ರಾಹುಲ್ 19, ಮಯಾಂಕ್ ಅಗರ್ವಾಲ್ 31, ನಿಕೋಲಸ್ ಪೂರನ್ 19, ಕ್ರಿಸ್ ಜೋರ್ಡಾನ್ 30, ಪ್ರಸಿದ್ಧ ಕೃಷ್ಣ 30ಕ್ಕೆ 3, ಸುನೀಲ್ ನಾರಾಯಣ್ 22ಕ್ಕೆ 2, ಪ್ಯಾಟ್ ಕಮ್ಮಿನ್ಸ್ 31ಕ್ಕೆ 2), ಕೋಲ್ಕತ ನೈಟ್ ರೈಡರ್ಸ್‌: 16.4 ಓವರ್‌ಗಳಲ್ಲಿ 5 ವಿಕೆಟ್‌ಗೆ 126 (ರಾಹುಲ್ ತ್ರಿಪಾಠಿ 41, ಇವೊಯಿನ್ ಮಾರ್ಗನ್ 47*, ಆಂಡ್ರೆ ರಸೆಲ್ 10, ದಿನೇಶ್ ಕಾರ್ತಿಕ್ 12*, ಮೋಯ್ಸೆಸ್ ಹೆನ್ರಿಕ್ಸ್ 5ಕ್ಕೆ 1, ಮೊಹಮದ್ ಶಮಿ 25ಕ್ಕೆ 1, ದೀಪಕ್ ಹೂಡಾ 20ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts