More

    ಸಾರ್ವಜನಿಕ ಗಣೇಶೋತ್ಸವ: ಪೊಲೀಸ್​ ಇಲಾಖೆ ಪ್ರಕಟಿಸಿರುವ ಮಾರ್ಗಸೂಚಿ ಹೀಗಿದೆ ನೋಡಿ…

    ಬೆಂಗಳೂರೂ: ಸಾರ್ವಜನಿಕ ಗಣೇಶೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಆಯೋಜಕರಿಗೆ ಪೊಲೀಸ್ ಇಲಾಖೆ ಮಾರ್ಗಸೂಚಿ ಬಿಡುಗಡೆಯಾಗಿದೆ. ಗೌರಿ-ಗಣೇಶ ಹಬ್ಬವನ್ನು ನಮ್ಮ ನಾಡಿನ ಸಂಸ್ಕೃತಿ, ಭಾವೈಕ್ಯತೆಯ ಪ್ರತೀಕವಾಗಿ ಆಚರಿಸಲಾಗುತ್ತಿದ್ದು, ಕೋಮು ಸೌಹಾರ್ದದಿಂದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಾರ್ವಜನಿಕರಲ್ಲಿ ಪೊಲೀಸ್​ ಇಲಾಖೆ ವಿನಂತಿ ಮಾಡಿಕೊಂಡಿದೆ.

    ಆ. 30 ರಿಂದ ನಗರದಾದ್ಯಂತ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಹಲವಾರು ಸಂಘ ಸಂಸ್ಥೆಗಳು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿವಿಧ ದಿನಗಳಲ್ಲಿ ಮೆರವಣಿಗೆ ಮೂಲಕ ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲಾಗಿದ್ದು, ಹಬ್ಬವನ್ನು ಆಚರಿಸುವಾಗ ಆಯೋಜಕರು/ಸಮಿತಿಯವರು ಈ ಕೆಳಕಂಡ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.

    • ಗಣೇಶ ಮೂರ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಟಾಪನೆ ವೇಳೆ ಬಿಬಿಎಂಪಿಯ ಏಕಗವಾಕ್ಷಿ ಸಮೀತಿಯ ಅನುಮತಿ ಕಡ್ಡಾಯ.
    • ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಗಟ್ಟಿಯಾದ ಚಪ್ಪರ/ಶಾಮಿಯಾನ ಹಾಕಬೇಕು. ಶಾಮಿಯಾನ ಹೊರತುಪಡಿಸಿ ಬೇರೆ ಕಡೆ ಬ್ಯಾನರ್ ಬಂಟಿಂಗ್ಸ್ ಹಾಕಲು ಬಿಬಿಎಂಪಿ ಅನುಮತಿ ಕಡ್ಡಾಯ.
    • ವಿವಾದಿತ ಸ್ಥಳದಲ್ಲಿ ಮೂರ್ತಿ ಪ್ರತಿಷ್ಟಾಪನೆ ಮಾಡುವಂತಿಲ್ಲ..
    • ಆಯೋಜಕರ ಪರವಾಗಿ ಕಾರ್ಯಕರ್ತರು 24 ಗಂಟೆಯೂ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ಮೇಲ್ವಿಚಾರಣೆ ನೋಡಿಕೊಳ್ಳುವವರು ಮಾಹಿತಿಯನ್ನ ಪೊಲೀಸ್ ಠಾಣೆಗೆ ನೀಡಬೇಕು.
    • ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಬಿಬಿಎಂಪಿ ಸುತ್ತೋಲೆಯಂತೆ ಸಿಸಿಟಿವಿ ಅಳವಡಿಸಬೇಕು.
    • ಸ್ಥಳದಲ್ಲಿ ಅಗ್ನಿ ನಂದಕಗಳು, ನೀರು/ ಮರಳಿನ ವ್ಯವಸ್ಥೆ ಇರಬೇಕು. ಸುತ್ತಮುತ್ತ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಇರದಂತೆ ಎಚ್ಚರ ವಹಿಸಬೇಕು. ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಒಬ್ಬ ಎಲೆಕ್ಟ್ರಿಶಿಯನ್ ಇರಬೇಕು.
    • ಸಮರ್ಪಕವಾಗಿ ಲೈಟಿಂಗ್ ವ್ಯವಸ್ಥೆ ಹಾಗೂ ವಿದ್ಯುತ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಎಂಟ್ರಿ, ಎಕ್ಸಿಟ್ ವ್ಯವಸ್ಥೆ ನೀಟಾಗಿರಬೇಕು. ಬ್ಯಾರಿಕೇಡ್ ಅಳವಡಿಸಿ ವಾಲೆಂಟಿಯರ್ಸ್ ಅನ್ನ ಸ್ಥಳದಲ್ಲಿ‌ ನಿಯೋಜಿಸಬೇಕು.
    • ಮೆರವಣಿಗೆ ಸಂದರ್ಭದಲ್ಲಿ ಅಹಿತಕರ ಘಟನೆಗಳಾಗದಂತೆ ಆಯೋಜಕರು ಎಚ್ಚರ ವಹಿಸಬೇಕು. ಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಲಾಗಿದೆ.
    • ಆಯೋಜಕರು, ಅಧ್ಯಕ್ಷರು, ಪದಾಧಿಕಾರಿಗಳ ಹೆಸರು, ವಿಳಾಸ, ನಂಬರನ್ನ ಸ್ಥಳಿಯ ಠಾಣೆಗೆ ನೀಡಬೇಕು. ಆಯೋಜಕರು, ಅಧ್ಯಕ್ಷರು, ಪದಾಧಿಕಾರಿಗಳ ಹೆಸರು, ವಿಳಾಸ, ನಂಬರನ್ನು ಸ್ಥಳದಲ್ಲಿ ಪ್ರದರ್ಶಿಸಬೇಕು.
    • ಲೇಸರ್ ಪ್ರೊಜೆಕ್ಷನ್ ಮಾಡಲು ಅವಕಾಶವಿಲ್ಲ. ಸೂಕ್ಷ್ಮ, ಅತಿಸೂಕ್ಷ್ಮ ಸ್ಥಳಗಳಲ್ಲಿ ಮೆರವಣಿಗೆ ಸಾಗುವಾಗ ಸಿಡಿಮದ್ದು, ಪಟಾಕಿಗಳನ್ನ ಸಿಡಿಸುವಂತಿಲ್ಲ.
    • ಕಾರ್ಯಕ್ರಮ ಆಯೋಜನೆಗಾಗಿ ಬಲವಂತವಾಗಿ ಚಂದಾ ವಸೂಲಿ ಮಾಡಿದರೆ ಕಠಿಣ ಕಾನೂನು ಕ್ರಮ.
    • ಆಯೋಜಕರು, ಕಾರ್ಯಕರ್ತರನ್ನ ಗುರುತಿಸಲು ಅನುಕೂಲವಾಗುವಂತೆ ಶರ್ಟ್ / ಕ್ಯಾಪ್ ಧರಿಸಿರಬೇಕು.
    • ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಕಡೆ ಪೊಲೀಸರಿಗೆ ಮಾಹಿತಿ‌ ನೀಡಿ ಭದ್ರತೆ ಪಡೆಯಬೇಕು.
    • ವಿಸರ್ಜನಾ ಮೆರವಣಿಗೆ ನಿಗದಿತ ಸಂದರ್ಭದಲ್ಲಿ ನಡೆಯಬೇಕು.
    • ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ತಂತಿ, ಮರದ ಕೊಂಬೆಗಳ ಬಗ್ಗೆ ಸೂಕ್ತ ಎಚ್ಚರ ವಹಿಸಬೇಕು.

    ಸಾರ್ವಜನಿಕ ಗಣೇಶೋತ್ಸವ: ಪೊಲೀಸ್​ ಇಲಾಖೆ ಪ್ರಕಟಿಸಿರುವ ಮಾರ್ಗಸೂಚಿ ಹೀಗಿದೆ ನೋಡಿ...

    ಸಾರ್ವಜನಿಕ ಗಣೇಶೋತ್ಸವ: ಪೊಲೀಸ್​ ಇಲಾಖೆ ಪ್ರಕಟಿಸಿರುವ ಮಾರ್ಗಸೂಚಿ ಹೀಗಿದೆ ನೋಡಿ...

    ಸೋನಾಲಿ ಸಾವಿನ ಕೇಸ್​: ತಪ್ಪೊಪ್ಪಿಕೊಂಡ ಆರೋಪಿಗಳು, ಹೋಟೆಲ್​ ಮಾಲೀಕ ಸೇರಿ ಇನ್ನಿಬ್ಬರ ಬಂಧನ

    ಲೈಗರ್​ ಸಿನಿಮಾ ಸೋಲು: ನಟಿ ಅನಸೂಯ ವಿರುದ್ಧ ಮುಗಿಬಿದ್ದ ವಿಜಯ್​ ದೇವರಕೊಂಡ ಫ್ಯಾನ್ಸ್!

    ತರಬೇತಿ ನಿರತ 500 ಐಎಎಸ್ ಅಧಿಕಾರಿಗಳಿಗೆ ಗ್ರಾಪಂ ಅಧ್ಯಕ್ಷರಿಂದ ಪಾಠ! ವಿಜಯನಗರ ಜಿಲ್ಲೆಯ ಮಹೇಂದ್ರಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts