More

    ಕಾಂಡೋಮ್​ ಪರೀಕ್ಷಿಸಲು ಉತ್ಸುಕರಾದ ರಾಕುಲ್​: ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಫಸ್ಟ್​ಲುಕ್​ ಪೋಸ್ಟರ್​!​

    ಮುಂಬೈ: ಯಾರಿಯನ್​ ಚಿತ್ರದ ಮೂಲಕ ಬಾಲಿವುಡ್​ಗೆ ಕಾಲಿಟ್ಟ ಬಹುಭಾಷಾ ನಟಿ ರಾಕುಲ್​ ಪ್ರೀತ್​ ಸಿಂಗ್​ ಸದ್ಯ ಬಹು ಬೇಡಿಕೆ ನಟಿಯಾಗಿದ್ದಾರೆ. ತನ್ನ ಸಿನಿ ಜರ್ನಿಯಲ್ಲಿ ವಿವಿಧ ಬಗೆಯ ಚಿತ್ರಗಳನ್ನು ಮಾಡಿರುವ ರಾಕುಲ್​ ಈ ಬಾರಿ ವಿಭಿನ್ನ ಚಿತ್ರವೊಂದಕ್ಕೆ ಸಹಿ ಮಾಡಿರುವುದು ಹಳೆಯ ವಿಚಾರ. ಆ ಚಿತ್ರದ ಕುರಿತಾಗಿ ತಾಜಾ ಸುದ್ದಿಯೊಂದು ಹೊರಬಿದ್ದಿದೆ.

    ಹೌದು, ರಾಕುಲ್​​ ಅವರು ಕಾಂಡೋಮ್​ ಪರೀಕ್ಷಕಳಾಗಿ ಕಾಣಿಸಿಕೊಳ್ಳುತ್ತಿರುವ “ಛತ್ರಿವಾಲಿ” ಚಿತ್ರದ ಫಸ್ಟ್​ಲುಕ್​ ಪೋಸ್ಟರ್​ ನಿನ್ನೆ ಬಿಡುಗಡೆಯಾಗಿದೆ. ಕಾಂಡೋಮ್​ ಪ್ಯಾಕೆಟ್​ ಓಪನ್​ ಮಾಡುತ್ತಿರುವ ಪೋಸ್ಟರ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ‘ಛತ್ರಿವಾಲಿ’ ಒಂದು ಸಾಮಾಜಿಕ ಕೌಟುಂಬಿಕ ಮನರಂಜನಾತ್ಮಕ ಚಿತ್ರವಾಗಿದೆ. ಕರ್ನಾಲ್ ಎಂಬ ಸಣ್ಣ ಪಟ್ಟಣದಲ್ಲಿ ನಿರುದ್ಯೋಗಿ ರಸಾಯನಶಾಸ್ತ್ರ ಪದವೀಧರ ಯುವತಿಯ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಯುವತಿ ಉದ್ಯೋಗಕ್ಕಾಗಿ ಅಲೆದಾಡಿ ಕೊನೆಗೆ ಹತಾಶೆಯಿಂದ ಕಾಂಡೋಮ್ ಪರೀಕ್ಷಕಳಾಗುವುದೇ ಚಿತ್ರದ ಒನ್​ ಲೈನ್​ ಸ್ಟೋರಿ.

    ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ತೇಜಸ್​ ಡಿಯೋಸ್ಕರ್​, ನಮ್ಮ ಸಿನಿಮಾ ಸಾಮಾಜಿಕ ಮನರಂಜನಾತ್ಮ ಚಿತ್ರವಾಗಿದೆ. ಕಾಂಡೋಮ್‌ಗಳ ಬಳಕೆಯನ್ನು ಕಳಂಕರಹಿತಗೊಳಿಸುವ ಗುರಿಯನ್ನು ಈ ಚಿತ್ರ ಹೊಂದಿದ್ದು, ತೆರೆಗೆ ತರುವಲ್ಲಿ ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ ಎಂದಿದ್ದಾರೆ.

    ಪೋಸ್ಟರ್​ ಅನ್ನು ರಾಕುಲ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು, ‘ಛತ್ರಿವಾಲಿ’ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದು ಸಾಕಷ್ಟು ಆಸಕ್ತಿದಾಯಕ ಮತ್ತು ವಿಶೇಷ ವಿಷಯವಾಗಿದೆ ಮತ್ತು ನನ್ನ ಪಾತ್ರದ ಪ್ರಯಾಣವನ್ನು ಪ್ರಾರಂಭಿಸುವ ಬಗ್ಗೆ ನಾನು ತುಂಬಾ ರೋಮಾಂಚನಗೊಂಡಿದ್ದೇನೆ ಎಂದು ಹೇಳಿದ್ದಾರೆ.

    ಇನ್ನು ಕಾಂಡೋಮ್​ ಟೆಸ್ಟ್​ ಮಾಡುವ ವಿಭಿನ್ನ ಪಾತ್ರಕ್ಕೆ ಈ ಮೊದಲು ಸಾರಾ ಅಲಿ ಖಾನ್​ ಮತ್ತು ಅನನ್ಯ ಪಾಂಡೆರನ್ನು ಕೇಳಲಾಗಿತ್ತು. ಆದರೆ, ಅವರು ನಿರಾಕರಿಸಿದ್ದರು. ಆ ಬಳಿಕ ಈ ಪಾತ್ರ ರಾಕುಲ್​ ಪಾಲಾಗಿದೆ. ದೊಡ್ಡ ಕಾಂಡೋಮ್ ಉತ್ಪಾದನಾ ಕಂಪನಿಗಳು 18 ವರ್ಷಕ್ಕಿಂತ ಮೇಲ್ಪಟ್ಟವರನ್ನು ಕೆಲಸಕ್ಕಾಗಿ ನೇಮಿಸಿಕೊಳ್ಳುತ್ತವೆ. ಈ ಆಧಾರದ ಮೇಲೆ ಚಿತ್ರಕತೆಯನ್ನು ಎಣೆಯಲಾಗಿದ್ದು, ಕತೆ ಕೇಳಿದ ರಾಕುಲ್​ ಥ್ರಿಲ್​ ಆಗಿ ಒಂದೇ ಮಾತಿಗೆ ಒಪ್ಪಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಾರಾ, ಅನನ್ಯ ನಿರಾಕರಿಸಿದ ಕಾಂಡೋಮ್​ ಟೆಸ್ಟರ್ ಪಾತ್ರವನ್ನು ರಾಕುಲ್​ ಒಪ್ಪಿಕೊಂಡಿದ್ದೇಕೆ?

    ದುಡ್ಡು ಕೊಟ್ರೆ ಸ್ಪಾಟಲ್ಲೇ ಕೆಲ್ಸ… ಗಂಡನ ಲ್ಯಾಪ್​ಟಾಪ್​ ಬಳಸಿ ಮಾಡಬಾರದ್ದನ್ನು ಮಾಡ್ತಿದ್ದ ಮಹಿಳೆಯ ಬಂಧನ!

    ಗೋಮೂತ್ರ ಮತ್ತು ಸಗಣಿ ದೇಶದ ಆರ್ಥಿಕತೆಯನ್ನು ಬಲಪಡಿಸಲಿದೆ: ಸಿಎಂ ಶಿವರಾಜ್​ಸಿಂಗ್​ ಚೌಹಾಣ್​

    ಬಾಹ್ಯಾಕಾಶದಲ್ಲೇ ಮಕ್ಕಳ ಜನನ! ಜೆಫ್ ಬೆಜೋಸ್ ಭವಿಷ್ಯ ಅಂತರಿಕ್ಷ ಕಾಲನಿಯಲ್ಲಿ ಜನರ ವಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts