More

    ಬೆನ್ನ ಹಿಂದೆಯೇ ಜವರಾಯ ಹಿಂಬಾಲಿಸುತ್ತಿರುವುದನ್ನು ನೋಡದೇ ಸಜೀವ ದಹನವಾದ ರೈತ

    ಜಗಿತ್ತಲ: ಹುಲ್ಲಿನ ಮೆದೆ ಉಳಿಸಲು ಹೋಗಿ ರೈತನೊಬ್ಬ ಸಜೀವ ದಹನವಾಗಿರುವ ಘಟನೆ ತೆಲಂಗಾಣದ ಜಗಿತ್ತಲದಲ್ಲಿ ನಡೆದಿದೆ.

    ಪೊಥುಗಂತಿ ಲಕ್ಷ್ಮಣ್​ ಗೌಡ (60) ಮೃತ ರೈತ. ಈತ ಜಗಿತ್ತಲ ಜಿಲ್ಲೆಯ ವೆಲ್ದುರ್ತಿ ಗ್ರಾಮದ ನಿವಾಸಿ. ಕಳೆದ ಮಂಗಳವಾರ ನಡೆದ ಅಗ್ನಿ ದುರಂತದಲ್ಲಿ ದಾರುಣ ಸಾವಿಗೀಡಾಗಿದ್ದಾರೆ.

    ಲಕ್ಷ್ಮಣ್​ ಗೌಡರಿಗೆ ಎರಡು ಎಕರೆ ಜಮೀನಿದೆ. ಇತ್ತೀಚೆಗಷ್ಟೇ ಭತ್ತದ ಕಟಾವು ಮಾಡಿದ್ದರು. ಬಳಿಕ ಖಾಲಿ ಭತ್ತದ ಗದ್ದೆಗೆ ಬೆಂಕಿ ಇಟ್ಟಿದ್ದರು. ಆದರೆ, ಬೆಂಕಿಯ ಕೆನ್ನಾಲಿಗೆ ಹುಲಿನ ಮೆದೆ ಇರುವ ಕಡೆ ಚಾಚುವುದನ್ನು ನೋಡಿದ ರೈತ ಅದನ್ನು ತಡೆಯಲು ಯತ್ನಿಸಿದ್ದಾರೆ. ಕಡ್ಡಿಯೊಂದನ್ನು ತೆಗೆದುಕೊಂಡು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ, ತನ್ನ ಬೆನ್ನ ಹಿಂದೆಯೇ ಬೆಂಕಿ ರೂಪದಲ್ಲಿ ಜವರಾಯ ಬರುತ್ತಿರುವುದನ್ನು ಲಕ್ಷ್ಮಣ್​ ಗೌಡ ಗಮನಿಸಿಯೇ ಇಲ್ಲ.

    ಬೆಂಕಿಯ ತೀವ್ರತೆ ಹೆಚ್ಚಾಗುತ್ತಾ ಲಕ್ಷ್ಮಣ್​ ಗೌಡರ ಸುತ್ತ ಬೆಂಕಿ ಹರಡಿಕೊಂಡಿದೆ. ಹುಲಿನ ಮೆದೆಗು ತಗುಲಿ ಬೆಂಕಿಯ ಜ್ವಾಲೆ ಹೆಚ್ಚಾಗಿದೆ. ಲಕ್ಷ್ಮಣ್​ ಗೌಡರ ತಪ್ಪಿಸಿಕೊಳ್ಳುವ ಪ್ರಯತ್ನ ವಿಫಲವಾಗಿ ಕೊನೆಗೆ ಬೆಂಕಿಯ ಜ್ವಾಲೆಯ ಬಲೆಯಲ್ಲಿ ಸಿಲುಕಿ ಸಜೀವ ದಹನವಾಗಿದ್ದಾರೆ. ಘಟನಾ ಸ್ಥಳಕ್ಕೆ ಜಗಿತ್ತಲ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಜಗಿತ್ತಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. (ಏಜೆನ್ಸೀಸ್​​)

    ಅಂತರ್ಜಾತಿ ಮದ್ವೆಗೆ ವಿರೋಧಿಸಿ ಯುವತಿ ಕುಟುಂಬದಿಂದ ಬೆದರಿಕೆ: ಕೊಪ್ಪಳ ಎಸ್ಪಿ ಮೊರೆ ಹೋದ ಲವರ್ಸ್​

    ಬಹುಮಾನಕ್ಕಾಗಿ 3 ದಶಕದ ಅಲೆದಾಟ, ಇನ್ನೂ ನಿಂತಿಲ್ಲ ಹೋರಾಟ; ಪಶ್ಚಿಮಘಟ್ಟದಲ್ಲಿ ಸೇನೆ ಹೆಲಿಕಾಪ್ಟರ್ ಹುಡುಕಿಕೊಟ್ಟ ಯುವಕ ಈಗ ವೃದ್ಧ..

    ಜನಜಂಗುಳಿಗೆ ಬೇಕು ಬ್ರೇಕ್: ಕರೊನಾ ತಡೆಗೆ ತಜ್ಞರ ಸಲಹೆ; ಮದುವೆ, ಹಬ್ಬ, ಸಮಾರಂಭಗಳಿಗೆ ನಿರ್ಬಂಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts