More

    ತಪ್ಪು ಆಹಾರ ಸೇವಿಸಿದ್ರೆ… ಮಾಂಸಾಹಾರಿಗಳಿಗೆ ಸಲಹೆ ನೀಡಿದ ಆರ್​​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗವತ್​

    ನವದೆಹಲಿ: ತಪ್ಪು ಬಗೆಯ ಅಥವಾ ಹಿಂಸೆಯೇ ತುಂಬಿರುವ ಆಹಾರವನ್ನು ಸೇವಿಸದೇ, ಅವುಗಳನ್ನು ನಿರ್ಲಕ್ಷಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​)ದ ಮುಖ್ಯಸ್ಥ ಮೋಹನ್​ ಭಾಗವತ್​ ಅವರು ಮಾಂಸಾಹಾರಿಗಳಿಗೆ ಸಲಹೆಯನ್ನು ನೀಡಿದ್ದಾರೆ.

    ಆರ್​​ಎಸ್​ಎಸ್​ ಅಂಗಸಂಸ್ಥೆ ಭಾರತ್​ ವಿಕಾಸ್ ಮಂಚ್​ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ, ವ್ಯಕ್ತಿತ್ವದ ಎಲ್ಲಾ ಸುತ್ತಿನ ಬೆಳವಣಿಗೆಯ ವಿಷಯದ ಬಗ್ಗೆ ಮಾತನಾಡುವಾಗ ಆಹಾರ ಕ್ರಮದ ಕುರಿತು ತಮ್ಮ ಸಲಹೆಗಳನ್ನು ನೀಡಿದರು.

    ನೀವು ತಪ್ಪು ಬಗೆಯ ಆಹಾರವನ್ನು ಸೇವಿಸಿದರೆ, ಅದು ನಿಮ್ಮನ್ನು ತಪ್ಪು ದಾರಿಗೆ ಎಳೆಯುತ್ತದೆ. ತಾಮಸಿಕ ಆಹಾರವನ್ನು ಸೇವಿಸಲೇಬಾರದು. ತುಂಬಾ ಹಿಂಸೆ ತುಂಬಿರುವ ಆಹಾರದ ಸೇವನೆ ಮಾಡಬಾರದು ಎಂದು ಮೋಹನ್​ ಭಾಗವತ್​ ಹೇಳಿದರು. ಅಂದಹಾಗೆ ತಾಮಸಿಕ ಆಹಾರವು ಸಾಮಾನ್ಯವಾಗಿ ವಿವಿಧ ಮಾಂಸಾಹಾರದ ಭಕ್ಷ್ಯಗಳನ್ನು ಒಳಗೊಂಡಿರುತ್ತದೆ.

    ಇದೇ ಸಂದರ್ಭದಲ್ಲಿ ಭಾಗವತ್​ ಅವರು ಪಾಶ್ಚಿಮಾತ್ಯ ದೇಶಗಳ ಮಾಂಸಾಹಾರಿಗಳು ಮತ್ತು ಭಾರತದ ಮಾಂಸಾಹಾರಿಗಳ ನಡುವೆ ಹೋಲಿಕೆ ಮಾಡಿದರು. ಪ್ರಪಂಚದ ಬೇರೆಡೆಯಂತೆ ಮಾಂಸಾಹಾರವನ್ನು ತಿನ್ನುವ ಜನರು ನಮ್ಮ ಭಾರತದಲ್ಲಿದ್ದಾರೆ, ಆದರೆ ನಮ್ಮ ದೇಶದಲ್ಲಿ ಮಾಂಸಾಹಾರಿಗಳು ಸಹ ಸಂಯಮವನ್ನು ಅನುಸರಿಸುತ್ತಾರೆ ಮತ್ತು ಕೆಲವು ನಿಯಮಗಳನ್ನು ಅನುಸರಿಸುತ್ತಾರೆ ಎಂದರು.

    ನಮ್ಮ ದೇಶದಲ್ಲಿ ಮಾಂಸಾಹಾರ ತಿನ್ನುವವರು ಶ್ರಾವಣ ಮಾಸದಲ್ಲಿ ಅದನ್ನು ತ್ಯಜಿಸುತ್ತಾರೆ. ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರದ ಸಮಯದಲ್ಲಿ ಮಾಂಸಾಹಾರ ಸೇವನೆ ಮಾಡುವುದಿಲ್ಲ. ತಮ್ಮಷ್ಟಕ್ಕೆ ತಾವೇ ಕೆಲವೊಂದು ನಿಮಯಗಳನ್ನು ಹೇರಿಕೊಂಡಿದ್ದಾರೆ ಎಂದು ಭಾಗವತ್​ ಅವರು ಉಲ್ಲೇಖಿಸಿದರು.

    ಇಡೀ ದೇಶವು ಹಬ್ಬದ ಉತ್ಸಾಹದಲ್ಲಿ ಮುಳುಗಿರುವ ಮತ್ತು ನವರಾತ್ರಿಯನ್ನು ಆಚರಿಸುತ್ತಿರುವ ಸಮಯದಲ್ಲಿ ಮೋಹನ್ ಭಾಗವತ್ ಅವರ ಈ ಹೇಳಿಕೆಗಳು ಬಂದಿವೆ. ನವರಾತ್ರಿಯ ಸಮಯದಲ್ಲಿ ಜನರು ಉಪವಾಸ ಮತ್ತು ಮಾಂಸಾಹಾರ ತ್ಯಜಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಅನುಸರಿಸುತ್ತಾರೆ. (ಏಜೆನ್ಸೀಸ್​)

    ಡಿ.ಕೆ.ಶಿವಕುಮಾರ್​ಗೆ ಯಾಮಾರಿಸಿ ರಾಹುಲ್ ಗಾಂಧಿಗೆ ಸ್ವಾಗತ ಕೋರಿದ ಸಿದ್ದು!?

    ಹಸು ಮೇಯಿಸಿಕೊಂಡು ಮನೆಗೆ ತೆರಳುತ್ತಿದ್ದ ಚನ್ನಪಟ್ಟಣದ ರೈತ ದಂಪತಿ ದುರಂತ ಅಂತ್ಯ

    ಚರ್ಮಗಂಟು ರೋಗದಿಂದ ಜಾನುವಾರು ಸತ್ತರೆ ಸಿಗಲಿದೆ ಪರಿಹಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts