More

    4 ರಾಜ್ಯಗಳ ಚುನಾವಣಾ ಗೆಲುವೇ ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ: ಮಮತಾ ಬ್ಯಾನರ್ಜಿ ಕೊಟ್ಟ ವಿವರಣೆ ಹೀಗಿದೆ…

    ಕೋಲ್ಕತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 2024ರ ಲೋಕಸಭಾ ಚುನಾವಣೆ ಕುರಿತು ಮಹತ್ವದ ಸುಳಿವೊಂದನ್ನು ನೀಡಿದ್ದಾರೆ. ಕಾಂಗ್ರೆಸ್​ ಬಯಸಿದ್ದಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿರುವ ಮಮತಾ, ಪ್ರಧಾನಿ ಸ್ಥಾನದ ಮೇಲೆ ಕಣ್ಣಿಟ್ಟಿರುವಂತೆ ಕಾಣುತ್ತದೆ.

    ಬಿಜೆಪಿ ಅನ್ನು ಸೋಲಿಸಲು ಕಾಂಗ್ರೆಸ್​ ಬಯಸಿದರೆ, ಎಲ್ಲ ಪಕ್ಷಗಳು ಒಟ್ಟಿಗೆ ಹೆಜ್ಜೆ ಹಾಕೋಣ ಎಂದು ಮಮತಾ ಅವರು ಹೇಳಿದರು. ಸದ್ಯಕ್ಕೆ ಆಕ್ರಮಣಕಾರಿ ಆಗಬೇಡಿ. ಹತಾಶರಾಗದೇ ಧನಾತ್ಮಕವಾಗಿಯೇ ಉಳಿಯಿರಿ. ಈ ನಾಲ್ಕು ರಾಜ್ಯಗಳ ಗೆಲುವೇ ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ ಎಂದರು. ಬಿಜೆಪಿ ವಿರುದ್ಧ ಹೋರಾಡಲು ಬಯಸುವ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ನಡೆಯಬೇಕಿದೆ. ಇದು ಒಗ್ಗೂಡುವ ಸಮಯವಾಗಿದ್ದು, ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಅವರ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ ಎಂದರು.

    ಉತ್ತರ ಪ್ರದೇಶ, ಮಣಿಪುರ, ಗೋವಾ ಪಂಜಾಬ್​ ಮತ್ತು ಉತ್ತರಾಖಂಡ ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಬೆನ್ನಲ್ಲೇ ಮಮತಾ ಅವರು ಈ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಪಕ್ಷಗಳು ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ನಿಂತರೆ ಮಾತ್ರ ಬಿಜೆಪಿಯನ್ನು ಬಗ್ಗು ಬಡಿಯಲು ಸಾಧ್ಯ ಎಂಬುದು ಮಮತಾ ಬ್ಯಾನರ್ಜಿಯವರು ಅಭಿಪ್ರಾಯವಾಗಿದೆ.

    ಇನ್ನು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಚುನಾವಣಾ ಸೋಲಿನ ಬಗ್ಗೆ ಮಾತನಾಡಲು ಮಮತಾ ಬ್ಯಾನರ್ಜಿ ನಿರಾಕರಿಸಿದರು. ನಾನು ಕಾಂಗ್ರೆಸ್ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂದು ಹೇಳಿದರು.

    ಮಮತಾ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ ಅಧೀರ್​ ರಂಜನ್​, ಟಿಎಂಸಿ ಪಕ್ಷವು ಬಿಜೆಪಿಯ ದೊಡ್ಡ ಏಜೆಂಟ್ ಆಗಿದೆ. ಬಿಜೆಪಿ ವಿರುದ್ಧ ಹೋರಾಡಲು ಟಿಎಂಸಿ ಬಯಸಿದ್ದರೆ, ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಬೇಕು ಎಂದು ಹೇಳಿದ್ದಾರೆ.

    ಕಳೆದ ಗುರುವಾರ, ಕೋಲ್ಕತ್ತ ಮೇಯರ್ ಮತ್ತು ಹಿರಿಯ ಟಿಎಂಸಿ ನಾಯಕ ಫಿರ್ಹಾದ್ ಹಕೀಮ್ ಮಾತನಾಡಿ, ಬಿಜೆಪಿ ವಿರುದ್ಧ ಹೇಗೆ ಹೋರಾಟ ಮಾಡಬಹುದು ಮತ್ತು ಅದನ್ನು ಹೇಗೆ ಸೋಲಿಸಬಹುದು ಎಂಬುದನ್ನು ಬಂಗಾಳದಲ್ಲಿ ಟಿಎಂಸಿ ತೋರಿಸಿದೆ. ಟಿಎಂಸಿಯೊಂದಿಗೆ ಕಾಂಗ್ರೆಸ್ ವಿಲೀನಗೊಳ್ಳಲು ಮತ್ತು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಹೋರಾಟ ನಡೆಸಲು ಇದು ಸಕಾಲವಾಗಿದೆ ಎಂದು ಹೇಳಿದರು. (ಏಜೆನ್ಸೀಸ್​)

    ಪಾಕ್​ ಯುವತಿ ಜತೆ ಮದ್ವೆಯಾದ ಬೆನ್ನಲ್ಲೇ ಆತ್ಮಾಹುತಿ ದಾಳಿ ನಡೆಸಿದ ಕೇರಳದ M.Tech ವಿದ್ಯಾರ್ಥಿ!

    ಶಸ್ತ್ರಚಿಕಿತ್ಸೆ ನಡೆಸದೇ ಹೃದಯ ಕವಾಟ ಬದಲು: ಜಯದೇವ ಆಸ್ಪತ್ರೆ ಹೊಸ ದಾಖಲೆ

    ಕೈಗಾರಿಕೆಗಳ ಭೂಸ್ವಾಧೀನ ಸರಾಗ: ಕೆಐಎಡಿಬಿಗೆ ಕಾನೂನು ಬಲ, ಕಾಯ್ದೆಗೆ ಶೀಘ್ರ ತಿದ್ದುಪಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts