More

    ಇದುವರೆಗೂ ನೋಡಿರದ ಅದ್ಭುತ ಕ್ಯಾಚ್​ಗೆ ಸಾಕ್ಷಿಯಾದ್ರೂ ಹರ್ಲೀನ್​ ಡಿಯೋಲ್: ವಿವಿಎಸ್​ ಲಕ್ಷ್ಮಣ್​​ ಮೆಚ್ಚುಗೆ

    ನವದೆಹಲಿ: ಆತಿಥೇಯ ಇಂಗ್ಲೆಂಡ್​ ವಿರುದ್ಧ ಶುಕ್ರವಾರದಿಂದ ಆರಂಭವಾಗಿರುವ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಪ್ರವಾಸಿ ಭಾರತ ಮಹಿಳಾ ತಂಡ ಡಕ್​ವರ್ತ್​ ಲೂಯಿಸ್​ ನಿಯಮದಿಂದಾಗಿ 18 ರನ್​ಗಳಿಂದ ಸೋಲನ್ನು ಅನುಭವಿಸಿದೆ.

    ಶುಕ್ರವಾರ ರಾತ್ರಿ ಇಂಗ್ಲೆಂಡ್​, ನಾರ್ಥ್​ಹಾಂಪ್ಟನ್​ನ ಕೌಂಟಿ ಗ್ರೌಂಡ್​ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋತರೂ, ಟೀಮ್​ ಇಂಡಿಯಾದ ಹರ್ಲೀನ್​ ಡಿಯೋಲ್​ ಅವರ ಅದ್ಭುತ ಕ್ಯಾಚ್​ ಎಲ್ಲರ ಗಮನ ಸೆಳೆಯಿತು.

    ಇಂಗ್ಲೆಂಡ್​ನ ಆ್ಯಮಿ ಎಲೆನ್​ ಜೋನ್ಸ್​ ಬಾರಿಸಿದ ಚೆಂಡು ಬೌಂಡರಿ ಗೆರೆಯಿಂದಾಚೆಗೆ ಬೀಳಬೇಕೆನ್ನುವಷ್ಟೆರಲ್ಲಿ ಲಾಂಗ್​ ಆಫ್​ನಲ್ಲಿದ್ದ ಹರ್ಲೀನ್​ ಡಿಯೋಲ್​, ಡೈವ್​ ಮೂಲಕ ಅದ್ಭುತ ಕ್ಯಾಚ್ ತೆಗೆದುಕೊಂಡರು. ಈ ವಿಡಿಯೋವನ್ನು ಟೀಮ್​ ಇಂಡಿಯಾದ ಮಾಜಿ ಮಾಜಿ ಕ್ರಿಕೆಟಿಗ ವಿವಿಎಸ್​ ಲಕ್ಷ್ಮಣ್​ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಕ್ರಿಕೆಟ್​ ಮೈದಾನದಲ್ಲಿ ಇದುವರೆಗೂ ನಾನು ನೋಡಿರದ ಅದ್ಭುತ ಕ್ಯಾಚ್​ ಇದು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಟೀಮ್​ ಇಂಡಿಯಾದ ಪ್ರಯತ್ನ ನಡುವೆಯೂ ಪಂದ್ಯವು ಇಂಗ್ಲೆಂಡ್​ ಪಾಲಾಯಿತು. ಆಂಗ್ರ ಪರ ಬಿರುಸಿನ ಬ್ಯಾಟಿಂಗ್​ ಪ್ರದರ್ಶನ ನೀಡಿದ ನತಾಲಿಯಾ ಸ್ಕಿವರ್​ 27 ಎಸೆತಗಳಲ್ಲಿ 55 ರನ್​ ಗಳಿಸಿದರೆ, ಜೋನ್​ 27 ಎಸೆತಗಳಲ್ಲಿ 43 ರನ್​ ಕಲೆಹಾಕಿದರು. ಇಬ್ಬರ ಅದ್ಭುತ ಆಟದಿಂದಾಗಿ ಇಂಗ್ಲೆಂಡ್​ 7 ವಿಕೆಟ್​ ನಷ್ಟಕ್ಕೆ 177 ರನ್​ ಕಲೆಹಾಕಿತು.

    ಗುರಿ ಬೆನ್ನತ್ತಿದ ಭಾರತಕ್ಕೆ ಶಫಾಲಿ ವರ್ಮಾ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭಿಕ ಆಘಾತವಾಯಿತು. ಇದರ ಬೆನ್ನಲ್ಲೇ 29 ರನ್​ ಗಳಿಸಿದ ಸ್ಮೃತಿ ಮಂದಾನ ಕೂಡ ಡಗೌಟ್​ ಸೇರಿಕೊಂಡರು. ನಾಯಕಿ ಹರ್ಮನ್​ಪ್ರಿತ್​ ಕೌರ್​ (1) ಜವಬ್ದಾರಿಯುತ ಆಟವಾಡಲಿಲ್ಲ. 3 ವಿಕೆಟ್​ ನಷ್ಟಕ್ಕೆ ಭಾರತ 54 ರನ್​ ಗಳಿಸಿದ್ದಾಗ ಆಗಮಿಸಿದ ಮಳೆ ಇಡೀ ಕ್ರೀಡಾಂಗಣವನ್ನು ಒದ್ದೆ ಮಾಡಿದ ಪರಿಣಾಮ ಕೊನೆಗೆ ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ ಇಂಗ್ಲೆಂಡ್​ ಜಯ ಘೋಷಿಸಲಾಯಿತು.

    ಇನ್ನು ಸರಣಿಯ ಎರಡನೇ ಪಂದ್ಯ ಭಾನುವಾರ ಹೂವ್​ನ ಕೌಂಟಿ ಗ್ರೌಂಡ್​ನಲ್ಲಿ ನಡೆಯಲಿದೆ. (ಏಜೆನ್ಸೀಸ್​)

    ವಿಶ್ವಾದ್ಯಂತ ಕರೊನಾ ಪ್ರಕರಣಗಳಲ್ಲಿ ಮತ್ತೆ ಏರಿಕೆ: 4 ಪ್ರಮುಖ ಕಾರಣ ತಿಳಿಸಿದ ಡಬ್ಲ್ಯುಎಚ್​ಒ ವಿಜ್ಞಾನಿ

    ರಾಕ್​ಲೈನ್ ವೆಂಕಟೇಶ್ ಮನೆಗೆ ಜೆಡಿಎಸ್ ಬೆಂಬಲಿಗರ ಮುತ್ತಿಗೆ ಯತ್ನ, ಸುಮಲತಾ ಮನೆಗೂ ಬಂದೋಬಸ್ತ್​

    ಸೌರವ್​ ಗಂಗೂಲಿ-ನಗ್ಮಾ ಲವ್​ ಬ್ರೇಕಪ್​ ಆಗಿದ್ದೇಕೆ? ಇಲ್ಲಿದೆ ಅಸಲಿ ಕಾರಣ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts