More

    ಟೋಲ್​ ಪ್ಲಾಜಾ ಸಿಬ್ಬಂದಿ ಜೊತೆ ಹಾಡಹಗಲೇ ಜಟಾಪಟಿಗೆ ಇಳಿದ ದಿ ಗ್ರೇಟ್​ ಖಲಿ: ವಿಡಿಯೋ ವೈರಲ್​

    ಚಂಡೀಗಢ: ಪಂಜಾಬಿನ ಜಲಂಧರ್​ ಜಿಲ್ಲೆಯ ಫಿಲ್ಲೌರ್​ ಏರಿದಲ್ಲಿರುವ ಟೋಲ್​ ಪ್ಲಾಜಾದ ಸಿಬ್ಬಂದಿ ಜೊತೆ ಡಬ್ಲ್ಯುಡಬ್ಲ್ಯುಇ ಮನರಂಜಾ ಕ್ರೀಡೆಯ ಕುಸ್ತಿಪಟು ಭಾರತದ ದಿ ಗ್ರೇಟ್​ ಖಲಿ ಅಲಿಯಾಸ್​ ದಿಲಿಪ್​ ಸಿಂಗ್​ ರಾಣಾ ಅವರು ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ.

    ವೃತ್ತಿಪರ ಕುಸ್ತಿಪಟ್ಟು ಆಗಿರುವ ಗ್ರೇಟ್​ ಖಲಿ ಟೋಲ್​ ಸಿಬ್ಬಂದಿ ಒಬ್ಬರ ಕಪಾಳಕ್ಕೆ ಬಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ಟೋಲ್​ ಸಿಬ್ಬಂದಿ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಖಲಿ ಆರೋಪ ಮಾಡಿದರೆ, ನಮ್ಮ ಸಿಬ್ಬಂದಿಯೊಬ್ಬರ ಕೆನ್ನೆಗೆ ಖಲಿ ಬಾರಿಸಿದರು ಎಂದು ವಿಡಿಯೋದಲ್ಲಿರುವ ಮತ್ತೊಬ್ಬ ವ್ಯಕ್ತಿ ಪ್ರತ್ಯಾರೋಪ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಟೋಲ್​ ಸಿಬ್ಬಂದಿ ಐಡಿ ಕಾರ್ಡ್​ ತೋರಿಸುವಂತೆ ಖಲಿ ಅವರನ್ನು ಕೇಳಿದ್ದಾರೆ.

    ಅಂದಹಾಗೆ ಖಲಿ ಅವರು ಜಲಂಧರ್​ನಿಂದ ಕರ್ನಲ್​ಗೆ ಹೋಗುತ್ತಿದ್ದರು. ಟೋಲ್​ ಸಿಬ್ಬಂದಿ ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದರು. ಆದರೆ, ನಾನು ಅದಕ್ಕೆ ನಿರಾಕರಿಸಿದೆ. ಇದಾದ ಬಳಿಕ ಟೋಲ್​ ಸಿಬ್ಬಂದಿಯೇ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಖಲಿ ಆರೋಪ ಮಾಡಿದ್ದಾರೆ.

    ಟೋಲ್ ಪ್ಲಾಜಾ ಸಿಬ್ಬಂದಿ ಖಲಿ ಅವರಿದ್ದ ವಾಹನವನ್ನು ಸುತ್ತುವರಿದು ವಾಗ್ವಾದ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಖಲಿ ಅವರ ಕಾರು ಮುಂದೆ ಚಲಿಸದಂತೆ ತಡೆಯಲು ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳಿದ್ದವು. ಅಷ್ಟರಲ್ಲಿ ಪಿಸಿಆರ್ ವ್ಯಾನ್ ಅಲ್ಲಿಗೆ ಬಂದಿದ್ದು, ಟೋಲ್ ಪ್ಲಾಜಾ ಕಾರ್ಯಕರ್ತರು ಬ್ಯಾರಿಕೇಡ್​ಗಳನ್ನು ತೆಗೆದಿದ್ದಾರೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಒಬ್ಬ ಪೊಲೀಸ್ ಅಧಿಕಾರಿ ವಾಹನ ಇಳಿದು ಹತ್ತಿರಕ್ಕೆ ಬಂದರು. ಈ ವೇಳೆ ಟೋಲ್ ಪ್ಲಾಜಾ ಸಿಬ್ಬಂದಿ ಮತ್ತು ಖಲಿ ಇಬ್ಬರೂ ಪೊಲೀಸ್ ಅಧಿಕಾರಿಗೆ ನಡೆದ ಘಟನೆಯನ್ನು ತಮ್ಮದೇ ಆವೃತ್ತಿಯಲ್ಲಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಖಲಿ ಅವರು ಕಾರಿನಿಂದ ಇಳಿದುಬಂದು ಬ್ಯಾರಿಕೇಡ್‌ಗಳನ್ನು ತೆಗೆದುಹಾಕುತ್ತಿದ್ದಂತೆ, ಖಲಿಯ ಚಾಲಕ ತನ್ನ ಕಾರನ್ನು ಮುಂದೆ ಚಲಿಸಿದರು. ಈ ವೇಳೆ ಟೋಲ್ ಪ್ಲಾಜಾ ಸಿಬ್ಬಂದಿಯೊಬ್ಬ ಬ್ಯಾರಿಕೇಡ್ ಅಡ್ಡಹಾಕಲು ಪ್ರಯತ್ನಿಸಿದಾಗ, ಖಲಿ ಆತನನ್ನು ತಡೆದರು ಮತ್ತು ತನ್ನ ಕಾರಿನ ಕಡೆಗೆ ನಡೆದರು. ಆ ಸಮಯದಲ್ಲಿ ಟೋಲ್ ಪ್ಲಾಜಾದ ಸಿಬ್ಬಂದಿ ಅವನು ನಡೆದುಕೊಂಡು ಹೋಗುತ್ತಿದ್ದ ದಾರಿಯನ್ನು ತೋರಿಸುತ್ತಾ ಖಲಿಯನ್ನು ಮಂಗ ಎಂದು ಕರೆದನು.

    ಖಲಿ ಅವರು ಕೆಲವು ವರ್ಷಗಳ ಹಿಂದೆ WWE ತೊರೆದು ಭಾರತಕ್ಕೆ ಮರಳಿದರು. ಅವರು ಈಗ ಜಲಂಧರ್‌ನಲ್ಲಿ ಕಾಂಟಿನೆಂಟಲ್ ಕುಸ್ತಿ ಅಕಾಡೆಮಿ ಎಂದು ಕರೆಯಲ್ಪಡುವ ತಮ್ಮದೇ ಆದ ಅಕಾಡೆಮಿಯನ್ನು ನಡೆಸುತ್ತಾರೆ, ಅಲ್ಲಿ ಅವರು ಹೊಸ ಕುಸ್ತಿಪಟುಗಳನ್ನು ಸಿದ್ಧಪಡಿಸುತ್ತಿದ್ದಾರೆ. (ಏಜೆನ್ಸೀಸ್​)

    ಕಾಲೇಜಿಗೆ ಹೋದ ವಿದ್ಯಾರ್ಥಿನಿ ನಾಪತ್ತೆ: Instagram ಸುಳಿವು ಹುಡುಕಿ ಹೊರಟ ಪೊಲೀಸರಿಗೆ ಕಾದಿತ್ತು ಸರ್ಪ್ರೈಸ್​!

    ಭಾರತಕ್ಕೆ ಭೇಟಿ ನೀಡಿದ್ದ ಪಾಕ್​ ಅಂಕಣಕಾರನ ಮುಖವಾಡ ಬಯಲು: ದೇಶದ ಭದ್ರೆತೆಗೆ ಹೊಸ ಸವಾಲು

    ದೇಶದ ಅತಿ ಕಿರಿಯ ಮೇಯರ್ ವರಿಸಲಿದ್ದಾರೆ ರಾಜ್ಯದ ಅತಿ ಕಿರಿಯ MLA! ಸೆ.4ಕ್ಕೆ ಅಪರೂಪದ ಮದ್ವೆಗೆ ಕೇರಳ ಸಾಕ್ಷಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts