More

    ತಾಂತ್ರಿಕ ದೋಷದಿಂದ ಜಿಎಸ್​ಎಲ್​ವಿ-ಎಫ್​10 ಮಿಷನ್ ವಿಫಲ: ಇಸ್ರೋ ಮಾಹಿತಿ ​​

    ನವದೆಹಲಿ: ಇಂದು (ಆಗಸ್ಟ್​ 12) ಬೆಳಗ್ಗೆ 5.43ರಲ್ಲಿ ಆಂಧ್ರ ಪ್ರದೇಶದ ಶ್ರೀಹರಿಕೋಟ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿದ್ದ ಭೂ ನಿಗಾವಣೆಯ ಸ್ಯಾಟಲೈಟ್​ ಇಒಎಸ್​-03 ತಾಂತ್ರಿಕ ಅಡಚಣೆಯಿಂದಾಗಿ ವಿಫಲವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.

    ಕ್ರಯೋಜೆನಿಕ್ ಹಂತದ ವೇಳೆ ಉಂಟಾದ ತಾಂತ್ರಿಕ ಅಡಚಣೆಯಿಂದಾಗಿ ಮಿಷನ್​ ಅಪೂರ್ಣವಾಗಿದೆ ಎಂದು ಇಸ್ರೋ ತಿಳಿಸಿದೆ. ಇಒಎಸ್​-03 ಭೂ ನಿಗಾವಣೆಯ ಉಪಗ್ರಹ. ಇದನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಇರಿಸಲು 51.70 ಮೀಟರ್​ ಎತ್ತರದ ಜಿಎಸ್​ಎಲ್​ವಿ-ಎಫ್​10 ರಾಕೆಟ್​ನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. 26 ಗಂಟೆಗಳ ಕೌಂಟ್‌ಡೌನ್ ಮುಗಿದ ನಂತರ ಮುಂಜಾನೆ 5.43ಕ್ಕೆ ಯೋಜಿಸಿದಂತೆಯೇ ಸ್ಪೇಸ್‌ಪೋರ್ಟ್‌ನ ಎರಡನೇ ಉಡಾವಣಾ ಪ್ಯಾಡ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು.

    ಲಿಫ್ಟ್-ಆಫ್‌ಗೆ ಮುಂಚಿತವಾಗಿ, ಲಾಂಚ್ ಆಥರೈಸೇಶನ್ ಬೋರ್ಡ್ ಯೋಜಿಸಿದಂತೆ ಸಾಮಾನ್ಯ ಲಿಫ್ಟ್-ಆಫ್‌ಗಾಗಿ ಡೆಕ್‌ಗಳನ್ನು ತೆರವುಗೊಳಿಸಿತು. ಮೊದಲ ಮತ್ತು ಎರಡನೇ ಹಂತಗಳಲ್ಲಿ ರಾಕೆಟ್​ನ ಕಾರ್ಯಕ್ಷಮತೆ ಸಾಮಾನ್ಯವಾಗಿತ್ತು. ಆದಾಗ್ಯೂ, ಕೆಲವು ನಿಮಿಷಗಳ ನಂತರ ರಾಕೆಟ್​ನಲ್ಲಿ ತಾಂತ್ರಿಕ ಅಡಚಣೆ ಉಂಟಾಗಿದ್ದು ಕಂಡು ಬಂದಿತು ಎಂದು ಮಿಷನ್ ನಿಯಂತ್ರಣ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ.

    ರಾಕೆಟ್​ನ ಕ್ರೆಯೋಜೆನಿಕ್ ಹಂತ ವೇಳೆ ತಾಂತ್ರಿಕ ಅಡಚಣೆ ಕಂಡುಬಂದಿದ್ದರಿಂದ ಮಿಷನ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಹಿಮಾಚಲ ಪ್ರದೇಶದಲ್ಲಿ ಮತ್ತೊಂದು ದುರಂತ: ಭೂಕುಸಿತಕ್ಕೆ 11 ಮಂದಿ ಬಲಿ, 30 ಮಂದಿ ನಾಪತ್ತೆ

    ಸಿಲಿಕಾನ್​ ಸಿಟಿಯಲ್ಲಿ ವಂಚಕ ಕಂಪನಿ! ಟ್ರೇಡ್​ ಆಕ್ಸಿಸ್​ ಕಂಪನಿಯಿಂದ ವಂಚನೆ -ಶೇ. 8 ರವರೆಗೆ ಲಾಭಾಂಶ ಆಮಿಷ

    ಮಧ್ಯರಾತ್ರಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ​ ಮನೆಗೆ ನುಗ್ಗಿ ಎರಡು ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts