More

    ನಿಗೂಢವಾಗಿ ಕುಸಿಯುತ್ತಿದೆ ಫೇಸ್​ಬುಕ್​ ಫಾಲೋವರ್ಸ್​ ಸಂಖ್ಯೆ: 100 ಮಿಲಿಯನ್​ನಿಂದ​ 9 ಸಾವಿರಕ್ಕಿಳಿದ ಜುಕರ್​ಬರ್ಗ್ ಫಾಲೋವರ್ಸ್​

    ನವದೆಹಲಿ: ಸವಿನಿದ್ದೆಯನ್ನು ಮುಗಿಸಿ ಬೆಳ್ಳಂಬೆಳಗ್ಗೆ ತಮ್ಮ ಮೊಬೈಲ್​ ತೆಗೆದುಕೊಂಡು ಫೇಸ್​ಬುಕ್​ ತೆರೆದು ನೋಡಿದ ಅನೇಕ ಬಳಕೆದಾರರಿಗೆ ಇಂದು ಆಘಾತವೊಂದು ಕಾದಿತ್ತು. ಏನೆಂದರೆ, ವಿಶ್ವದ ಹಲವೆಡೆ ರಾತ್ರೋರಾತ್ರಿ ಫೇಸ್​ಬುಕ್​ ಬಳಕೆದಾರರ ಫಾಲೋವರ್ಸ್​ ಸಂಖ್ಯೆಯಲ್ಲಿ ದಿಢೀರ್​ ಕುಸಿತಕಂಡಿದೆ. ಫೇಸ್​ಬುಕ್​ ಕಂಡುಹಿಡಿದ ಮಾರ್ಕ್​ ಜುಕರ್​ಬರ್ಗ್​ ಸಹ ಇದರಿಂದ ಹೊರತಾಗಿಲ್ಲ ಎಂಬುದು ಇಲ್ಲಿನ ಗಮನಾರ್ಹ ಸಂಗತಿಯಾಗಿದೆ.

    ಹೌದು, ಫೇಸ್​ಬುಕ್​ ಫಾಲೋವರ್ಸ್​ ಸಂಖ್ಯೆ ನಿಗೂಢವಾಗಿ ಮಾಯವಾಗಿರುವುದನ್ನು ನೋಡಿ ದಂಗಾಗಿರುವ ಅನೇಕರು ಇಂದು ಬೆಳಗ್ಗೆಯಿಂದ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆಯ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ.

    ಸುಮಾರು 100 ಮಿಲಿಯನ್​ ಇದ್ದ ಮಾರ್ಕ್​ ಜುಕರ್​ಬರ್ಗ್​ ಅವರ ಫೇಸ್​ ಫಾಲೋವರ್ಸ್ ಸಂಖ್ಯೆ ಕೇವಲ 9,993ಕ್ಕೆ ಕುಸಿದಿದೆ. ಹೀಗಾಗಿ ಸಾಕಷ್ಟು ಫೇಸ್​ಬುಕ್​ ಬಳಕೆದಾರರಿಗೆ ಫಾಲೋವರ್ಸ್​ ಸಂಖ್ಯೆ ಕುಸಿದ್ದು, ಫೇಸ್​ಬುಕ್​ ಬಗ್​ನಿಂದ ಈ ಸಮಸ್ಯೆ ಉಂಟಾಗಿದೆ ಎಂದು ತಿಳಿದುಬಂದಿದೆ.

    ಸೋಮವಾರ ಮತ್ತು ಮಂಗಳವಾರ ಹಲವೆಡೆ ಸಮಸ್ಯೆ ಉಂಟಾಗಿದ್ದು, ಸಾಮಾಜಿಕ ಜಾಲತಾಣ ದೈತ್ಯ ಕಂಪನಿಯು ನಕಲಿ ಮತ್ತು ಬೋಟ್​ ಖಾತೆಗಳನ್ನು ಬಹುಶಃ ಡಿಲೀಟ್​ ಮಾಡುತ್ತಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿದೆ. ಆದರೆ, ಫಾಲೋವರ್ಸ್​ ಸಂಖ್ಯೆ ಕುಸಿತದಲ್ಲಿ ಅಜಗಜಾಂತರ ವ್ಯತ್ಯಾಸ ಕಂಡುಬಂದಿದ್ದು, ಫೇಸ್​ಬುಕ್​ ಬಗ್​ನಿಂದ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

    ಅನಾಲಿಟಿಕ್ಸ್ ಪ್ಲಾಟ್‌ಫಾರ್ಮ್ ಕ್ರೌಡ್‌ಟಾಂಗಲ್‌ನ ಮಾಹಿತಿಯ ಪ್ರಕಾರ, ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ಹಫಿಂಗ್‌ಟನ್ ಪೋಸ್ಟ್, ದಿ ಹಿಲ್, ಯುಎಸ್‌ಎ ಟುಡೆ, ನ್ಯೂಯಾರ್ಕ್ ಪೋಸ್ಟ್ ಮತ್ತು ನ್ಯೂಸ್‌ವೀಕ್ ಸೇರಿದಂತೆ ಹಲವು ಡಿಜಿಟಲ್​ ಫ್ಲಾಟ್​ಫಾರ್ಮ್​ಗಳು ಅಕ್ಟೋಬರ್ 3 ಮತ್ತು 4 ರಂದು ಫಾಲೋವರ್ಸ್​ ಕುಸಿತವನ್ನು ಎದುರಿಸಿವೆ. (ಏಜೆನ್ಸೀಸ್​)

    ಕುಡುಕರೇ ಎಚ್ಚರ! ಬ್ರ್ಯಾಂಡೆಡ್ ಬಾಟಲಿಗೆ ಅಗ್ಗದ ಮದ್ಯ ತುಂಬಿ ಮಿಲಿಟರಿ ಎಣ್ಣೆ ಅಂತಾ ಕುಡಿಸ್ತಾರೆ

    ಕೋವಿಡ್​ ಲಸಿಕೆ ಕುರಿತು ಸ್ಫೋಟಕ ಸತ್ಯ ಬಯಲು: ಜನರ ಬಳಕೆಗೂ ಮುನ್ನ ಪರೀಕ್ಷೆಯನ್ನೇ ನಡೆಸಿಲ್ಲ… ತಪ್ಪೊಪ್ಪಿಕೊಂಡ ಅಧಿಕಾರಿ

    ಪೊಲೀಸ್​ ಬಸ್​ ಡಿಕ್ಕಿಯಾಗಿ ಮೂವರು ಬೈಕ್​ ಸವಾರರ ಸಾವು: ಬಸ್ಸಿನಡಿ ಸಿಲುಕಿ ಓರ್ವ ಸವಾರ​ ಸಜೀವ ದಹನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts