More

    ಹಳಿ ಮೇಲೆ ನಿಂತು Instagram ರೀಲ್ಸ್​ ಮಾಡುವಾಗ ರೈಲು ಡಿಕ್ಕಿ: ಹಾರಿ ಹೋಗಿ ಬಿದ್ದ ವಿದ್ಯಾರ್ಥಿಯ ಸ್ಥಿತಿ ಗಂಭೀರ

    ಹೈದರಾಬಾದ್​: ಕೆಲವರು ಇನ್​​ಸ್ಟಾಗ್ರಾಂ ರೀಲ್ಸ್​ ಮಾಡಲು ತಮ್ಮ ಪ್ರಾಣವನ್ನು ಸಹ ಪಣಕ್ಕಿಡುತ್ತಾರೆ. ಲೈಕ್ಸ್​ ಮತ್ತು ಕಾಮೆಂಟ್​ ಗಿಟ್ಟಿಸಿಕೊಳ್ಳುವ ಸಲುವಾಗಿ ಹಿಂದೆ-ಮುಂದೆ ಯೋಚಿಸದೆ, ಅಪಾಯಕಾರಿ ಸ್ಥಳಗಳಲ್ಲಿಯೂ ವಿಡಿಯೋ ಮಾಡುತ್ತಾರೆ. ಈ ರೀತಿಯ ದುಸ್ಸಾಹಸಕ್ಕೆ ಕೈಹಾಕಿ ಪ್ರಾಣ ಬಿಟ್ಟ ಉದಾಹರಣೆಗಳು ಸಹ ನಮ್ಮ ಕಣ್ಣ ಮುಂದಿವೆ. ಇನ್ನು ಕೆಲವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವುದನ್ನು ನೋಡಿದ್ದೇವೆ. ಇಂಥದ್ದೇ ಒಂದು ಘಟನೆ ಇದೀಗ ನಡೆದಿದೆ.

    ತೆಲಂಗಾಣದ ವಾರಂಗಲ್​ ಮೂಲದ 11ನೇ ತರಗತಿ ವಿದ್ಯಾರ್ಥಿ ರೈಲು ಹಳಿಯ ಮೇಲೆ ನಿಂತು ಇನ್​ಸ್ಟಾಗ್ರಾಂ ರೀಲ್ಸ್​ ಮಾಡುವಾಗ, ಹಿಂಬದಿಯಿಂದ ರೈಲು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ವಿದ್ಯಾರ್ಥಿಯ ಹೆಸರು ಅಜಯ್​.

    ಅಜಯ್​​ಗೆ ಚಲಿಸುವ ರೈಲಿನ ಬ್ಯಾಕ್​ಗ್ರೌಂಡ್​ ಇರುವ ವಿಡಿಯೋ ಬೇಕಾಗಿತ್ತು. ಅದಕ್ಕಾಗಿ ಆತ ವಾರಂಗಲ್​ನ ಕಾಜೀಪೇಟ್​ ಬಳಿಯಿರುವ ವದ್ದೆಪಲ್ಲಿಯ ರೈಲು ಹಳಿಗಳ ಮೇಲೆ ನಿಂತು, ರೈಲು ಬರುವ ಸಮಯದಲ್ಲಿ ವಿಡಿಯೋ ಮಾಡುವಾಗ, ರೈಲು ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸೆಕ್ಕೆ ಅಜಯ್​ ಹಾರಿ ಹೋಗಿಬಿದ್ದಿದ್ದಾನೆ.

    ಗಂಭೀರ ಗಾಯಗೊಂಡಿದ್ದ ಅಜಯ್​ನನ್ನು ಆತನ ಪಕ್ಕದಲ್ಲೇ ವಿಡಿಯೋ ಮಾಡುತ್ತಿದ್ದ ಸ್ನೇಹಿತರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅಜಯ್​ಗೆ ವಾರಂಗಲ್​ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಬಾಲಿವುಡ್​​ ಟಾರ್ಗೆಟ್​ ಆಗಿರುವುದೇಕೆ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಟಿ ಸ್ವರಾ ಭಾಸ್ಕರ್​!

    ರಸ್ತೆ ಅಪಘಾತ, ಪ್ರತಿ 60 ನಿಮಿಷಕ್ಕೆ 18 ಮಂದಿ ಬಲಿ: ಎನ್​ಸಿಆರ್​ಬಿ ವರದಿಯಲ್ಲಿ ಬಹಿರಂಗ

    ಬಿಸಿಯೂಟ ತಯಾರಕರ ಬದುಕು ಮೂರಾಬಟ್ಟೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts