More

    ಟ್ವಿಟರ್​ ಖರೀದಿ ಒಪ್ಪಂದ ಮುರಿದುಕೊಂಡ ಎಲಾನ್​ ಮಸ್ಕ್! ಕಾರಣ ಹೀಗಿದೆ….

    ಸ್ಯಾನ್​ಫ್ರಾನ್ಸಿಸ್ಕೋ: ಟೆಸ್ಲಾ ಕಂಪನಿಯ ಸಂಸ್ಥಾಪಕ ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಎಲಾನ್​ ಮಸ್ಕ್​ ಅವರು ಟೆಕ್​ ದೈತ್ಯ ಟ್ವಿಟರ್ ಕಂಪನಿಗೆ ಶುಕ್ರವಾರ ಶಾಕ್​​ ನೀಡಿದ್ದಾರೆ.​ ಟ್ವಿಟರ್​ ಖರೀದಿಸುವ 44 ಬಿಲಿಯನ್​ ಡಾಲರ್​ ಒಪ್ಪಂದವನ್ನು ಮಸ್ಕ್​, ದಿಢೀರನೇ ಮುರಿದುಕೊಂಡಿದ್ದಾರೆ.

    ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದರೂ ಮಾಹಿತಿ ನೀಡದ್ದಕ್ಕೆ ಒಪ್ಪಂದವನ್ನು ಮುರಿದುಕೊಂಡಿರುವುದಾಗಿ ಮಸ್ಕ್​ ಸ್ಪಷ್ಟನೆ ನೀಡಿದ್ದಾರೆ. ಮಸ್ಕ್​ ಅವರ ಈ ದಿಢೀರ್​ ನಿರ್ಧಾರದಿಂದ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಟ್ವಿಟರ್​ ಷೇರುಗಳು 7 ರಷ್ಟು ಕುಸಿತಕಂಡಿದೆ. ಮಸ್ಕ್​ ಅವರು ಕಳೆದ ಏಪ್ರಿಲ್​ನಲ್ಲಿ ಟ್ವಿಟರ್​ನ ಪ್ರತಿ ಷೇರಿಗೆ 54.20 ಡಾಲರ್​ ಆಫರ್​ ಮಾಡಿದ್ದರು.

    ಮಸ್ಕ್​ ನಿರ್ಧಾರದ ಬೆನ್ನಲ್ಲೇ ಟ್ವೀಟ್​ ಮಾಡಿರುವ ಟ್ವಿಟರ್​ ಮುಖ್ಯಸ್ಥ ಬ್ರೆಟ್​ ಟಯ್ಲೋ, ವಿಲೀನ ಒಪ್ಪಂದವನ್ನು ಜಾರಿಗೊಳಿಸಲು ಕಾನೂನು ಕ್ರಮ ಕೈಗೊಳ್ಳುವುದಾಗಿ ಟ್ವಿಟರ್​ ಮಂಡಳಿ ಯೋಜಿಸಿದೆ ಎಂದಿದ್ದಾರೆ. ಅಲ್ಲದೆ, ಮಸ್ಕ್ ಜತೆಗಿನ ಒಪ್ಪಂದದ ಬೆಲೆ ಮತ್ತು ಷರತ್ತುಗಳ ಮೇಲೆ ವಹಿವಾಟನ್ನು ಮುಚ್ಚಲು ಟ್ವಿಟರ್​ ಮಂಡಳಿ ಬದ್ಧವಾಗಿದೆ ಎಂದು ಬ್ರೆಟ್​ ಟಯ್ಲೋ ತಿಳಿಸಿದ್ದಾರೆ.

    ಎಲನ್​ ಮಸ್ಕ್​ ಪರ ವಕೀಲರು ಈ ಸಂಬಂಧ ಸ್ಪಷ್ಟನೆ ನೀಡಿದ್ದಾರೆ. ಸಾಕಷ್ಟು ಬಾರಿ ಮನವಿ ಮಾಡಿದರು ನಕಲಿ ಅಥವಾ ಸ್ಪ್ಯಾಮ್​ ಖಾತೆಗಳ ಬಗ್ಗೆ ಪ್ರತಿಕ್ರಿಯಿಸಲು ಟ್ವಿಟರ್​ ನಿರಾಕರಿಸಿದೆ. ಈ ಮಾಹಿತಿಯುಇದು ಕಂಪನಿಯ ವ್ಯವಹಾರ ಕಾರ್ಯಕ್ಷಮತೆಗೆ ಮೂಲಭೂತವಾಗಿದೆ ಎಂದು ಹೇಳಿದ್ದಾರೆ.

    ಒಪ್ಪಂದಕ್ಕೆ ಸಂಬಂಧಿಸಿದಂತೆ ಟ್ವಿಟರ್​ನಿಂದ ಹಲವು ಬಾರಿ ನಿಯಮಗಳ ಉಲ್ಲಂಘನೆಯಾಗಿದೆ. ವಿಲೀನ ಒಪ್ಪಂದಕ್ಕೆ ಮಸ್ಕ್​ ಪ್ರವೇಶಿಸುವಾಗ ತಪ್ಪು ಮತ್ತು ತಪ್ಪುದಾರಿಗೆಳೆಯುವ ಪ್ರಾತಿನಿಧ್ಯಗಳನ್ನು ಮಾಡಿದೆ ಎಂದು ಗೋಚರಿಸುತ್ತಿದೆ ಎಂದು ಮಸ್ಕ್​ ಲಾಯರ್​ ವಿವರಣೆ ನೀಡಿದ್ದಾರೆ.

    ಇನ್ನು ಒಪ್ಪಂದದ ನಿಯಮಗಳ ಪ್ರಕಾರ ಮಸ್ಕ್ ಅವರು ವಹಿವಾಟನ್ನು ಪೂರ್ಣಗೊಳಿಸದಿದ್ದರೆ 1 ಬಿಲಿಯನ್ ಡಾಲರ್​ ಬ್ರೇಕ್-ಅಪ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಸಾಮಾಜಿಕ ಜಾಲತಾ ಸೇವೆಯಲ್ಲಿ ಜಾಹೀರಾತುಗಳನ್ನು ನೋಡುವ ಬಳಕೆದಾರರಲ್ಲಿ ಸ್ಪ್ಯಾಮ್ ಮತ್ತು ಬೋಟ್ ಖಾತೆಗಳು 5% ಕ್ಕಿಂತ ಕಡಿಮೆ ಇವೆ ಎಂದು ಕಂಪನಿಯು ಪುರಾವೆಗಳನ್ನು ತೋರಿಸದ ಹೊರತು ಒಪ್ಪಂದವನ್ನು ನಿಲ್ಲಿಸುವುದಾಗಿ ಈ ಹಿಂದೆಯೇ ಮಸ್ಕ್ ಬೆದರಿಕೆ ಹಾಕಿದ್ದರು.

    ಇದೀಗ ಟ್ವಿಟರ್​ ಒಪ್ಪಂದವನ್ನು ಮಸ್ಕ್​ ಮುರಿದುಕೊಂಡಿರುವುದರಿಂದ ಬಿಲಿಯನೇರ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಟ್ವಿಟರ್​ ಕಂಪನಿಯ ನಡುವೆ ಸುದೀರ್ಘ ಕಾನೂನು ಜಗಳಕ್ಕೆ ಕಾರಣವಾಗುವ ಸಾಧ್ಯತೆಯಿದೆ. (ಏಜೆನ್ಸೀಸ್​)

    ಭಾರತದಲ್ಲಿ ಮುಂದಿನ 5 ವರ್ಷದಲ್ಲಿ ಪೆಟ್ರೋಲ್​​ ಬಳಕೆಯೇ ಇರುವುದಿಲ್ಲ: ಸಚಿವ ನಿತಿನ್​ ಗಡ್ಕರಿ

    ಹೆಣ್ಣು ಮಕ್ಕಳೇ ಹುಷಾರ್​… ಯುವ ನಿರ್ಮಾಪಕರಿಬ್ಬರ ಕರಾಳ ಮುಖ ಬಯಲು ಮಾಡಿದ ನಟಿ ಚಾರ್ಮಿಳಾ

    ವಿಕ್ರಾಂತ್ ರೋಣ ನನ್ನ ಮಗಳಿದ್ದಂತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts