More

    ಚಂದನವನದಲ್ಲಿ ಇದುವರೆಗೂ ಯಾರು ಮಾಡಿರದ ದಾಖಲೆ ಮಾಡಲು ಮುಂದಾದ ಕಬ್ಜ ಸಿನಿಮಾ ತಂಡ..!

    ಬೆಂಗಳೂರು: ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಕಬ್ಜ’ ಚಿತ್ರವು ತನ್ನ ಮೇಕಿಂಗ್​ನಿಂದಲೇ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ. ಕಳೆದ ಒಂದು ವರ್ಷದಿಂದಲೂ ಚಿತ್ರದ ಶೂಟಿಂಗ್​ ನಡೆಯುತ್ತಲೇ ಇದ್ದು, ಯಾವಾಗ ಪೂರ್ಣಗೊಳ್ಳುತ್ತದೆ ಎಂಬ ಎಂಬ ಸುಳಿವು ಕೂಡ ಇಲ್ಲ. ಈ ಹಿಂದೆಯೇ ಸಲಗ ಚಿತ್ರದ ಸಕ್ಸಸ್​ ಈವೆಂಟ್​ನಲ್ಲಿ ನಟ ಶಿವರಾಜ್​ಕುಮಾರ್ ಕೂಡ​ ಸಿನಿಮಾವನ್ನು ಬೇಗ ಮುಗಿಸುವಂತೆ ಕೇಳಿಕೊಂಡಿದ್ದರು.

    ಇನ್ನು ಕಬ್ಜ ಚಿತ್ರತಂಡದ ಒಂದು ವಿಶೇಷತೆಯ ಬಗ್ಗೆ ನಾವಿಲ್ಲಿ ಹೇಳಲೇ ಬೇಕು. ಯಾವುದೇ ಹಬ್ಬ-ಹರಿದಿನ ಅಥವಾ ವಿಶೇಷ ಸಂದರ್ಭ ಬಂದಾಗ ಯಾರೇ ಮಿಸ್​ ಮಾಡಿಕೊಂಡರು ಕಬ್ಜ ಚಿತ್ರತಂಡ ಮಾತ್ರ ಎಲ್ಲರಿಗೂ ಶುಭಕೋರುವುದನ್ನು ಮರೆಯುವುದೇ ಇಲ್ಲ. ವಿಶೇಷ ಸಂದರ್ಭಗಳಲ್ಲಿ ಒಂದೊಂದು ಪೋಸ್ಟರ್​ ಮೂಲಕ ಶುಭ ಕೋರುತ್ತಲೇ ಇದ್ದಾರೆ. ಅದೇ ರೀತಿ ಶಿವರಾತ್ರಿ ಹಬ್ಬಕ್ಕೂ ಒಂದು ಪೋಸ್ಟರ್​ ಮೂಲಕ ಶುಭಾಶಯ ಕೋರಿದೆ.

    ಇನ್ನು ಶುಭಾಶಯ ಪೋಸ್ಟರ್​ ಅನ್ನು ಅಭಿಮಾನಿಗಳು ಮೊದಲೇ ನಿರೀಕ್ಷೆ ಮಾಡಿದ್ದರು. ಯಾವುದೇ ಚಿತ್ರತಂಡದಿಂದ ಅಪ್​ಡೇಟ್​ ಬರದಿದ್ದರೂ ಕಬ್ಜ ಚಿತ್ರದ ಶುಭಾಶಯ ಪೋಸ್ಟರ್​ ಬಂದೇ ಬರುತ್ತದೆ ಎಂದು ಊಹಿಸಿದರು. ಅದು ನಿಜವೂ ಆಯಿತು. ಇದೀಗ ಕಬ್ಜ ಚಿತ್ರ ತಂಡವನ್ನು ಅಭಿಮಾನಿಗಳು ಟ್ರೋಲ್​ ಮಾಡುತ್ತಿದ್ದಾರೆ. ಚಿತ್ರ ತಂಡದವರು ಹಬ್ಬದ ಶುಭಾಶಯ ಕೋರುವ ಪೋಸ್ಟರ್​ಗಳ ಮೂಲಕ ದಾಖಲೆ ಬರೆಯಲು ಹೊರಟ್ಟಿದ್ದು, ನಿರ್ದೇಶಕ ಆರ್​. ಚಂದ್ರು ಅವರು ಗಿನ್ನೆಸ್​ ರೆಕಾರ್ಡ್​ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. ಸಿನಿ ತಂಡವು ಪ್ರತಿ ಹಬ್ಬಗಳಿಗೆ ಶುಭಕೋರಿದ ಎಲ್ಲ ಪೋಸ್ಟರ್​ಗಳನ್ನು ಒಂದೇ ಫ್ರೇಮ್​ನಲ್ಲಿ ಕೂರಿಸಿ ಎಡಿಟ್​ ಮಾಡಲಾದ ಫೋಟೋವನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದು, ಗಿನ್ನೆಸ್​ ರೆಕಾರ್ಡ್​ ಇದು ಅರ್ಹ ಎಂದು ಕಾಲೆಳೆದಿದ್ದಾರೆ.

    ಚಂದನವನದಲ್ಲಿ ಇದುವರೆಗೂ ಯಾರು ಮಾಡಿರದ ದಾಖಲೆ ಮಾಡಲು ಮುಂದಾದ ಕಬ್ಜ ಸಿನಿಮಾ ತಂಡ..!

    ಇನ್ನು ಕಬ್ಜ ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಎಜೆ ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದ್ದು, ಶ್ರೀನಿವಾಸ್ ರಾವ್ ಕೋಟ, ಪ್ರಕಾಶ್ ರಾಜ್, ಜಗಪತಿ ಬಾಬು, ಕಬೀರ್ ದುಹಾನ್ ಸಿಂಗ್ ಮೊದಲಾದವರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಆರ್​.ಚಂದ್ರಶೇಖರ್ ನಿರ್ಮಿಸುತ್ತಿದ್ದು, ಎಂಟಿಬಿ ನಾಗರಾಜ್ ಪ್ರಸ್ತುತಪಡಿಸಲಿದ್ದಾರೆ.

    ಅಪ್ಪುಗೆ ಇಂಟ್ರೊಡಕ್ಷನ್ ಬೇಕಾ?; ‘ಜೇಮ್ಸ್​’ ಟ್ರೇಡ್​​ಮಾರ್ಕ್​ ಹಾಡು ಬಿಡುಗಡೆ

    ಯುದ್ಧಕ್ಕೆ ಹೆದರಿ ಯೂಕ್ರೇನ್​ನಿಂದ ಹೈದರಾಬಾದ್​ಗೆ ಬಂದ್ಲು ನವವಿವಾಹಿತೆ; ಅಲ್ಲಿ ಮದ್ವೆ, ಇಲ್ಲಿ ರಿಸೆಪ್ಷನ್​…

    ಅನಧಿಕೃತ ಈಜುಕೊಳದಲ್ಲಿ ವಿದ್ಯಾರ್ಥಿಯ ಸಾವು, ಮಾಲೀಕ ಪರಾರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts