More

    ದೆವ್ವಗಳು ನಿಜವಾಗಿಯೂ ಇದೆಯೇ? ಐಐಟಿ ನಿರ್ದೇಶಕ ಪ್ರೊ. ಲಕ್ಷ್ಮೀಧರ್​ ಮಾತು ಕೇಳಿದ್ರೆ ಶಾಕ್​ ಆಗ್ತೀರಾ!

    ನವದೆಹಲಿ: ಭೂಮಿಯ ಮೇಲೆ ಅನೇಕ ಕುತೂಹಲಕಾರಿ ಸಂಗತಿಗಳಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಕೆಲವು ನಿಜವೇ ಎಂಬುದು ಇನ್ನು ಬಹುತೇಕರಿಗೆ ನಂಬಲು ಆಗುತ್ತಿಲ್ಲ. ಏಕೆಂದರೆ, ಅಷ್ಟು ನಿಗೂಢವಾಗಿರುತ್ತವೆ. ಸಾಮಾನ್ಯವಾಗಿ ನಮ್ಮ ನಡುವೆ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಏಲಿಯನ್​ಗಳ ನಿಜಕ್ಕೂ ಇದೆಯಾ? ಅಥವಾ ಇಲ್ಲವೇ?, ದೇವರು ಅಸ್ತಿತ್ವದಲ್ಲಿರುವನೇ? ಅಥವಾ ಇಲ್ಲವೇ? ಮತ್ತು ದೆವ್ವಗಳು ಇದೆಯಾ? ಅಥವಾ ಇಲ್ಲವೇ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಆಗಾಗ ಬಿರುಸಿನ ಚರ್ಚೆಗಳು ನಡೆಯುವುದು ಸಾಮಾನ್ಯ.

    ಅದರಲ್ಲೂ ದೆವ್ವಗಳ ಇರುವಿಕೆ ಬಗ್ಗೆ ಸಾಕಷ್ಟು ಮಾತುಗಳನ್ನು ಕೇಳಿದ್ದೇವೆ. ತಮ್ಮ ಅನುಭವಕ್ಕೆ ಬಂದಂತಹ ಸಂಗತಿಗಳನ್ನು ಅನೇಕರು ಹೇಳಿದಾಗ ಕೆಲವರು ನಂಬದೇ ಕುಹಕವಾಡುತ್ತಾರೆ. ಮನುಷ್ಯ ಬೇರೆ ಬೇರೆ ಗ್ರಹಗಳತ್ತ ಹೆಜ್ಜೆ ಹಾಕುತ್ತಿರುವ ಆಧುನಿಕ ಕಾಲದಲ್ಲ ಇದನೆಲ್ಲ ನಂಬುವು ಮೂರ್ಖತನ ಎಂದು ವಾದಿಸುತ್ತಾರೆ. ಆದರೆ, ಅನುಭವಕ್ಕೆ ಬಂದವರು ದೆವ್ವ ಇದೆ ಎನ್ನುತ್ತಾರೆ.

    ಹೌದು, ಐಐಟಿ ಮಂಡಿ ನಿರ್ದೇಶಕರಾಗಿ ಹೊಸದಾಗಿ ನೇಮಕವಾದ ಪ್ರೊಫೆಸರ್​ ಲಕ್ಷ್ಮೀಧರ್​ ಬೆಹೆರಾ ಹೇಳುವ ಪ್ರಕಾರ ಭೂತಗಳು ಇರುವುದನ್ನು ಅಲ್ಲಗೆಳೆಯುವಂತಿಲ್ಲ ಎಂದಿದ್ದಾರೆ. ಅಲ್ಲದೆ, ತಮ್ಮ ಅನುಭವಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಓರ್ವ ಐಐಟಿ ನಿರ್ದೇಶಕರಾಗಿ ದೆವ್ವಗಳ ಬಗ್ಗೆ ಮಾತನಾಡಿರುವುದು ನಿಜಕ್ಕೂ ಶಾಕಿಂಗ್​ ಸಂಗತಿಯೇ ಸರಿ.

    ಬೆಹರಾ ಅವರು ಮಾತನಾಡಿರುವ ಐದು ನಿಮಿಷಗಳ ವಿಡಿಯೋದಲ್ಲಿ ತಮ್ಮ ಅನುಭವನ್ನು ಹಂಚಿಕೊಂಡಿದ್ದಾರೆ. ದೆವ್ವದಿಂದ ಬಾದಿತರಾಗಿದ್ದ ಸ್ನೇಹಿತ ಕುಟುಂಬಕ್ಕೆ ಸಹಾಯ ಮಾಡಲು 1993ರಲ್ಲಿ ಬೆಹೆರಾ ಅವರು ಚೆನ್ನೈಗೆ ತೆರಳಿದ್ದರಂತೆ. ‘ಹರೇ ರಾಮ ಹರೇ ಕೃಷ್ಣ’ ಮಂತ್ರವನ್ನು ಪಠಿಸುವುದರೊಂದಿಗೆ “ಭಗವದ್ಗೀತೆಯಲ್ಲಿನ ಆಲೋಚನೆಗಳು ಮತ್ತು ಬುದ್ಧಿವಂತಿಕೆಯನ್ನು ಅಭ್ಯಾಸ ಮಾಡಲು” ಪ್ರಾರಂಭಿಸಿದ್ದೇ. ಹೀಗಾಗಿ ನನ್ನ ಸ್ನೇಹಿತನಿಗೆ ಸಹಾಯ ಮಾಡಲು ನಿರ್ಧಾರ ಮಾಡಿದೆ.

    ಸ್ನೇಹಿತನ ಮನೆಗೆ ಇನ್ನಿಬ್ಬರು ಸ್ನೇಹಿತರೊಂದಿಗೆ ರಾತ್ರಿ 7 ಗಂಟೆಗೆ ತಲುಪಿದೆ. ಅವರು ರಿಸರ್ಚ್ ಸ್ಕಾಲರ್ ಅಪಾರ್ಟ್‌ಮೆಂಟ್‌ನಲ್ಲಿದ್ದರು. ಮನೆಗೆ ಬಂದ ಕೂಡಲೇ ನಾನು ಮತ್ತು ಸ್ನೇಹಿತರು ಸುಮಾರು 10-15 ನಿಮಿಷಗಳ ಕಾಲ ಜೋರಾಗಿ ಮಂತ್ರಗಳನ್ನು ಪಠಿಸಲು ಶುರು ಮಾಡಿದೆವು. ಈ ವೇಳೆ ಇದ್ದಕ್ಕಿದ್ದಂತೆ ಸ್ನೇಹಿತನ ತಂದೆಯನ್ನು ನೋಡಿದೆವು. ಅವರು ತುಂಬಾ ಕುಳ್ಳಗಿದ್ದರು. ಸಂಪೂರ್ಣವಾಗಿ ವಯಸ್ಸಾಗಿದ್ದು, ನಡೆಯಲು ಸಾಧ್ಯವಾಗದ ಸ್ನೇಹಿತನ ತಂದೆ ಇದ್ದಕ್ಕಿದ್ದಂತೆ ಅವರ ಕೈ ಮತ್ತು ಕಾಲು ಭೀಕರ ನೃತ್ಯವನ್ನು ಮಾಡಲು ಆರಂಭಿಸಿತು ಮತ್ತು ಅವರ ತಲೆಯು ಛಾವಣಿಯನ್ನು ಬಹುತೇಕ ಸ್ಪರ್ಶಿಸುತ್ತಿತ್ತು. ಸ್ನೇಹಿತನ ತಂದೆಯನ್ನು ದುಷ್ಟಶಕ್ತಿ ಸಂಪೂರ್ಣವಾಗಿ ಆವರಿಸಿದೆ ಎಂದು ತಿಳಿಯಿತು ಎಂದಿದ್ದಾರೆ.

    ಸ್ನೇಹಿತನ ತಾಯಿ ಮತ್ತು ಹೆಂಡತಿಯನ್ನು ಕೂಡ ದುಷ್ಟಶಕ್ತಿ ಆವರಿಸಿತ್ತು. ಹೀಗಾಗಿ ದುಷ್ಟಶಕ್ತಿ”ಯನ್ನು ಓಡಿಸಲು ಸುಮಾರು 45 ನಿಮಿಷದಿಂದ ಒಂದು ಗಂಟೆಗಳ ಕಾಲ ಜೋರಾಗಿ ಮಂತ್ರವನ್ನು ಪಠಣ ಮಾಡಿದೆವು ಎಂದು ಹೇಳಿದರು.

    ಬೆಹೆರಾ ಅವರು ಮಾತನಾಡಿರುವ ವಿಡಿಯೋ ಏಳು ತಿಂಗಳ ಹಿಂದೆ ಲರ್ನ್​ ಗೀತಾ ಲೈವ್​ ಗೀತಾ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಅಪ್​ಲೋಡ್​ ಮಾಡಲಾಗಿದೆ. ನಾನು ಅನುಭವಿಸಿದ್ದನ್ನು ವಿವರಿಸಿದ್ದೇನೆ. ದೆವ್ವಗಳಿರುವುದು ನಿಜವೆಂದು ಬೆಹೆರಾ ಒಪ್ಪಿಕೊಂಡಿದ್ದಾರೆ.

    ಅಂದಹಾಗೆ ಬೆಹೆರಾ ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಐಐಟಿ ದೆಹಲಿಯಿಂದ ಪಿಎಚ್‌ಡಿ ಮಾಡಿದ್ದಾರೆ ಮತ್ತು ಅವರ ವಿಶೇಷ ಕ್ಷೇತ್ರಗಳು ರೊಬೊಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಗಿದೆ. (ಏಜೆನ್ಸೀಸ್​)

    ಖಂಡಿತ ಅದು ಸಮಂತಾನೇ… ಮಾಧ್ಯಮದವರ ಈ ಪ್ರಶ್ನೆಗೆ ಮಾಜಿ ಪತ್ನಿಯ ಹೆಸರನ್ನೇ ಉತ್ತರಿಸಿದ ನಾಗಚೈತನ್ಯ!

    ಮೇಡ್ ಇನ್ ಚೀನಾಕ್ಕೆ ಮಣೆ: ವಿಜಯವಾಣಿ ಮಾಹಿತಿ..

    ಶೇ.50 ಅತಿಥಿ ಉಪನ್ಯಾಸಕರ ಉದ್ಯೋಗಕ್ಕೆ ಕುತ್ತು!; ‘ಕಹಿ’ಯಾದ ಸರ್ಕಾರದ ನೂತನ ನೀತಿ, ವೇತನ ಹೆಚ್ಚಳ ಜತೆಗೆ ಕೆಲಸದ ಅವಧಿಯೂ ಏರಿಕೆ

    ಬಿಸಿಸಿಐ ಜತೆಗಿನ ಜಟಾಪಟಿ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ಮುಳುವಾಯಿತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts