More

    ಸಿಎಂ ಇದ್ದ ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆ: ಅರ್ಧ ಗಂಟೆ ಆಗಸದಲ್ಲೇ ಸುತ್ತಾಡಿ ಲ್ಯಾಂಡ್​ ಆದ ವಿಮಾನ ​

    ಹುಬ್ಬಳ್ಳಿ: ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಅವರಿದ್ದ ವಿಮಾನ ಲ್ಯಾಡಿಂಗ್​ ಸಮಸ್ಯೆಯಿಂದಾಗಿ ಅಕಾಶದಲ್ಲೇ ಕೆಲ ಕಾಲ ಸುತ್ತಾಟ ನಡೆಸಿದ ಘಟನೆ ನಡೆದಿದೆ. ಕೊನೆಗೂ ವಿಮಾನ ಲ್ಯಾಂಡ್​ ಆಗಿದೆ.

    ಬೊಮ್ಮಾಯಿ ಅವರಿಂದು 6E7227 ಇಂಡಿಗೋ ವಿಮಾನದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ವಿಮಾನದಲ್ಲಿ ಸಿಎಂ ಜತೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಕೂಡ ಇದ್ದರು. ವಿಮಾನ ಬೆಳಗ್ಗೆ 7.30ಕ್ಕೆ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ, ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಲ್ಯಾಂಡಿಂಗ್​ ಸಮಸ್ಯೆ ಎದುರಾಗಿ ವಿಮಾನ ಆಗಸದಲ್ಲೇ ಕೆಲ ಕಾಲ ಸುತ್ತಾಟ ನಡೆಸಿತು.

    ಸತತ ಅರ್ಧ ಗಂಟೆಗಳ ಬಳಿಕ ವಿಮಾನ ಹುಬ್ಬಳ್ಳಿ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್​ ಆಗಿದೆ. ಒಂದು ವೇಳೆ ಲ್ಯಾಂಡ್​ ಆಗದೇ ಹೋಗಿದ್ದರೆ, ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಮಾಡುವ ಸಾಧ್ಯತೆ ಇತ್ತು. ಆದರೆ, ಕೊನೆಗೂ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲೇ ಸುರಕ್ಷಿತವಾಗಿ ವಿಮಾನ ಲ್ಯಾಂಡ್​ ಆಗಿದೆ. (ದಿಗ್ವಿಜಯ ನ್ಯೂಸ್​)

    ಬೆನ್ನ ಹಿಂದೆಯೇ ಜವರಾಯ ಹಿಂಬಾಲಿಸುತ್ತಿರುವುದನ್ನು ನೋಡದೇ ಸಜೀವ ದಹನವಾದ ರೈತ

    ಜನಜಂಗುಳಿಗೆ ಬೇಕು ಬ್ರೇಕ್: ಕರೊನಾ ತಡೆಗೆ ತಜ್ಞರ ಸಲಹೆ; ಮದುವೆ, ಹಬ್ಬ, ಸಮಾರಂಭಗಳಿಗೆ ನಿರ್ಬಂಧ

    ಶಾಲೆ ಮುಚ್ಚಲ್ಲ, ಭಯ ಬೇಕಿಲ್ಲ: 1-10ನೇ ತರಗತಿ ಮಕ್ಕಳಲ್ಲಿ ಸೋಂಕು ಕಂಡಿಲ್ಲ, ಸಚಿವ ನಾಗೇಶ್ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts