More

    ಕೆನಡಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳ ದುರಂತ ಸಾವು

    ಒಟ್ಟಾವ: ಮಾರ್ಚ್​ 12ರಂದು ಕೆನಾಡದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ದಕ್ಷಿಣ ಒಂಟಾರಿಯೋದ ಕ್ವಿಂಟೆ ವೆಸ್ಟ್ ನಗರದ ಹೆದ್ದಾರಿ 401ರಲ್ಲಿ ನಡೆದಿದೆ.

    ಅಪಘಾತದ ಬಗ್ಗೆ ಕ್ವಿಂಟೆ ವೆಸ್ಟ್​ನಲ್ಲಿರುವ ಒಂಟಾರಿಯೋ ಪಾಂತ್ರೀಯ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದೆ. ಮೃತರನ್ನು ಹರ್ಪೀತ್​ ಸಿಂಗ್​, ಜಸ್ಪಿಂದರ್​ ಸಿಂಗ್​, ಕರಣ್ಪಾಲ್​ ಸಿಂಗ್​, ಮೋಹಿತ್​ ಚೌಹಣ್​ ಮತ್ತು ಪವನ್​ ಕುಮಾರ್​ ಎಂದು ಗುರುತಿಸಲಾಗಿದೆ. ಐವರು ಕೂಡ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮೃತರೆಲ್ಲರು 21 ಮತ್ತು 24ರ ನಡುವಿನ ವಯಸ್ಸಿನವರು. ಮೊಂಟ್ರಿಯಲರ್​ ಏರಿಯಾ ಮತ್ತು ಗ್ರೇಟರ್​ ಟೊರೆಂಟೋ ವಿದ್ಯಾರ್ಥಿಗಳು ಎಂದು ಪೊಲೀಸರು ಹೇಳಿದ್ದಾರೆ.

    ಐವರು ವಿದ್ಯಾರ್ಥಿಗಳು ಶನಿವಾರ ಬೆಳಗ್ಗೆ ಹೆದ್ದಾರಿ 401ರಲ್ಲಿ ಪ್ಯಾಸೆಂಜರ್​ ವ್ಯಾನ್​ನಲ್ಲಿ ವೆಸ್ಟ್​ ಕಡೆಗೆ ಪ್ರಯಾಣ ಬೆಳೆಸಿದ್ದರು. ನಸುಕಿನ ಜಾವ 3.45 (ಸ್ಥಳೀಯ ಕಾಲಮಾನ)ರ ಸುಮಾರಿಗೆ ಟ್ರ್ಯಾಕ್ಟರ್​ ಟ್ರೈಲರ್​ಗೆ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಉಳಿದ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಅಪಘಾತದ ಬಗ್ಗೆ ಕೆನಡಾದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಪ್ರತಿಕ್ರಿಯಿಸಿದ್ದು, ಘಟನೆಯನ್ನು ಹೃದಯ ವಿದ್ರಾವಕ ದುರಂತ ಎಂದು ಕರೆದಿದ್ದಾರೆ. ಶನಿವಾರ ಟೊರೊಂಟೊ ಬಳಿ ಕಾರು ಅಪಘಾತದಲ್ಲಿ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸುತ್ತೇವೆ. ಭಾರತದ ಟೊರೆಂಟೋ ತಂಡವು ಸಹಾಯಕ್ಕಾಗಿ ಸಂತ್ರಸ್ತರ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.

    ಮೂರು ತಿಂಗಳ ಅಂತರದಲ್ಲಿ ಕೆನಡಾದಲ್ಲಿ ನಡೆದ ಎರಡನೇ ದುರಂತ ಘಟನೆ ಇದಾಗಿದೆ. ಕಳೆದ ಜನವರಿಯಲ್ಲಿ ಒಂದು ಮಗು ಸೇರಿದಂತೆ ನಾಲ್ವರು ಭಾರತೀಯರು ಕೆನಡಾ-ಯುಎಸ್​ ಗಡಿಭಾಗ ಮನಿಟೊಬಾದಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೃತರು ಗುಜರಾತ್​ ಮೂಲದವರಾಗಿದ್ದಿ, ಕೊರೆಯುವ ಚಳಿಗೆ ರಕ್ತ ಹೆಪ್ಪುಗಟ್ಟಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು.

    ಇನ್ನು ಕೆನಡಾದ ವಿಶ್ವವಿದ್ಯಾನಿಲಯಗಳಿಗೆ ಹಾಜರಾಗುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯು 2016 ರಲ್ಲಿ 76,075 ರಿಂದ 2018 ರಲ್ಲಿ 1,72,625 ಕ್ಕೆ ಏರಿದ್ದು, 127% ರಷ್ಟು ಹೆಚ್ಚಾಗಿದೆ ಎಂದು ಕೆನಡಿಯನ್ ಬ್ಯೂರೋ ಫಾರ್ ಇಂಟರ್ನ್ಯಾಷನಲ್ ಎಜುಕೇಶನ್ ತಿಳಿಸಿದೆ. (ಏಜೆನ್ಸೀಸ್​)

    ನನ್ನ ಬಳಿ ರೆಕಾರ್ಡಿಂಗ್ಸ್​ ಇವೆ…ಟಾಲಿವುಟ್​ ನಟಿ, ನಿರೂಪಕಿ ರಶ್ಮಿ ವಿರುದ್ಧ ಶಾಕಿಂಗ್​ ಹೇಳಿಕೆ ಕೊಟ್ಟ ನಿರ್ಮಾಪಕ..!

    ಲಾಕಪ್​ ಶೋನಲ್ಲಿ ಕಂಗನಾ ಎದುರು ಅಮ್ಮನ ಸ್ನೇಹಿತೆ ಜತೆಗಿನ ರಹಸ್ಯ ಬಿಚ್ಚಿಟ್ಟ ಶಿವಂ ಶರ್ಮಾ: ಬಬಿತಾ ಪೋಗಟ್​ ಶಾಕ್​!

    ಇದು ಮಕ್ಕಳ ಭವಿಷ್ಯ-ಶಿಕ್ಷಣದ ಪ್ರಶ್ನೆ, ಎಲ್ಲರೂ ಹೈಕೋರ್ಟ್​ನ ತೀರ್ಪು ಒಪ್ಪಿ ಪಾಲಿಸಿ: ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts