More

    ನೂರಕ್ಕೂ ಹೆಚ್ಚು ಸುಲಿಗೆ ಪ್ರಕರಣದಲ್ಲಿ ಮಾಜಿ ರಾಷ್ಟ್ರೀಯ ಆಟಗಾರ, ಚಿನ್ನದ ಪದಕ ವಿಜೇತ ಸೂರಜ್​ ಬಂಧನ..!

    ನವದೆಹಲಿ: ಎರಡು ಬಾರಿ ಚಿನ್ನದ ಪದಕ ವಿತೇಜ, 28 ವರ್ಷದ ಮಾಜಿ ರಾಷ್ಟ್ರೀಯ ಟೇಕ್ವಾಂಡೋ ಆಟಗಾರ ಹಾಗೂ ಇಂಡಿಯನ್​ ಐಡಲ್​ ಹೆಸರಿನ ಕಿರುತೆರೆ ಕಾರ್ಯಕ್ರಮದಲ್ಲೂ ಮಿಂಚಿದ್ದ ಸೂರಜ್​ ಅಲಿಯಾಸ್​ ಫೈಟರ್​ನನ್ನು ದೆಹಲಿ ಪೊಲೀಸರು ಸುಲಿಗೆ ಪ್ರಕರಣದಲ್ಲಿ ಬಂಧಿಸಿದ್ದಾರೆ.

    ಸೂರಜ್​ ವಿರುದ್ಧ 100ಕ್ಕೂ ಅಧಿಕ ಸುಲಿಗೆ ಪ್ರಕರಣಗಳಿದ್ದು, ಪಶ್ಚಿಮ ದೆಹಲಿ ಪೊಲೀಸರು ಮಾಜಿ ರಾಷ್ಟ್ರೀಯ ಆಟಗಾರನನ್ನು ಬಂಧಿಸಿದ್ದಾರೆ. ಆರೋಪಿ ಸೂರಜ್​, ದೆಹಲಿಯ ಉತ್ತಮ ನಗರದ ಬಳಿಯ ವಿಕಾಸ್​ ನಗರದ ನಿವಾಸಿ.

    ಕಳೆದ ಬುಧವಾರ ದೆಹಲಿ ಪೊಲೀಸರು ಮೋತಿ ನಗರದಲ್ಲಿ ಗಸ್ತು ತಿರುಗುವಾಗ ಸ್ಕೂಟರ್​ ಮೇಲೆ ಅನುಮಾನ ಹುಟ್ಟಿಸುವ ವ್ಯಕ್ತಿಯೊಬ್ಬನನ್ನು ನೋಡಿದ್ದಾರೆ. ಬಳಿಕ ಆತನನ್ನು ಹಿಂಬಾಲಿಸಿದ್ದಾರೆ. ಮೊದಲ ಆತನ ಸ್ಕೂಟರ್​ ಮಾಹಿತಿಯನ್ನು ಕಲೆ ಹಾಕಿದಾಗ ಆ ಸ್ಕೂಟರ್​ ಕೀರ್ತಿ ನಗರದಲ್ಲಿ ಕಳುವಾಗಿರುವ ಬಗ್ಗೆ ಪೊಲೀಸರಿಗೆ ಗೊತ್ತಾಗಿದೆ.

    ಬಳಿಕ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ತನ್ನ ತಪ್ಪುಗಳನ್ನೆಲ್ಲ ಒಪ್ಪಿಕೊಂಡಿದ್ದಾರೆ. ಉತ್ತರ ದೆಹಲಿ ಭಾಗದ ಮಂಡಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಅನೇಕ ಮೊಬೈಲ್​ ಫೋನ್​ಗಳನ್ನು ಎಗರಿಸಿರುವುದಾಗಿ ಮತ್ತು 2.5 ಕೆಜಿ ಚಿನ್ನವನ್ನು ದರೋಡೆ ಮಾಡಿರುವುದಾಗಿ ಆರೋಪಿ ಸೂರಜ್​ ಬಾಯ್ಬಿಟ್ಟಿದ್ದಾನೆ.

    ತನ್ನಿಬ್ಬರು ಸಹಚರರೊಂದಿಗೆ ಮೋಟಾರ್ ಸೈಕಲ್ ಮೇಲೆ ದೇಶೀಯ ಪಿಸ್ತೂಲ್ ಮತ್ತು ಚಾಕುವನ್ನು ಬಳಸಿ ಆರೋಪಿ ಸೂರಜ್​ ದರೋಡೆ ಮಾಡುತ್ತಿದ್ದ. ದೆಹಲಿಯ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಪಶ್ಚಿಮ, ಹೊರ, ಮಧ್ಯ ಮತ್ತು ಉತ್ತರ ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಸುಲಿಗೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು.

    ಆರೋಪಿಯಿಂದ ಒಂದು ದೇಶೀ ನಿರ್ಮಿತ ಪಿಸ್ತೂಲ್, ಒಂದು ಜೀವಂತ ಗುಂಡು ಮತ್ತು 55 ಮೊಬೈಲ್ ಫೋನ್ ಮತ್ತು ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಂದಹಾಗೆ ಸೂರಜ್ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಅವರು ಟೇಕ್ವಾಂಡೋ ಸ್ಪರ್ಧೆಯಲ್ಲಿ ಎರಡು ಬಾರಿ ರಾಷ್ಟ್ರೀಯ ಚಿನ್ನದ ಪದಕ ವಿಜೇತರು. ಅವರು ಉತ್ತಮ ಗಾಯಕರೂ ಆಗಿದ್ದಾರೆ ಮತ್ತು 2008 ರಲ್ಲಿ ಇಂಡಿಯನ್ ಐಡಲ್ ಸೀಸನ್ 4 ರಲ್ಲಿ ಭಾಗವಹಿಸಿದ್ದಾರೆ ಮತ್ತು ಟಾಪ್ 50 ಸ್ಪರ್ಧಿಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕೇಶ ವಿನ್ಯಾಸ ಮತ್ತು ಗಡ್ಡ ಶೇವಿಂಗ್​ಗೆ ಬ್ರೇಕ್​ ಹಾಕಿದ ತಾಲಿಬಾನಿಗಳು: ಸಲೂನ್​ಗಳಲ್ಲಿ ಮ್ಯೂಸಿಕ್ ಹಾಕುವಂತಿಲ್ಲ

    ಮಗನ ಆರೋಪಕ್ಕೆ ತಂದೆಯ ತಿರುಗೇಟು! ವಿಜಯ್​ ಅರ್ಜಿಗೆ ಪ್ರತ್ಯುತ್ತರವಾಗಿ ಅಫಿಡೆವಿಟ್​ ಸಲ್ಲಿಸಿದ ಚಂದ್ರಶೇಖರ್​

    ಕಾಮಿಡಿ ದಿಲ್ ಪಸಂದ್: ಕೃಷ್ಣನಿಗೆ ಜತೆಯಾದ ನಿಶ್ವಿಕಾ, ಮೇಘಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts