More

    ವೆನ್ಯೂ ಎನ್ ಲೈನ್ ಕಾರು ಮಾರುಕಟ್ಟೆಗೆ: ಹ್ಯುಂಡೈ ಕಂಪನಿಯಿಂದ ಅಭಿವೃದ್ಧಿ, ಆರಂಭಿಕ ಬೆಲೆ 12.16 ಲಕ್ಷ ರೂ.

    ಬೆಂಗಳೂರು: ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ವತಿಯಿಂದ ಹೊಸದಾಗಿ ‘ಹ್ಯುಂಡೈ ವೆನ್ಯೂ ಎನ್ ಲೈನ್’ ಕಾರು ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 12.16 ಲಕ್ಷ ರೂ. ಆರಂಭಿಕ ಬೆಲೆ ಇರುವ ಈ ಕಾರು ವಿವಿಧ ಬಣ್ಣಗಳಲ್ಲಿ ಲಭ್ಯವಿದೆ.

    ಸ್ಪೋರ್ಟಿ ಸ್ಟೇರಿಂಗ್, ಸೌಂಡ್ ಟ್ಯೂನಿಂಗ್, ಪೆಟ್ರೋಲ್ ಇಂಜಿನ್, 4 ಡಿಸ್ಕ್ ಬ್ರೇಕ್ ಸೌಲಭ್ಯ ಹೊಂದಿರುವ ಎಸ್​ಯುವಿ ಕಾರಿಗೆ ಹಲವು ವೈಶಿಷ್ಟ್ಯತೆಗಳಿವೆ. 7 ವರ್ಷ ವಾರೆಂಟಿ ಇರಲಿದ್ದು, ಗ್ರಾಹಕರಿಗೆ 5 ವರ್ಷ ಸರ್ವೀಸ್ ಪ್ಯಾಕೇಜ್​ಗಳೂ ಸಿಗಲಿವೆ. ಸುಸಜ್ಜಿತ ತಂತ್ರಜ್ಞಾನದಿಂದ ಇದನ್ನು ಅಭಿವೃದ್ಧಿಪಡಿಸಲಾಗಿದೆ.

    ಆಧುನಿಕ ವಿನ್ಯಾಸಗಳಿಂದ ಹ್ಯುಂಡೈ ವೆನ್ಯೂ ಎನ್ ಲೈನ್ ಕಾರನ್ನು ತಯಾರಿಸಲಾಗಿದೆ. ಗ್ರಾಹಕರಿಗೆ ಚಲನಶೀಲತೆಯ ಅನುಭವಗಳನ್ನು ಮರು ವ್ಯಾಖ್ಯಾನಿಸುವ ಅಂಗವಾಗಿ ಭಾರತದ ಮಾರುಕಟ್ಟೆಗೆ ಪರಿಚಯಿಸಲಾಗಿದೆ. 2 ವರ್ಷಗಳಲ್ಲಿ ಎರಡು ಎನ್ ಲೈನ್ ಮಾದರಿಯ ಕಾರುಗಳನ್ನು ನೀಡಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅನ್ಸೂ ಕಿಮ್ ತಿಳಿಸಿದ್ದಾರೆ. ಭಾರತದ ಗ್ರಾಹಕರಿಗೆ ಮೊದಲ ಕಾಂಪ್ಯಾಕ್ಟ್ ಎಸ್​ಯುುವಿ ಲೈನ್ ಮಾದರಿಯ ಕಾರು ಇದಾಗಿದೆ. ಟೆಸ್ಟ್ ಡ್ರೖೆವ್ ಟ್ರಾ್ಯಕ್, ಸೇವಾ ಕೇಂದ್ರ, ಮಿನಿ ಗೇಮ್ ಪೋಟೋ ಬೂತ್ ಮತ್ತು ಟ್ರೆಷರ್ ಹಂಟ್ ಸೇರಿ ವಿವಿಧ ಸೌಲಭ್ಯಗಳಿವೆ ಎಂದು ಅವರು ವಿವರಿಸಿದ್ದಾರೆ.

    ಕಾರಿನಲ್ಲಿವೆ ಹಲವು ವಿಶೇಷತೆಗಳು
    ಅಲೆಕ್ಸಾ, ಗೂಗಲ್ ವಾಯ್ಸ್​ ಮ್ಯಾಪ್, ಸಂಗೀತ, ಒಳಗೆ ಮತ್ತು ಹೊರಗೆ ಡ್ಯುಯಲ್ ಕ್ಯಾಮರಾ, ಎಲ್​ಸಿಡಿ ಡಿಸ್​ಪ್ಲೇ, ಅಪ್ಲಿಕೇಶನ್ ಆಧಾರಿತವಾಗಿ ವೈರ್​ಲೆಸ್ ಸ್ಮಾರ್ಟ್​ಪೋನ್ ಸಂಪರ್ಕ, ತುರ್ತು ರೆಕಾರ್ಡಿಂಗ್ ಆಯ್ಕೆ, 4 ಡಿಸ್ಕ್ ಬ್ರೇಕ್, ಹಿಲ್ ಅಸಿಸ್ಟ್ ಕಂಟ್ರೋಲ್, ವಾಹನ ಸ್ಥಿರತೆ ನಿರ್ವಹಣೆ, ಡ್ಯುಯಲ್ ಏರ್ ಬ್ಯಾಗ್, ರ್ಪಾಂಗ್ ಕ್ಯಾಮೆರಾ, ಹೆಡ್​ಲ್ಯಾಂಪ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಸ್ಮಾಟ್ ಎಲೆಕ್ಟ್ರಿಕ್ ಸನ್​ರೂಪ್, ವೈರ್​ಲೈಸ್ ಪೋನ್ ಚಾರ್ಜರ್, ಅಸನದ ಮುಂಭಾಗ ಮತ್ತು ಹಿಂಭಾಗ ಯುಎಸ್​ಬಿ ಚಾರ್ಜರ್ ಸೌಲಭ್ಯಗಳನ್ನು ‘ಹ್ಯುಂಡೈ ವೆನ್ಯೂ ಎನ್ ಲೈನ್’ ಹೊಂದಿದೆ.

    ರಸ್ತೆಗುಂಡಿಗಳ ನಡುವೆ ವೆಡ್ಡಿಂಗ್​ ಫೋಟೋಶೂಟ್! ವಧುವಿನ ನಡೆಗೆ ನೆಟ್ಟಿಗರಿಂದ ಬಹುಪರಾಕ್​

    ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹ: ಶಿಗ್ಗಾವಿಯಲ್ಲಿ ಬೃಹತ್​ ಪ್ರತಿಭಟನೆ, ಸಿಎಂ ಮನೆಯತ್ತ ಹೊರಟ ಮೆರವಣಿಗೆ

    ವಿವಿಧ ಸಂಘಟನೆಗಳ ಸದಸ್ಯರ ವಿರುದ್ಧದ 35 ಕ್ರಿಮಿನಲ್​ ಕೇಸ್​ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ಅಸ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts