More

    ಮೊದಲು ಮಾನಸಿಕ ಹಿಂಸೆ ಕೊಡುವುದನ್ನು ನಿಲ್ಲಿಸಿ: ಫೇಸ್​ಬುಕ್​ ಲೈವ್​ನಲ್ಲಿ ಅಳಲು ತೋಡಿಕೊಂಡ ಜೆಡಿಎಸ್​ ಶಾಸಕ

    ಹಾಸನ: ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಶಾಸಕ ಕೆ.ಎಂ. ಶಿವಲಿಂಗೇಗೌಡ ಮತ್ತು ಬಿಜೆಪಿಯ ಎನ್.ಆರ್.ಸಂತೋಷ್ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇರುತ್ತಿದ್ದು, ಫೇಸ್‌ಬುಕ್ ಲೈವ್ ಮೂಲಕ ಶಿವಲಿಂಗೇಗೌಡ ಅವರು ಅಳಲು ತೋಡಿಕೊಂಡಿದ್ದಾರೆ.

    ಶಿವಲಿಂಗೇಗೌಡ ಅವರು ಅರಸೀಕೆರೆ ಕ್ಷೇತ್ರದ ಜೆಡಿಎಸ್​ ಶಾಸಕ. ಎನ್​. ಆರ್​. ಸಂತೋಷ್​ ಮಾಜಿ ಸಿಎಂ ಯಡಿಯೂರಪ್ಪ ಅವರ ಮಾಜಿ ರಾಜಕೀಯ ಕಾರ್ಯದರ್ಶಿ. ಇಬ್ಬರ ನಡುವಿನ ಜಟಾಪಟಿ ಮುಂದುವರಿದಿದೆ.

    ಕಳೆದ ಮೂರು ವರ್ಷಗಳಿಂದ ಕರೊನಾದಿಂದ ಯಾವುದೇ ಜಾತ್ರೆ, ರಸಮಂಜರಿ ಹಾಗೂ ನಾಟಕಗಳು ನಡೆದಿಲ್ಲ. ಈ ಬಾರಿ ಕರೊನಾ ಇಲ್ಲದ ಕಾರಣ ಹಬ್ಬ, ಜಾತ್ರೆಗಳು, ರಸಮಂಜರಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ನಾನು ಯಾವುದೇ ಪಕ್ಷದ ಮುಖಂಡರನ್ನು ನಿಂದಿಸಿಲ್ಲ. ಆದರೆ, ಕೆಲವು ಮುಖಂಡರುಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನನ್ನ ಬಗ್ಗೆ ವೈಯುಕ್ತಿಕ ನಿಂದನೆ ಮಾಡುತ್ತಿದ್ದಾರೆ. ಕೆರೆಸಾದರಹಳ್ಳಿ, ರಂಗನಾಯಕನಕೊಪ್ಪಲು ಅನೇಕ ಗ್ರಾಮಗಳಲ್ಲಿ ನನ್ನ ಬಗ್ಗೆ ವೈಯುಕ್ತಿಕ ನಿಂದನೆ ಮಾಡುತ್ತಿರುವುದು ತಿಳಿದುಬಂದಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀವು ವೈಯುಕ್ತಿಕ, ರಾಜಕೀಯ ನಿಂದನೆ ಮಾಡಬೇಡಿ, ವೇದಿಕೆಯಿಂದ ಎಳೆದು ಹಾಕಬೇಕಾಗುತ್ತದೆ ಎಂದು ನಾನು ಹೇಳಿದ್ದು ನಿಜ ಎಂದರು.

    ನಮ್ಮ ಮನೆ, ಆಫೀಸ್‌ಗೆ ಬಂದು ಕದ್ದು ವಿಡಿಯೋ, ಆಡಿಯೋ ರೆಕಾರ್ಡ್ ಮಾಡಿಕೊಂಡು ಹೋಗ್ತಿರಲಾ ಇದು ನಿಮ್ಮ ಪ್ರವೃತ್ತಿನಾ? ಸಾಕ್ಷ್ಯಾಧಾರಗಳಿದ್ರೆ ನೇರವಾಗಿ ನನ್ನ ಮೇಲೆ ಆರೋಪ ಮಾಡಿ. ನಾಯಘಟ್ಟಹಳ್ಳಿಯಲ್ಲಿ ಶಾಲಾ ಮಕ್ಕಳ ಊಟದಲ್ಲಿ ಹಲ್ಲಿ ಬಿದ್ದಿದ್ದಕ್ಕೆ ಶಿವಲಿಂಗೇಗೌಡ ಕಾರಣ ಅಂತಾ ಹೇಳಿದ್ರು. ನಾನು ಅಡಿಗೆ ಮನೆಗೆ ಹೊಗಿದ್ನಾ ಹಲ್ಲಿ ಹಾಕೋಕೆ? ಮೊದಲು ಮಾನಸಿಕ ಹಿಂಸೆ ಕೊಡುವ ಪ್ರವೃತ್ತಿ ನಿಲ್ಲಿಸಿ ಎಂದು ಅಳಲು ತೋಡಿಕೊಂಡರು.

    ಇಂದ್ರಲೋಕ, ಚಂದ್ರಲೋಕ ಎರಡು ತರ್ತಿವಿ ಅಂತಾ ಹೇಳಿ ಇದೀಗ ನೀವು ಮಾಡುತ್ತಿರುವುದು ಏನು? ಜನ‌ ಒಪ್ಪಿದರೆ ನಿಮಗೆ ಚುನಾವಣೆಯಲ್ಲಿ ಆಶೀರ್ವಾದ ಮಾಡ್ತಾರೆ. ನೀವು ಬಂದ ಮೇಲೆ ಎಷ್ಟು ಅಟ್ರಾಸಿಟಿ ಕೇಸ್‌ಗಳಾಗಿವೆ, ದೊಂಬಿಗಳಾಗಿವೆ, ನಿಮ್ಮ ಪಾರ್ಟಿ ಆಫೀಸ್‌ನಲ್ಲೇ ಬಿಜೆಪಿಯವರು ಹೊಡೆದಾಡಿದ್ದಾರೆ. ಆಡಿಯೋ, ವಿಡಿಯೋ ಇಟ್ಟುಕೊಂಡು ಏನೋ ಮಾಡಿಬಿಡ್ತಿನಿ ಅಂದುಕೊಂಡಿದ್ದೀರಾ? ನನಗೆ ಆಡಿಯೋ, ವಿಡಿಯೋ ಗೊತ್ತಿಲ್ಲ, ತಾಂತ್ರಿಕವಾಗಿ ನಾನು ಬಲವಾಗಿಲ್ಲ. ಆದರೆ, ನಮ್ಮ ಹತ್ರನೂ ಒರಿಜಿನಲ್ ವಿಡಿಯೋ ಇದೆ ಅದನ್ನು ಬಿಡ್ತಿವಿ. ಇದು ಹೀಗೆ ಮುಂದುವರೆದರೆ ಮುಂದೆ ಎದುರಿಸಬೇಕಾಗುತ್ತದೆ. ನಾನು ನಮ್ಮ‌ ಕಾರ್ಯಕರ್ತರನ್ನು ತಡೆದಿದ್ದೇನೆ ಎಂದು ಎನ್.ಆರ್.ಸಂತೋಷ್‌ಗೆ ಶಿವಲಿಂಗೇಗೌಡರು ಎಚ್ಚರಿಕೆ ನೀಡಿದರು. (ದಿಗ್ವಿಜಯ ನ್ಯೂಸ್​)

    ಮದ್ಯ ಖರೀದಿಸಲು ಹಣಕ್ಕಾಗಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳನಿಗೆ ಕ್ಷಣಾರ್ಧದಲ್ಲೇ ಬೆನ್ನತ್ತಿದ ಕರ್ಮಫಲ!

    ತನ್ನನ್ನು ಟ್ರೋಲ್​ ಮಾಡಿದ ರೋಹಿತ್​ ಫ್ಯಾನ್ಸ್​ಗಳನ್ನು ಒಂದೇ ಒಂದು ಟ್ವೀಟ್​ ಮೂಲಕ ತಣ್ಣಗಾಗಿಸಿದ ವೀರೂ!

    ಕುವೈತ್​ ಬೆನ್ನಲ್ಲೇ ಬೀಸ್ಟ್​ ಚಿತ್ರಕ್ಕೆ ತಮಿಳುನಾಡಲ್ಲೂ ಎದುರಾಯ್ತು ಸಂಕಷ್ಟ: ಬ್ಯಾನ್​ ಆಗುತ್ತಾ ವಿಜಯ್​ ಸಿನಿಮಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts