More

    ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ: ಹಿಂದು ಸಂಘಟನೆಗಳಿಂದ ಹರ್ಷೋದ್ಘಾರ

    ಹುಬ್ಬಳ್ಳಿ: ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹೈಕೋರ್ಟ್​ ಅನುಮತಿಯಿಂದ ಖುಷಿಯಾಗಿರುವ ಹಿಂದು ಸಂಘಟನೆಗಳು ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಕೂರಿಸುವ ಮೂಲಕ ಹರ್ಷೋದ್ಘಾರ ಮೊಳಗಿಸಿದ್ದಾರೆ.

    ಈದ್ಗಾ ಮೈದಾನದಲ್ಲಿ ಸಿಂಹಾಸನಾರೂಢ ಗಣೇಶನ ಮೂರ್ತಿಯನ್ನು ಹಿಂದು ಸಂಘಟನೆಗಳು ಪ್ರತಿಷ್ಠಾಪಿಸಿವೆ. ಸುಮಾರು ಮೂರು ಅಡಿ ಎತ್ತರದ ಗಣೇಶ ವಿರಾಜಮಾನನಾಗಿ ಕುಳಿತು ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ಈ ಮೊದಲು ಮಧ್ಯಾಹ್ನಕ್ಕೆ ಮೂರ್ತಿ ಕೂರಿಸಲು ಸಂಘಟನೆಗಳು ಯೋಜಿಸಿದ್ದವು. ಆದರೆ, ಇಂದು ಬೆಳಗ್ಗೆ 7 ಗಂಟೆಗೆ ಸಾಂಕೇತಿವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದಾರೆ. ಮಧ್ಯಾಹ್ನದ ಬಳಿಕ ದೊಡ್ಡ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

    ಗಣೇಶೋತ್ಸವ ಪರಂಡಾಲದಲ್ಲಿ ವೀರ್ ಸಾವರ್ಕರ್​ಗೆ ಜೈ ಎಂದು ಘೋಷಣೆ ಕೂಗಲಾಯಿತು. ಅಲ್ಲದೆ, ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಘೋಷಣೆ ಮೊಳಗಿಸಿದರು.

    ಈದ್ಗಾ ಮೈದಾನದಲ್ಲಿ ಗಣೇಶ ದರ್ಶನದ ಬಳಿಕ ಮಾತನಾಡಿದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್​ ಮುತಾಲಿಕ್, ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ನಿನ್ನೆ ರಾತ್ರಿ ಆನಂದದ ಸಂಗತಿ ಸಿಕ್ಕಿತು. ನ್ಯಾಯಾಲಯ ಮೂಲಕ ಸಿಹಿ ಸಂಗತಿ ದೊರಕಿತು. ಗಣೇಶ ಪ್ರತಿಷ್ಠಾಪನೆಗೆ ವಿರೋಧಿಸಿದವರಿಗೆ ಕೋರ್ಟ್​ ಛೀಮಾರಿ ಹಾಕಿದೆ ಎಂದರು.

    ಈದ್ಗಾ ಮೈದಾನ ಸರಕಾರಕ್ಕೆ ಸೇರಿದೆ. ಇದೊಂದು ಐತಿಹಾಸಿಕ ದಿನ. ನಮ್ಮ ಭಾವನೆಗೆ ವಿರೋಧಿಸಿದವರಿಗೆ ಕಪಾಳ ಮೋಕ್ಷವಾಗಿದೆ. ಉತ್ಸವ ಆರಂಭಿಸಿ 129 ವರ್ಷವಾಗಿದೆ. ಬ್ರಿಟೀಷರು ವಿರೋಧ ಮಾಡಲಿಲ್ಲ. ಆದರೆ, ಕಾಂಗ್ರೆಸ್​ನವರು ಕುಮ್ಮಕ್ಕು ಕೊಟ್ಟು ಮುಸ್ಲಿಮರನ್ನು ಕೋರ್ಟ್​ಗೆ ಕಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ಇಂದು ಕೋರ್ಟ್​ ಹೋಗಿ ತಡೆಯಲು ಯತ್ನಿಸುತ್ತಿದ್ದಾರೆ. ನಿಮಗೆ ಗಣೇಶನ ಶಾಪ ತಟ್ಟುತ್ತದೆ. ನೀವು ಯಾವುದೇ ಕೋರ್ಟ್​ಗೆ ಹೋಗಿ, ಈಗಾಗಲೇ ಪ್ರತಿಷ್ಠಾಪನೆ ಆಗಿದೆ. ಈಗಾಗಲೇ ಗಣೇಶ ಪೂಜೆ ಆಗಿದೆ. ಯಾವ ಶಕ್ತಿಯೂ ಇದನ್ನು ತಡೆಯೋಕೆ ಸಾಧ್ಯವಿಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಅಪ್ಪಳಕ್ಕಾಗಿ ಮದುವೆ ಮಂಟಪದಲ್ಲಿ ನಡೆಯಿತು ಭಾರಿ ಗಲಾಟೆ: ನಷ್ಟವಾಗಿದ್ದು ಬರೋಬರಿ 1.5 ಲಕ್ಷ ರೂಪಾಯಿ

    ಅಕ್ಕಿ ವ್ಯಾಪಾರಿ ಬಳಿ 5 ಲಕ್ಷ ರೂ.ಗೆ ಬೆದರಿಕೆ ಹಾಕಿ ಪೊಲೀಸರ ಕೈಗೆ ಸಿಕ್ಕಿಬಿದ್ದ 6 ಮಂದಿ ನಕಲಿ ಪತ್ರಕರ್ತರು!

    ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದಕ್ಕೇ ಮಹಿಳೆಗೆ ಶಿಕ್ಷೆ- ಮಾನವ ಹಕ್ಕುಗಳ ಕಾರ್ಯಕರ್ತರ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts