More

    ನ್ಯೂಜಿಲೆಂಡ್​ ಬೆನ್ನಲ್ಲೇ ಪಾಕಿಸ್ತಾನಕ್ಕೆ ಇಂಗ್ಲೆಂಡ್​ ಶಾಕ್​: ಪಾಕ್​ ಮಾನ ವಿಶ್ವದ ಎದುರು ಹರಾಜು!

    ಲಂಡನ್​: ಪಾಕಿಸ್ತಾನದ ಮಾನ ವಿಶ್ವದ ಎದುರು ಹರಾಜಾಗುತ್ತಿದೆ. ನ್ಯೂಜಿಲೆಂಡ್​ ಕ್ರಿಕೆಟ್​ ಮಂಡಳಿ ಪಾಕಿಸ್ತಾನ ಪ್ರವಾಸವನ್ನು ರದ್ದುಪಡಿಸಿದ ಬೆನ್ನಲ್ಲೇ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಬೋರ್ಡ್​ ಕೂಡ ಅದೇ ಹಾದಿಯನ್ನು ಹಿಡಿಯುವ ಸಾಧ್ಯತೆ ದಟ್ಟವಾಗಿದೆ.

    ಕಿವೀಸ್ ತಂಡ ಶುಕ್ರವಾರದಿಂದ ಪಾಕ್‌ನಲ್ಲಿ 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿ ಆಡಬೇಕಾಗಿತ್ತು. ಆದರೆ ಅಭದ್ರತೆಯ ಕಾರಣ ನೀಡಿ ಕಿವೀಸ್ ತಂಡ ಮೊದಲ ಏಕದಿನ ಪಂದ್ಯ ಆಡಲು ಸ್ಟೇಡಿಯಂಗೆ ತೆರಳಲು ನಿರಾಕರಿಸಿತು. ಕರೊನಾ ಹಾವಳಿಯ ನಡುವೆ ರಾವಲ್ಪಿಂಡಿ ಸ್ಟೇಡಿಯಂನಲ್ಲಿ ಶೇ. 25 ಪ್ರೇಕ್ಷಕರಿಗೂ ಪ್ರವೇಶ ಅವಕಾಶ ಕಲ್ಪಿಸಲಾಗಿತ್ತು. ಆದರೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಭದ್ರತಾ ಸಲಹೆಗಾರರ ಸೂಚನೆಯ ಮೇರೆ ತಂಡ ಸ್ಟೇಡಿಯಂಗೆ ತೆರಳಲಿಲ್ಲ. ಬಳಿಕ ಪ್ರವಾಸ ರದ್ದುಗೊಂಡಿದ್ದು, ತಂಡ ಶೀಘ್ರದಲ್ಲೇ ತವರಿಗೆ ಮರಳಲಿದೆ ಎಂದು ಕಿವೀಸ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿತು.

    ಇದರ ಬೆನ್ನಲ್ಲೇ ಇದೀಗ ಇಂಗ್ಲೆಂಡ್​ ಇದೇ ನಿರ್ಧಾರವನ್ನು ಮಾಡುವ ಸಾಧ್ಯತೆ ಇದೆ. ಪಾಕಿಸ್ತಾನ ಪರಿಸ್ಥಿತಿಯನ್ನು ಪರಿಶೀಲಿಸಿ ಮುಂದಿನ 24 ಗಂಟೆಗಳಲ್ಲಿ ಪ್ರವಾಸ ಕೈಗೊಳ್ಳಬೇಕೋ? ಬೇಡವೋ? ಎಂಬ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ಹೇಳಿದೆ.

    ಅಂದಹಾಗೆ ಇಂಗ್ಲೆಂಡ್​ ಎರಡು ಟಿ20 ಪಂದ್ಯಕ್ಕಾಗಿ ಅಕ್ಟೋಬರ್​ ತಿಂಗಳಲ್ಲಿ ಪಾಕ್​ ಪ್ರವಾಸ ಮಾಡಬೇಕಿದೆ. 2005ರ ಬಳಿಕ ಇಂಗ್ಲೆಂಡ್​ನ ಮೊದಲ ಭೇಟಿ ಇದಾಗಿದೆ. ಭದ್ರತಾ ಕಾರಣ ಹೇಳಿ ನ್ಯೂಜಿಲೆಂಡ್​ ತೆಗೆದುಕೊಂಡಿರುವ ನಿರ್ಣಯದ ಬಗ್ಗೆ ನಮಗೆ ಅರಿವಿದೆ. ಪರಿಸ್ಥಿತಿಯನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳಲು ಪಾಕ್​ ನೆಲದಲ್ಲಿರುವ ನಮ್ಮ ಭದ್ರತಾ ತಂಡದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಎಲ್ಲವನ್ನು ಪರಿಶೀಲಿಸಿ ಮುಂದಿನ 24 ರಿಂದ 48 ಗಂಟೆಗಳಲ್ಲಿ ನಿರ್ಧಾರವನ್ನು ತಿಳಿಸುವುದಾಗಿ ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ ತಿಳಿಸಿದೆ.

    ತಾಲಿಬಾನಿಗಳಿಗೆ ಬಹಿರಂಗವಾಗಿಯೇ ಬೆಂಬಲ ನೀಡುತ್ತಿರುವ ಪಾಕ್​, ತಾನೆಂದು ಉಗ್ರರ ಪರ ಎಂಬುದನ್ನು ಜಗತ್ತಿಗೆ ಸಾರಿದೆ. ಪಾಕ್​ ಉಗ್ರರರ ಬೀಡಾಗಿರುವ ಹಿನ್ನೆಲೆಯಲ್ಲಿ ಭದ್ರತೆಯ ಭಯದಿಂದ ನ್ಯೂಜಿಲೆಂಡ್​ ಟೂರ್ನಿಯನ್ನು ರದ್ದುಗೊಳಿಸಿದೆ. ಈ ಹಿಂದೆ ಶ್ರೀಲಂಕಾ ಪ್ರವಾಸದ ವೇಳೆ ಉಗ್ರರ ದಾಳಿ ನಡೆದಿದ್ದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬಹುದು. ಸದ್ಯ ಪರಿಸ್ಥಿತಿ ಅದಕ್ಕಿಂತ ಘೋರವಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್​ ಟೂರ್ನಿ ರದ್ದುಪಡಿಸಿದರೆ, ಇಂಗ್ಲೆಂಡ್​ ಕೂಡ ಅದೇ ಹಾದಿಯಲ್ಲಿದೆ. (ಏಜೆನ್ಸೀಸ್​)

    ಭದ್ರತಾ ಭೀತಿಯಿಂದಾಗಿ ಪಾಕ್ ಪ್ರವಾಸವನ್ನು ದಿಢೀರ್ ರದ್ದುಗೊಳಿಸಿದ ನ್ಯೂಜಿಲೆಂಡ್

    ಕಬಡ್ಡಿ ಕಲಿಸೋ ನೆಪದಲ್ಲಿ ಬಾಲಕಿಯರನ್ನು ಜಮೀನಿಗೆ ಕರೆದೊಯ್ಯುತ್ತಿದ್ದ ತಂದೆ-ಮಗ: ಬೆಚ್ಚಿಬೀಳಿಸುತ್ತೆ ಇವರ ಕೃತ್ಯ!

    ಒಂದೇ ಕುಟುಂಬದ ಐವರು ಸಾವು ಪ್ರಕರಣ: ಭಾನುವಾರ ನಡೆದ ಇಂಚಿಂಚು ಘಟನೆ ಬಿಚ್ಚಿಟ್ಟ ಕುಟುಂಬದ ಯಜಮಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts