More

    ಬ್ಯಾನ್​ ಆದೇಶ ಬೆನ್ನಲ್ಲೇ ಪಿಎಫ್​ಐಗೆ ಮತ್ತೊಂದು ಶಾಕ್: 2 ವಾರಗಳು ಗಡುವು ಕೊಟ್ಟ ಕೇರಳ ಹೈಕೋರ್ಟ್​

    ತಿರುವನಂತಪುರಂ: ಪಾಫುಲ್ಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಸಂಘಟನೆಗೆ ಶಾಕ್​ ಮೇಲೆ ಶಾಕ್​ ಎದುರಾಗುತ್ತಿದೆ. ಸಂಘಟನೆಯನ್ನೇ ಬ್ಯಾನ್​ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಕೇರಳ ಹೈಕೋರ್ಟ್​ ಪಿಎಫ್​ಐಗೆ ಮತ್ತೊಂದು ಶಾಕ್​ ನೀಡಿದೆ. ಎರಡು ವಾರದ ಒಳಗೆ 5.20 ಕೋಟಿ ರೂಪಾಯಿ ಡೆಪಾಸಿಟ್​ ಮಾಡುವಂತೆ ಕೋರ್ಟ್​ ಆದೇಶಿಸಿದೆ.

    ಪಿಎಫ್​ಐ ಕಚೇರಿ ಹಾಗೂ ಮುಖಂಡರ ಮನೆಗಳನ್ನು ಗುರಿಯಾಗಿರಿಸಿ ರಾಷ್ಟ್ರೀಯ ತನಿಖಾ ಆಯೋಗ(ಎನ್​ಐಎ) ಮತ್ತು ಜಾರಿ ನಿರ್ದೇಶನಾಲಯ ಸೆ.22ರಂದು ನಡೆದ ದಾಳಿಯನ್ನು ಖಂಡಿಸಿ, ಕೇರಳದಲ್ಲಿ ಸೆ.24ರಂದು ಪಿಎಫ್​ಐ ಕಾರ್ಯಕರ್ತರು ಬಂದ್​ಗೆ ಕರೆ ನೀಡಿ, ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಹಿಂಸೆಗೆ ತಿರುಗಿ ಸಾಕಷ್ಟು ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಪೊಲೀಸರ​ ಮೇಲೆಯೂ ಹಲ್ಲೆ ನಡೆದಿತ್ತು. ಅದೇ ದಿನ ಪಿಎಫ್​ಐಗೆ ಕೇರಳ ಹೈಕೋರ್ಟ್​ ಎಚ್ಚರಿಕೆ ನೀಡಿತ್ತು. ಪಿಎಫ್​ಐ ನಾಯಕರ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಅಲ್ಲದೆ, ಅನುಮತಿ ಇಲ್ಲದೆ ಯಾರೊಬ್ಬರು ಬಂದ್​ಗೆ ಕರೆ ನೀಡುವಂತಿಲ್ಲ ಎಂದು ಕೋರ್ಟ್​ ಖಡಕ್​ ಆಗಿ ಹೇಳಿತ್ತು.

    ಇದೀಗ ಮಹತ್ವದ ಆದೇಶ ಹೊರಡಿಸಿರುವ ಕೇರಳ ಹೈಕೋರ್ಟ್​ ಹಿಂಸಾತ್ಮಕ ಪ್ರತಿಭಟನೆಯ ದಿನ ಸರ್ಕಾರಿ ಆಸ್ತಿ-ಪಾಸ್ತಿಗೆ ಹಾನಿಯುಂಟು ಮಾಡಿದ್ದಕ್ಕೆ ನಷ್ಟ ಪರಿಹಾರ ಕಟ್ಟಿಕೊಡಲು ಆದೇಶ ಹೊರಡಿಸಿದೆ. ಎರಡು ವಾರಗಳ ಒಳಗೆ 5.20 ಕೋಟಿ ರೂಪಾಯಿಯನ್ನು ಡೆಪಾಸಿಟ್​​ ಮಾಡಲು ಸೂಚಿಸಿದೆ. ಒಂದು ವೇಳೆ ಪರಿಹಾರ ಹಣವನ್ನು ಪಾವತಿಸದೇ ಹೋದರೆ, ಸಂಘಟನೆಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

    ಕಾನೂನುಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ ಪಾಪುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಸಂಘಟನೆಯನ್ನು ಬ್ಯಾನ್​ ಮಾಡಿ ಕೇಂದ್ರ ಸರ್ಕಾರ ಸೆ.28ರಂದು ಆದೇಶ ಹೊರಡಿಸಿದೆ. ಪಿಎಫ್​ಐ ಮತ್ತು ಅದರ ಅಂಗ ಸಂಸ್ಥೆಗಳು ಸೇರಿದಂತೆ 8 ಸಂಘಟನೆಗಳನ್ನು 5 ವರ್ಷಗಳವರೆಗೆ ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಆದೇಶವನ್ನು ಹೊರಡಿಸಿದೆ. ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ) ಅಡಿಯಲ್ಲಿ ಸಂಘಟನೆಗಳನ್ನು ಸರ್ಕಾರ ಬ್ಯಾನ್​ ಮಾಡಿದೆ.

    ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹ, ತರಬೇತಿ ಶಿಬಿರಗಳ ಆಯೋಜನೆ, ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರ ಮನವೊಲಿಸುವುದು ಮತ್ತು ಉಗ್ರರೊಂದಿಗೆ ಸಂಪರ್ಕ ಸೇರಿದಂತೆ ಇನ್ನಿತರ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಆರೋಪ ನಿಷೇಧಿತ ಸಂಘಟನೆಗಳ ಮೇಲಿದ್ದು, ಈ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳು ದಾಳಿ ನಡೆಸಿತ್ತು. ದಾಳಿಯ ಬಳಿಕ ಬಂದ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಬ್ಯಾನ್​ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ. (ಏಜೆನ್ಸೀಸ್​)

    ನಟ ಮಹೇಶ್​ ಬಾಬು ಮನೆಯಲ್ಲಿ ಕಳ್ಳತನ ಮಾಡಲು ಕಾಂಪೌಂಡ್ ಏರಿದ ಬೆನ್ನಲ್ಲೇ ಖದೀಮನಿಗೆ ಕಾದಿತ್ತು ಶಾಕ್​!

    ರಾಜಸ್ಥಾನ ಬಿಕ್ಕಟ್ಟು ಅಂತ್ಯ: ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಗೆಹ್ಲೋಟ್​ ಬೈ ಬೈ- ಶಶಿ, ಸಿಂಗ್​ ನಡುವೆ ಫೈಟ್

    ಬಾರ್​ಗರ್ಲ್​ಗೆ 80 ಲಕ್ಷ ರೂ. ಕೊಟ್ಟು ರೇಪ್​ ಕೇಸ್​ನಿಂದ ಕೈತೊಳೆದುಕೊಂಡ ಸಚಿವನ ಪುತ್ರ! ಕೋರ್ಟ್​ ಅಸ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts