More

    ಲೈಂಗಿಕ ಸಂಪರ್ಕ ಸೇರಿದಂತೆ ಅನೇಕ ಪ್ರಶ್ನೆಗೆ ಮುಕ್ತವಾಗಿ ಉತ್ತರಿಸಿದ ತನ್ನನ್ನು ತಾನೇ ಮದ್ವೆ ಆಗುತ್ತಿರೋ ಯುವತಿ!

    ಅಹಮಾದಾಬಾದ್​: ಸಲಿಂಗ ಕಾಮ ಸಮುದಾಯದ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಜೂನ್ ತಿಂಗಳನ್ನು ಅಂತಾರಾಷ್ಟ್ರೀಯ ಹೆಮ್ಮೆಯ ತಿಂಗಳು ಎಂದು ಆಚರಿಸಲಾಗುತ್ತದೆ. ಈ ಸಮುದಾಯದ ಬಗ್ಗೆ ಅನೇಕ ಸಂದರ್ಶನ ಮತ್ತು ಮೀಡಿಯಾ ಕವರೇಜ್​ ಮಾಡಲಾಗುತ್ತದೆ. ಇದರ ನಡುವೆ ತನ್ನನ್ನು ತಾನೇ ಮದುವೆಯಾಗುವುದಾಗಿ ಹೇಳಿ ಭಾರೀ ಸುದ್ದಿಯಾಗಿರುವ ಗುಜರಾತಿನ ವಡೋದರಾ ಮೂಲದ ಕ್ಷಮಾ ಬಿಂದು ಮಾಧ್ಯಮ ಸಂದರ್ಶನದಲ್ಲಿ ತಮ್ಮ ಬಗ್ಗೆ ಅನೇಕ ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

    View this post on Instagram

    A post shared by Kshama Bindu (@kshamachy)

    ಐಎಎನ್​ಎಸ್​ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿರುವ ಕ್ಷಮಾ, ನಾನು ಉಭಯಲಿಂಗಿ (ಬೈಸೆಕ್ಸುವಲ್​). ನಾನು ಪುರುಷ ಮತ್ತು ಮಹಿಳಾ ಜತೆಗಾರರನ್ನು ಹೊಂದಿದ್ದೇನೆ. ಇಂದಿಗೂ ಅವರ ಜತೆ ಸಂಪರ್ಕದಲ್ಲಿದ್ದೇನೆ. ಆದರೆ, ನಮ್ಮ ನಡುವೆ ಏನೂ ನಡೆದಿಲ್ಲ. ನಾನು ಅನೇಕ ವರ್ಷಗಳಿಂದ ಏಕಾಂಗಿಯಾಗಿದ್ದೇನೆ. ನನ್ನ ಏಕಾಂತದ ಮೇಲೆ ನನಗೆ ಪ್ರೀತಿಯಾಗಿದೆ. ನನ್ನನ್ನು ನಾನೇ ಪ್ರೀತಿ ಮಾಡುತ್ತೇನೆ. ಇದುವರೆಗೆ ಯಾರೊಂದಿಗೂ ಸಹ ಇಂತಹ ಅನುಭವ ಆರಲಿಲ್ಲ. ನಾನು ಚಿಕ್ಕಂದಿನಿಂದಲೂ ವಧುವಾಗಲು ಇಷ್ಟಪಡುತ್ತಿದ್ದೆ. ಆದರೆ, ಇನ್ನೊಬ್ಬರ ಪತ್ನಿ ಆಗಿ ಇರಲು ಆಗುವುದಿಲ್ಲ ಎಂದು ಕ್ರಮೇಣ ಅರಿತುಕೊಂಡೆ. ಮೂರ್ನಾಲ್ಕು ತಿಂಗಳುಗಳ ಕಾಲ ಯೋಚಿಸಿದ ನಂತರ, ಒಂದು ನಿರ್ಧಾರಕ್ಕೆ ಬಂದೆ. ಕೊನೆಗೆ ನನ್ನನ್ನು ನಾನೇ ಮದುವೆ ಆಗಲು ಬಯಸಿದ್ದೇನೆ. ಈ ವಿಚಾರ ವಡೋದರಾದ ಜನಕ್ಕೆ ಮಾತ್ರ ಗೊತ್ತಾಗಬೇಕು ಅಂತಾ ಎರಡು ಸ್ಥಳೀಯ ಪತ್ರಿಕೆ ಹಾಗೂ ಚಾನೆಲ್​ಗಳಿಗೆ ಸಂದರ್ಶನ ನೀಡಿದ್ದೆ. ಆದರೆ, ಈ ರೀತಿ ವೈರಲ್​ ಆಗುತ್ತದೆ ಅಂತಾ ನನ್ನ ಕನಸು, ಮನಸ್ಸಲ್ಲೂ ಅಂದುಕೊಂಡಿರಲಿಲ್ಲ. ನಾನು ಹಿಂದು ಧರ್ಮ ಮತ್ತು ಸಂಸ್ಕೃತಿಯಲ್ಲಿ ಅಚಲ ನಂಬಿಕೆ ಹೊಂದಿದ್ದೇನೆ. ಹೀಗಾಗಿ ನನ್ನ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಮದುವೆ ಆಗಲು ನಿರ್ಧರಿಸಿದ್ದೇನೆಂದು ಕ್ಷಮಾ ಹೇಳಿದ್ದಾರೆ.

    View this post on Instagram

    A post shared by Kshama Bindu (@kshamachy)

    ಆದರೆ, ಕ್ಷಮಾ ನಿರ್ಧಾರಕ್ಕೆ ವಡೋದರಾದ ಮಾಜಿ ಡೆಪ್ಯೂಟಿ ಮೇಯರ್​ ಸುನಿತಾ ಶುಕ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಮದುವೆಗಳು ಹಿಂದು ಸಂಸ್ಕೃತಿಗೆ ವಿರುದ್ಧವಾಗಿವೆ. ಆಕೆ ದೇವಸ್ಥಾನದಲ್ಲಿ ಮದುವೆ ಆಗುವುದಾದರೆ, ನಾವು ಖಂಡಿತ ಅದಕ್ಕೆ ಅನುಮತಿಯನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ. ಬಿಂದು ಓರ್ವ ಮಾನಸಿಕ ಅಸ್ವಸ್ಥೆ. ಹೆಣ್ಣು ಹೆಣ್ಣನ್ನೇ ಹಾಗೂ ಗಂಡು ಗಂಡನ್ನೇ ಮದುವೆಯಾಗಬಹುದು ಅಂತಾ ಹಿಂದು ಸಂಸ್ಕೃತಿಯಲ್ಲಿ ಎಲ್ಲಾದರೂ ಬರೆದಿದೆಯಾ? ಅವಳು ಬೇಕಾದರೆ ಮದುವೆಯಾಗಲಿ. ಆದರೆ, ಬಿಂದು ಆಯ್ಕೆ ಮಾಡಿಕೊಂಡ ಸ್ಥಳಕ್ಕೆ ನನ್ನ ವಿರೋಧವಿದೆ. ಹಿಂದು ದೇವಸ್ಥಾನದಲ್ಲಿ ಆಕೆ ಆಕೆಯನ್ನೇ ಮದುವೆಯಾಗಲು ನಾವು ಬಿಡುವುದಿಲ್ಲ. ಇಂತಹ ಮದುವೆಗಳು ಹಿಂದು ಸಂಸ್ಕೃತಿಗೆ ವಿರೋಧವಾಗಿದೆ. ಇದರಿಂದ ಹಿಂದು ಜನಸಂಖ್ಯೆ ಕುಂಠಿತವಾಗಲಿದೆ. ಧರ್ಮಕ್ಕೆ ವಿರುದ್ಧವಾಗಿ ಏನಾದರೂ ನಡೆದರೆ, ಯಾವುದೇ ಕಾನೂನು ಜಾರಿಯಾಗುವುದಿಲ್ಲ ಎಂದು ಸುನೀತಾ ಶುಕ್ಲಾ ಅಸಮಾಧಾನ ಹೊರಹಾಕಿದರು.

    View this post on Instagram

    A post shared by Kshama Bindu (@kshamachy)

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕ್ಷಮಾ, ನನ್ನ ಉದ್ದೇಶ ಮದುವೆಯೇ ಹೊರತು ಯಾರ ಭಾವನೆಗಳಿಗೂ ಧಕ್ಕೆ ಉಂಟುಮಾಡುವ ಉದ್ದೇಶ ನನಗಿಲ್ಲ ಎಂದಿದ್ದಾರೆ. ನಾನು ಹಿಂದು ನಾಗರಿಕತೆಯನ್ನು ವಿರೂಪಗೊಳಿಸಲು ಪ್ರಯತ್ನಿಸುತ್ತಿಲ್ಲ. ನಿಮ್ಮನ್ನು ನೀವು ಪ್ರೀತಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ನಂಬುತ್ತೇನೆ. ನನಗೆ ಕೇವಲ 24 ವರ್ಷ ವಯಸ್ಸು ಮತ್ತು ಈ ವಿಚಾರವನ್ನು ರಾಜಕೀಯಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ನಾನು ಕೊಂಚ ಹೆದರಿದ್ದೇನೆ. ನನ್ನ ಸಂದರ್ಶನ ವೈರಲ್​ ಆದ ಕೂಡಲೇ ಡಜನ್​ಗಟ್ಟಲೆ ಸುದ್ದಿಗಾರರು ನನ್ನ ಮನೆಯ ಮುಂದೆಯೇ ಕ್ಯಾಮೆರಾ ಹಿಡಿದುಕೊಂಡು ಬಂದು ನಿಂತರು. ಇಂದು ಸಮಾಜ ನನ್ನನ್ನು ಬಹಿಷ್ಕರಿಸಿದೆ. ನಾನು ಪ್ರಖ್ಯಾತಳಾದ ಬೆನ್ನಲ್ಲೇ, ಜನರು ನನ್ನನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಿದ್ದಾರೆ. ಅಶ್ಲೀಲ ಕಾಮೆಂಟ್‌ ಮತ್ತು ಸಂದೇಶಗಳನ್ನು ಬರೆದಿದ್ದಾರೆ. ನನಗೂ ಬೆದರಿಕೆಗಳು ಬಂದಿವೆ ಎಂದು ಕ್ಷಮಾ ಆತಂಕ ವ್ಯಕ್ತಪಡಿಸಿದ್ದಾರೆ.

    View this post on Instagram

    A post shared by Kshama Bindu (@kshamachy)

    ಒಬ್ಬ ವ್ಯಕ್ತಿ ತನ್ನ ಸ್ವಂತ ಇಚ್ಛೆಯಂತೆ ವಿಭಿನ್ನ ನಿರ್ಧಾರವನ್ನು ತೆಗೆದುಕೊಂಡರೆ, ಪ್ರಪಂಚದ ಜನರೆಲ್ಲರೂ ಅವನನ್ನು ಅನುಸರಿಸುತ್ತಾರೆಯೇ? ಇದು ಖಂಡಿತ ಸಾಧ್ಯವಿಲ್ಲ, ಆದ್ದರಿಂದ ನನ್ನ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ. ನಾನು ಜನರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆಯಾಚಿಸಿದ್ದೇನೆ ಮತ್ತು ನಾನೀಗ ಈಗ ದೇವಸ್ಥಾನದಲ್ಲಿ ಮದುವೆಯಾಗುವುದಿಲ್ಲ. ಆದರೆ, ಜೂನ್ 11 ರಂದು ಖಂಡಿತ ಮದುವೆ ಆಗಲಿದ್ದೇನೆ ಎಂದರು.

    ಕ್ಷಮಾ ಅವರು ಕೆನಡಾದ ವೆಬ್ ಸೀರೀಸ್ ‘ಆನ್ ವಿತ್ ಆನ್ ಇ’ ಮತ್ತು ಬಾಲಿವುಡ್ ಚಲನಚಿತ್ರ ‘ರೂಹಿ’ ಅನ್ನು ಇಷ್ಟಪಟ್ಟಿದ್ದಾರೆ. ಅಲ್ಲಿ ನಟಿ ಜಾಹ್ನವಿ ಕಪೂರ್ ಅವರ ಪಾತ್ರವು ಅವರ ಆತ್ಮವನ್ನು ಮದುವೆಯಾಗುತ್ತದೆ. ಈ ದೇಶದ ಜನರು ಮರ, ನಾಯಿ ಅಥವಾ ದೆವ್ವ ಅಥವಾ ಆತ್ಮಗಳೊಂದಿಗಿನ ಮದುವೆಯನ್ನು ಒಪ್ಪಿಕೊಳ್ಳುತ್ತಾರೆ. ಆದರೆ, ಸ್ವಯಂ ವಿವಾಹವನ್ನು ಒಪ್ಪಿಕೊಳ್ಳಲು ಅವರಿಗೆ ಕಷ್ಟವಾಗುತ್ತದೆ ಎಂದು ಕ್ಷಮಾ ಟೀಕಿಸಿದರು.

    View this post on Instagram

    A post shared by Kshama Bindu (@kshamachy)

    ಭವಿಷ್ಯದಲ್ಲಿ ಬೇರೊಬ್ಬರನ್ನು ಮದುವೆಯಾಗಲು ಯೋಚಿಸುತ್ತೀರಾ ಎಂದು ಪ್ರಶ್ನಿಸಿದಾಗ ಉತ್ತರ ನೀಡಿರುವ ಕ್ಷಮಾ, ಯಾವುದೇ ಭಿನ್ನಲಿಂಗೀಯ ಅಥವಾ ಸಲಿಂಗಕಾಮಿ ವಿವಾಹವಾದಾಗ ಆ ಮದುವೆಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ ಎಂದರು. ನನ್ನ ನಿರ್ಧಾರ ಸರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಭವಿಷ್ಯದಲ್ಲಿ ನನಗೆ ಯಾರಾದರೂ ಬಗ್ಗೆ ಏನಾದರೂ ಅನಿಸಿದರೆ, ನಾನು ಅವರನ್ನು ಮದುವೆಯಾಗಲು ಯೋಚಿಸಬಹುದು ಎಂದು ತಿಳಿಸಿದರು.

    ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಕೆಲ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕ್ಷಮಾ, ಜನರು ನನ್ನ ಲೈಂಗಿಕತೆಯ ಬಗ್ಗೆ ಮತ್ತು ನಾನು ನನ್ನನ್ನು ಹೇಗೆ ತೃಪ್ತಿಪಡಿಸಿಕೊಳ್ಳಬಹುದು ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ನಾನದನ್ನು ಬೂಟಾಟಿಕೆ ಎಂದು ಪರಿಗಣಿಸುತ್ತೇನೆ. ಇದೀ ನನ್ನ ಸಂದರ್ಶನವನ್ನು ನೋಡಿ ನನ್ನ ಬಗ್ಗೆ ತಿಳಿದವರು ಏಕ ವ್ಯಕ್ತಿವಿವಾಹ ಅಂದರೆ ಏನು ಎಂಬುದನ್ನು ತಿಳಿಯಲು ಓದಲು ಆರಂಭಿಸಿದ ಬಹಳ ಮಂದಿ ಇದ್ದಾರೆ. ಇಂತಹ ಮದುವೆಗಳ ಬಗ್ಗೆ ಮೊದಲೇ ತಿಳಿದಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಂತಾ ಅನೇಕ ಮಹಿಳೆಯರು ನನಗೆ ಸಂದೇಶ ಕಳುಹಿಸಿರುವುದನ್ನು ಸ್ವೀಕರಿಸಿದ್ದೇನೆ ಎಂದಿದ್ದಾರೆ. ಸದ್ಯ ಯಾರು? ಏನೇ ಹೇಳಲಿ ನಾನು ಜೂನ್​ 11ರಂದು ಖಚಿತವಾಗಿ ಮದುವೆ ಆಗುತ್ತೇನೆಂದು ಹೇಳಿ ಕ್ಷಮಾ ಮಾತು ಮುಗಿಸಿದರು. (ಏಜೆನ್ಸೀಸ್​)

    ಅದು ಹೇಗೆ ಆಗ್ತಾಳೆ ನೋಡ್ತೀನಿ… ತನ್ನನ್ನು ತಾನೇ ಮದ್ವೆ ಆಗುವುದಾಗಿ ಹೇಳಿದ ಯುವತಿಗೆ ಎದುರಾಯ್ತು ಸಂಕಷ್ಟ!

    ಅವನೂ ಬೇಡ… ಅವಳೂ ಬೇಡ… ಎಂದು ತನ್ನನ್ನು ತಾನೇ ಮದುವೆಯಾಗಿ ಹನಿಮೂನ್​ಗೂ ರೆಡಿಯಾದ ಯುವತಿ!

    ಈ ಬಿಕಿನಿ ಅವತಾರ ನೋಡಿ ಸಮಂತಾ ಮತ್ತೆ ಟ್ರೋಲ್​ ಆಗುವುದು ಖಂಡಿತ ಅಂತಿದ್ದಾರೆ ಫ್ಯಾನ್ಸ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts