More

    ಶ್ರೀಲಂಕಾ ಜನರಿಗೆ ಹಣ ಹಂಚುತ್ತಿದ್ದ ಭಾರತೀಯ ಉದ್ಯಮಿಯನ್ನು ವಶಕ್ಕೆ ಪಡೆದ ಲಂಕಾ ಪೊಲೀಸರು!

    ಕೊಲಂಬೋ: ಶ್ರೀಲಂಕಾದಲ್ಲಿ ಹಣ ಹಂಚುತ್ತಿದ್ದ ಭಾರತೀಯ ಉದ್ಯಮಿಯನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿರುವ ಪ್ರಸಂಗ ಬೆಳಕಿಗೆ ಬಂದಿದೆ. ಉದ್ಯಮಿಯನ್ನು ರವೀಂದರ್​ ರೆಡ್ಡಿ ಎಂದು ಗುರುತಿಸಲಾಗಿದೆ.

    ಈ ಕುರಿತು ಮಾತನಾಡಿರುವ ರವೀಂದರ್​ ರೆಡ್ಡಿ, ಪ್ರತಿ ತಿಂಗಳು ನಾನು ಶ್ರೀಲಂಕಾಗೆ ಹೋಗುತ್ತೇನೆ. ಕಳೆದ ನಾಲ್ಕೈದು ತಿಂಗಳಿಂದ ನಿತ್ಯವು ಲಂಕಾಗೆ ಭೇಟಿ ನೀಡುತ್ತಿದ್ದೇನೆ. 21 ದಿನಗಳ ಅಲ್ಲಿ ಉಳಿದುಕೊಂಡಿದ್ದೆ. ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಲಂಕಾ ಜನರು ಅಲ್ಲಿನ ಅಧ್ಯಕ್ಷರ ವಿರುದ್ಧ ನಡೆಸಿದ ಬೃಹತ್​ ಪ್ರತಿಭಟನೆ ಸಮಯದಲ್ಲೂ ನಾನು ಭಾಗವಹಿಸಿದ್ದೆ. ಈ ವೇಳೆ ಎರಡ್ಮೂರು ದಿನ ಉಳಿದುಕೊಂಡಿದ್ದೆ ಮತ್ತು ಅಲ್ಲಿನ ಜನರಿಗೆ ಆಹಾರ ಮತ್ತು ಹಣವನ್ನು ಹಂಚಿದ್ದೆ ಎಂದು ಹೇಳಿದ್ದಾರೆ.

    ಆರ್ಥಿಕ ಸಂಕಷ್ಟದಲ್ಲಿದ್ದ ಜನರಿಗಾಗಿ ಸಾಕಷ್ಟು ಆಹಾರ ಮತ್ತು ಹಣವನ್ನು ಹಂಚಿದ್ದೇನೆ. ಸುಮಾರು 5 ಲಕ್ಷ ರೂಪಾಯಿವರೆಗೂ ಹಣ ಹಂಚಿದ್ದೇನೆ. ಈ ವೇಳೆ ಲಂಕಾ ಪೊಲೀಸರು ನನ್ನನ್ನು ವಶಕ್ಕೆ ಪಡೆದರು. ಈ ವೇಳೆ ಲಂಕಾದ ಸಿಐಡಿ ಅಧಿಕಾರಿಗಳು ರೆಕಾರ್ಡ್​ ಮಾಡಿದ್ದ ವಿಡಿಯೋ ಕ್ಲಿಪ್​ಗಳನ್ನು ನನ್ನ ಮಗನಿಗೆ ಶೇರ್​ ಮಾಡಿದ್ದಾರೆ ಎಂದು ರವೀಂದರ್​ ಹೇಳಿದ್ದಾರೆ.

    ಶ್ರೀಲಂಕಾ ಪೊಲೀಸ್​ ಇಲಾಖೆಯ ಮಾಧ್ಯಮ ವಕ್ತಾರರಾದ ತಲ್ದುವಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ರವೀಂದರ್​ ರೆಡ್ಡಿ ಅವರನ್ನು ಬಂಧಿಸಲಾಗಿಲ್ಲ, ಅವರ ಹೇಳಿಕೆಯನ್ನು ಮಾತ್ರ ದಾಖಲಿಸಲಾಗಿದೆ ಮತ್ತು ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಬಾತ್​ರೂಮ್​ ಕಿಟಕಿಯಲ್ಲಿ ವ್ಯಕ್ತಿಯ ನೆರಳು ಕಂಡು ಮಹಿಳೆ ಶಾಕ್​: ರಾಜಕೀಯ ನಾಯಕನ ಮುಖವಾಡ ಬಯಲು

    ಇಡಿಯಿಂದ ರಾಹುಲ್​ ಗಾಂಧಿ ಬಂಧನವಾಗುತ್ತಾ? ಛತ್ತೀಸ್​ಗಢ ಮುಖ್ಯಮಂತ್ರಿ ಕೊಟ್ಟ ಸ್ಫೋಟಕ ಉತ್ತರ ಹೀಗಿದೆ…

    ನದಿ ಜೋಡಣೆಯಿಂದ ಮಾನ್ಸೂನ್​ಗೆ ಧಕ್ಕೆ; ಜೀವವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts