More

    ಸಚಿನ್​ಗೂ ವಿಂಡೀಸ್​ ಇದೀಗ ವಿರಾಟ್​ಗೂ ವಿಂಡೀಸ್! ವಿಶೇಷ ದಾಖಲೆ ಬರೆಯಲು ಕೊಹ್ಲಿಗೆ ಬೇಕಿದೆ ಕೇವಲ 6 ರನ್​

    ನವದೆಹಲಿ: ಟೀಮ್​ ಇಂಡಿಯಾ ಮತ್ತು ವೆಸ್ಟ್​ ಇಂಡೀಸ್​ ತಂಡದ ನಡುವಿನ ಏಕದಿನ ಮತ್ತು ಟಿ20 ಸರಣಿಗೆ ವೇದಿಕೆ ಸಿದ್ಧವಾಗುತ್ತಿದೆ. ಫೆಬ್ರವರಿ 6ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಫೆ. 16 ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.

    ವಿರಾಟ್​ ಕೊಹ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದು, ಭಾನುವಾರದಿಂದ ಆರಂಭವಾಗುವ ಏಕದಿನ ಪಂದ್ಯದಲ್ಲಿ ಅವರ ಬ್ಯಾಟಿಂಗ್​ ಮೇಲೆ ಎಲ್ಲರ ದೃಷ್ಟಿ ನೆಟ್ಟಿದ್ದು, ಕ್ರಿಕೆಟ್​ ಜಗತ್ತಿನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ವಿರಾಟ್​ ಕೊಹ್ಲಿ ಅವರು ಕೇವಲ 6 ರನ್​ ಅಂತರದಲ್ಲಿದ್ದಾರೆ.

    ಹೌದು, ಭಾನುವಾರದಿಂದ ಆರಂಭವಾಗುವ ಪಂದ್ಯದಲ್ಲಿ ಕೊಹ್ಲಿ 6 ರನ್​ ಗಳಿಸಿದರೆ, ತವರು ನೆಲದಲ್ಲಿ ಏಕದಿಂದ ಪಂದ್ಯದಲ್ಲಿ 5 ಸಾವಿರ ರನ್​ ಕಲೆಹಾಕಿದ ಭಾರತದ ಎರಡನೇ ಬ್ಯಾಟ್ಸ್​ಮನ್​ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

    ಸದ್ಯ ಮೊದಲ ಸ್ಥಾನದಲ್ಲಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಇದ್ದಾರೆ. ಸಚಿನ್​ ತವರಿನಲ್ಲಿ 5 ಸಾವಿರಕ್ಕೂ ಹೆಚ್ಚು ರನ್​ ಕಲೆಹಾಕಿದ್ದಾರೆ. ವಿಶೇಷ ಅಂದರೆ, ಸಚಿನ್​ 5 ಸಾವಿರ ರನ್​ ಸಾಧನೆ ಮಾಡಿದ್ದು ಕೂಡ ವೆಸ್ಟ್​ ಇಂಡೀಸ್​ ತಂಡದ ವಿರುದ್ಧ. ತಮ್ಮ 121ನೇ ಇನ್ನಿಂಗ್ಸ್​ನಲ್ಲಿ ಸಚಿನ್​ ಈ ಸಾಧನೆ ಮಾಡಿದ್ದಾರೆ.

    ಭಾನುವಾರ ನಡೆಯುವ ಪಂದ್ಯದಲ್ಲಿ ಕೊಹ್ಲಿ 6 ರನ್​ ಗಳಿಸಿದರೆ, ಸಚಿನ್​ ರೀತಿಯಲ್ಲೇ ಕೊಹ್ಲಿ ಕೂಡ ವಿಂಡೀಸ್​ ವಿರುದ್ಧವೇ ಈ ವಿಶೇಷ ಸಾಧನೆ ಮಾಡಲಿದ್ದಾರೆ. ಅದು ಕೂಡ ಕೇವಲ 96ನೇ ಇನ್ನಿಂಗ್ಸ್​ನಲ್ಲೇ ಎಂಬುದು ವಿಶೇಷ. ಅಲ್ಲಿಗೆ ಕೊಹ್ಲಿ ಕ್ರಿಕೆಟ್​ ಲೋಕದ ಅಧಿಪತಿ ಎಂಬುದು ಮತ್ತೊಮ್ಮೆ ಸಾಬೀತಾಗುವ ಕಾಲ ಸನ್ನಿಹಿತವಾಗಿದೆ.

    ಎಲ್ಲ ಏಕದಿನ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದರೆ, ಟಿ20 ಪಂದ್ಯಗಳು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯದಲಿದೆ. ಪ್ರವಾಸಿ ವೆಸ್ಟ್​ ಇಂಡೀಸ್​ ತಂಡ ಕಠಿಣ ತರಬೇತಿಯಲ್ಲಿ ನಿರತವಾಗಿದ್ದು, ವಿಂಡೀಸ್​ ತಂಡವನ್ನು ಕೀರನ್​ ಪೊಲಾರ್ಡ್​ ಮುನ್ನೆಡೆಸಿದರೆ, ಭಾರತ ತಂಡದ ನಾಯಕತ್ವವನ್ನು ರೋಹಿತ್​ ಶರ್ಮ ನಿರ್ವಹಿಸಲಿದ್ದಾರೆ. (ಏಜೆನ್ಸೀಸ್​)

    ತನ್ನ ಫೋಟೋ ಮೇಲೆ ಸೆಲೆಬ್ರಿಟಿ ಎಂದು ಬರೆದು ಪೂಜೆ ಮಾಡಿ ಸಾವಿನ ದಾರಿ ಹಿಡಿದ ವ್ಯಕ್ತಿ..!

    ಮದ್ವೆ ಮನೆಯಲ್ಲಿ ಕೊರಗಜ್ಜನ ವೇಷ ಧರಿಸಿ ಕುಣಿತ: ತಲೆಮರೆಸಿಕೊಂಡಿದ್ದ ಮದುಮಗ ಕೊನೆಗೂ ಸಿಕ್ಕಿಬಿದ್ದ

    ದೇಹದಲ್ಲಿ ಎಷ್ಟು ಮಚ್ಚೆಗಳಿವೆ? ತೆಲುಗಿನ ಮೊದಲ ಚಿತ್ರದಲ್ಲೇ ಕನ್ನಡತಿ ನೇಹಾ ಶೆಟ್ಟಿಗೆ ಮುಜುಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts