More

    ಚಾಮರಾಜಪೇಟೆ ಬಂದ್​ಗೆ ಉತ್ತಮ ಪ್ರತಿಕ್ರಿಯೆ: ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದ ಮಾಲೀಕರು

    ಬೆಂಗಳೂರು: ಸಾರ್ವಜನಿಕರು ಸೇರಿದಂತೆ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ವೇದಿಕೆ ಕರೆ ನೀಡಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಚಾಮರಾಜಪೇಟೆ 7ನೇ ಕ್ರಾಸ್​ನಲ್ಲಿರುವ ಆಟದ ಮೈದಾನ ಬಿಬಿಎಂಪಿ ಸ್ವತ್ತಾಗಿ ಉಳಿಯುವಂತೆ ಒತ್ತಾಯಿಸಿ, ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಶಾಂತಿಯುತ ಬಂದ್​ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡುತ್ತಿದ್ದಾರೆ. ಚಾಮರಾಜ ಪೇಟೆ ಮೈದಾನ ಸಾರ್ವಜನಿಕರಿಗೆ ಉಪಯೋಗ ಆಗಬೇಕು. ಮೈದಾನದಲ್ಲಿ ಗಣೇಶ ಹಬ್ಬ, ರಾಜ್ಯೊತ್ಸವ ಹಾಗೂ ಸ್ವಂತಂತ್ರ ದಿನಾಚರಣೆ ಆಚರಿಸಲು ಅವಕಾಶ ಕೊಡಬೇಕು. ಈ ಹೋರಾಟದಲ್ಲಿ ನಾವು ಭಾಗಿ ಆಗುತ್ತೇವೆ. ಹೀಗಾಗಿ ನಾವೇ ಅಗಂಡಿಗಳನ್ನು ಬಂದ್ ಮಾಡಿದ್ದೇವೆ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ.

    ಚಾಮರಾಜಪೇಟೆಯ ಹೊಟೆಲ್, ಬೇಕರಿ, ಕಾಂಡಿಮೆಂಟ್ ಹಾಗೂ ಜ್ಯೂಸ್ ಅಗಂಡಿಗಳು ಬಂದ್ ಆಗಿವೆ. ಬೆಳ್ಳಿಗೆಯೇ ಓಪನ್ ಆಗ್ತಿದ್ದ ಹೋಟೆಲ್​​​ಗಳು ಸಹ ಇಂದು ಮುಚ್ಚಿವೆ. ಸಾಮಾನ್ಯ ದಿನಕ್ಕಿಂತ ಚಾಮರಾಜ ಪೇಟೆಯಲ್ಲಿ ಇಂದು ಕಡಿಮೆ ಜನ ಸಂಚಾರವಿದ್ದು, ಸ್ವಯಂ ಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿರುವ ಮಾಲೀಕರು ಬಂದ್​ಗೆ ಬೆಂಬಲ ಸೂಚಿಸಿದ್ದಾರೆ.

    ಈ ಆಟದ ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್​ ಹೆಸರು ಇಡುವುದು, ಯಾವುದೇ ಕಾರಣಕ್ಕೂ ವಕ್ಫ್​ ಮಂಡಳಿಗೆ ನೀಡದೆ ಪೂರ್ಣ ಸ್ವತ್ತು ಬಿಬಿಎಂಪಿಗೆ ಸ್ವತ್ತಾಗಿಯೇ ಉಳಿಯುವುದು, ಶಾಶ್ವತವಾಗಿ ಮಕ್ಕಳ ಆಟದ ಮೈದಾನವಾಗಿರುವುದು, ಸ್ವಾತಂತ್ರ್ಯ ದಿನಾಚರಣೆ, ಗಣೇಶೋತ್ಸವ, ನಾಡಹಬ್ಬ ದಸರಾ, ಶಿವರಾತ್ರಿ ಸೇರಿ ಇತರೆ ಸಮಾರಂಭ ನಡೆಸುವುದಕ್ಕೆ ಅನುಮತಿ ನೀಡುವುದು ಸೇರಿ ಇನ್ನಿತರ ಸಮಸ್ಯೆಗಳ ಈಡೇರಿಕೆಗಾಗಿ ಹಮ್ಮಿಕೊಂಡಿರುವ ಬಂದ್​ಗೆ ಚಾಮರಾಜಪೇಟೆ ಬಡಾವಣೆ ಜನರು ಸಹಕಾರ ನೀಡಬೇಕೆಂದು ಒಕ್ಕೂಟ ಮನವಿ ಮಾಡಿದೆ. ಆಸ್ಪತ್ರೆ, ಔಷಧ ಅಂಗಡಿ ಮತ್ತು ಹಾಲಿನ ಕೇಂದ್ರ ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟು, ಕಚೇರಿ, ಮಾಲ್​ ಮತ್ತು ಶಾಲಾ ಕಾಲೇಜು ತೆರೆಯದೆ ಸ್ವಯಂಪ್ರೇರಿತವಾಗಿ ಬಂದ್​ಗೆ ಬೆಂಬಲ ನೀಡುವಂತೆ ಈಗಾಗಲೇ ಕೋರಲಾಗಿದೆ. (ದಿಗ್ವಿಜಯ ನ್ಯೂಸ್​)

    ತೆಲಂಗಾಣದಲ್ಲಿ ಮೀನಿನ ಮಳೆ ಕಂಡು ಹೌಹಾರಿದ ಜನರು! ಈ ಮೀನುಗಳು ತಿನ್ನಲು ಯೋಗ್ಯವೇ? ಇಲ್ಲಿದೆ ಉತ್ತರ…

    ಅತ್ತೆ-ಸೊಸೆಯೆಂಬ ವಿರುದ್ಧ ದಿಕ್ಕು; ಕೂಡಿ ಬಾಳಿದರೆ ಮನೆ-ಮನ ಆರೋಗ್ಯ ಪೂರ್ಣ

    ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದ್ದ ಸ್ಥಿರಾಸ್ತಿಯೇ ಸೇಲ್: ಕೋರ್ಟ್ ಆದೇಶದ ನಕಲು ಪ್ರತಿ ಸೃಷ್ಟಿಸಿ ಮಾರಿದ ದಂಪತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts