More

    ವಿಕ್ರಾಂತ್​ ರೋಣನ ಜಬರ್ದಸ್ತ್ ಎಂಟ್ರಿಗೆ ದಿನಾಂಕ ಫಿಕ್ಸ್​: ಫೆ.24ಕ್ಕೆ ವಿಶ್ವದಾದ್ಯಂತ ಬಿಡುಗಡೆ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ “ವಿಕ್ರಾಂತ್​ ರೋಣ” ಸಿನಿಮಾದ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದು, 2022ರ ಫೆ.24 ರಂದು ಇಡೀ ವಿಶ್ವದಾದ್ಯಂತ ವಿಕ್ರಾಂತ್​ ರೋಣ ಅಬ್ಬರಿಸಲಿದ್ದಾನೆ.

    ಕರೊನಾ ಎರಡನೇ ಅಲೆ ಬರದೇ ಹೋಗಿದ್ದರೆ, ಆಗಸ್ಟ್​ 19 ರಂದೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾ ಲಾಕ್​ಡೌನ್ ಮತ್ತು ಕರೊನಾ ನಂತರದ ಚಿತ್ರಮಂದಿರದ ಮೇಲಿನ ನಿರ್ಬಂಧದಿಂದಾಗಿ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಮುಂದೂಡಿತ್ತು. ಅಂದಿನಿಂದ ಚಿತ್ರತಂಡದಿಂದ ಯಾವುದೇ ಅಪ್​ಡೇಟ್​ ಇಲ್ಲದೆ ಅಭಿಮಾನಿಗಳು ನಿರಾಶೆಯಾಗಿದ್ದರು. ಹೀಗಿರುವಾಗ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿ ಡಿ. 5ರಂದು ಚಿತ್ರತಂಡ ಘೋಷಣೆ ಮಾಡಿತ್ತು. ಅವರು ಹೇಳಿದಂತೆ ಡಿ.7ರ ಮಧ್ಯಾಹ್ನ 12.45ಕ್ಕೆ ವಿಕ್ರಾಂತ್​ ರೋಣ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಈ ಮೂಲಕ ಅಭಿಮಾನಿಗಳ ಇಷ್ಟು ದಿನದ ಕಾಯುವಿಕೆಗೆ ಚಿತ್ರತಂಡ ವಿರಾಮ ಹೇಳಿದ್ದು, ಮುಂದೆ ಚಿತ್ರದ ಅದ್ಧೂರಿ ಸ್ವಾಗತಕ್ಕೆ ದಿನಗಣನೆ ಎಣಿಸುವಂತೆ ಮಾಡಿದೆ.

    ಟ್ವಿಟರ್​ನಲ್ಲಿ ಟ್ರೆಂಡಿಂಗ್​
    ವಿಕ್ರಾಂತ್​ ರೋಣ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ವಿಕ್ರಾಂತ್​ ರೋಣ ಹಾಗೂ ಕಿಚ್ಚ ಸುದೀಪ್ ಎಂಬ ಹ್ಯಾಸ್​ಟ್ಯಾಗ್​​ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಫೆ.24 ಎಷ್ಟು ಬೇಗ ಬರುತ್ತದೋ ಎಂದು ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಟ್ವೀಟ್​ ಮಾಡಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅಲ್ಲದೆ, ವಿಕ್ರಾಂತ್​ ರೋಣ ಚಿತ್ರ ತಂಡದ ಪ್ರಚಾರ ಕಾರ್ಯ ಹೇಗಿರುತ್ತದೆ ಎಂಬ ಕುತೂಹಲವೂ ಅಭಿಮಾನಿಗಳಲ್ಲಿದೆ.

    ವಿಕ್ರಾಂತ್​ ರೋಣ ಸಿನಿಮಾ ನಟ ಸುದೀಪ್​ ಸಿನಿ ಕೆರಿಯರ್​ನಲ್ಲೇ ವಿಭಿನ್ನ ಸಿನಿಮಾ ಆಗಿರಲಿದೆ. ಭಾರತ ಮಾತ್ರವಲ್ಲದೇ ವಿದೇಶಿ ಭಾಷೆಗಳಲ್ಲೂ ಚಿತ್ರ ತೆರೆಕಾಣಲಿದ್ದು, ಇದನ್ನು ಪ್ಯಾನ್​ ವರ್ಲ್ಡ್​ ಸಿನಿಮಾ ಎಂದು ಪರಿಗಣಿಸಲಾಗಿದೆ. ಈಗಾಗಲೇ ಚಿತ್ರದ ಬಗ್ಗೆ ಅನೇಕ ಘಟಾನುಘಟಿಯರು ಧನಾತ್ಮಕವಾಗಿ ಮಾತನಾಡಿದ್ದು, ಚಿತ್ರದ ಮೇಲಿನ ನಿರೀಕ್ಷೆ ನೂರ್ಮಡಿಯಾಗಿದೆ. ಚಿತ್ರವನ್ನು ರಂಗಿತರಂಗ ಖ್ಯಾತಿ ಅನೂಪ್​ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಜಾಕ್​ ಮಂಜು ಬಂಡವಾಳವನ್ನು ಹೂಡಿದ್ದಾರೆ. ಇತ್ತೀಚೆಗೆ ದುಬೈನ ಬುರ್ಜ್ ಖಲೀಫಾ ಮೇಲೆಯೂ ಶೀರ್ಷಿಕೆ ಅನಾವರಣ ಮಾಡಿ ಸ್ಯಾಂಡಲ್​ವುಡ್​ನಲ್ಲಿ ಯಾರೂ ಮಾಡದ ದಾಖಲೆಯೊಂದನ್ನು ಬರೆದಿದೆ.

    ಕೋರ್ಟ್​ ಮೆಟ್ಟಿಲೇರಿದ ‘ಸೋಜುಗಾದ ಸೂಜು ಮಲ್ಲಿಗೆ’ ವಿವಾದ: ಜಿಜಿವಿವಿ ಚಿತ್ರತಂಡಕ್ಕೆ ಎದುರಾಯ್ತು ಸಂಕಷ್ಟ

    ಮಾಡಬಾರದ್ದನ್ನು ಮಾಡಿ ಕೊನೆಗೆ 8ರ ಬಾಲಕಿಯ ಮುಂದೆ ಮಂಡಿಯೂರಿದ ಮಹಿಳಾ ಪೊಲೀಸ್ ಅಧಿಕಾರಿ!

    VIDEO: ಅಮ್ಮಾ ನಿನ್ನನ್ನು ಮಿಸ್‌ ಮಾಡಿಕೊಳ್ತಿದ್ದೆ ಎಂದು ಮಗ ಹೂಗುಚ್ಛ ಹಿಡಿದು ಬಂದರೆ, ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts