More

    ಮಾರಾಟಕ್ಕಿದೆ ಅಂದವಾದ ಐಲ್ಯಾಂಡ್​ – ದರ ಕೇಳಿದ್ರೆ ಹೌಹಾರ್ತೀರಿ!

    ವಾಷಿಂಗ್ಟನ್​: ಕೃಷಿ ಜಮೀನು, ಇಂಡಿಪೆಂಡೆಂಟ್​ ಹೌಸ್​, ಅಪಾರ್ಟ್​ಮೆಂಟ್ಸ್​ ಮತ್ತು ವಿಲ್ಲಾದಂತಹವುಗಳನ್ನು ಮಾರಾಟ ಮಾಡುವುದು ಅಥವಾ ಕೊಂಡುಕೊಳ್ಳುವುದು ಎಲ್ಲೆಡೆ ಸಾಮಾನ್ಯ. ಆದರೆ ಸಾಗರ, ಸಮುದ್ರ, ಕೊಲ್ಲಿಗಳ ನಡುವೆ ನೈಸರ್ಗಿಕವಾಗಿ ಸೃಷ್ಠಿಯಾಗಿರುವ ‘ದ್ವೀಪ’ಗಳೂ ಸಹ ಮಾರಾಟಕ್ಕೆ ಸಿಗುತ್ತವೆ ಎಂದರೆ ನಂಬಲೇಬೇಕು. ಇದಕ್ಕೆ ತಾಜಾ ಉದಾಹರಣೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ಮಧ್ಯದಲ್ಲಿರುವ ‘ರೆಡ್ ರಾಕ್ ಐಲ್ಯಾಂಡ್’ ಈಗ ಮಾರಾಟಕ್ಕೆ ಸಿದ್ಧವಾಗಿದೆ. ಇದಕ್ಕೆ ಸಮಬಂಧಿಸಿದ ವಿವರ ಇಲ್ಲಿದೆ.

    ಇದನ್ನೂ ಓದಿ : 3 ದೇಶಗಳಲ್ಲಿ ಬೆಳಗ್ಗೆ ಭೂಕಂಪ; ಪಾಕಿಸ್ತಾನ, ಚೀನಾ, ಪಪುವಾ ನ್ಯೂಗಿನಿಯಾದಲ್ಲಿ ಭಯಭೀತರಾದ ಜನರು..ಎಲ್ಲಿ ಎಷ್ಟು ತೀವ್ರತೆಯಿದೆ?

    ಪ್ರಸ್ತುತ ಈ ದ್ವೀಪದ ಮಾಲಲೀಕ ಬ್ರಾಕ್ ಡರ್ನಿಂಗ್, ಪಿತ್ರಾರ್ಜಿತವಾಗಿ ಆತ ದ್ವೀಪವನ್ನು ಪಡೆದಿದ್ದಾನೆ, ಅಲಾಸ್ಕಾದಲ್ಲಿ ವಾಸಿಸುತ್ತಿರುವ ಆತ ತನ್ನ ವಯಸ್ಸಾದ ತಾಯಿಯನ್ನು ನೋಡಿಕೊಳ್ಳಲು ಸ್ವಲ್ಪ ಹೆಚ್ಚುವರಿ ಹಣ ಹೊಂದಿಸಬೇಕಿರುವ ಕಾರಣ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

    ಸ್ಯಾನ್ ಫ್ರಾನ್ಸಿಸ್ಕೋ ಯುನೈಟೆಡ್ ಸ್ಟೇಟ್ಸ್​ನ ಪಶ್ಚಿಮ ಕರಾವಳಿಯಲ್ಲಿದ್ದು, ನಗರ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಬೆಟ್ಟಗಳಿಂದ ಕೂಡಿದ್ದು, ಪ್ರಕೃತಿ ಸೊಬಗು ಮನಮೋಹಕವಾಗಿದೆ. ಇಂತಹ ಅದ್ಭುತವಾದ ಸೌಂದರ್ಯ ತಾಣದಲ್ಲಿ ದ್ವೀಪ ಹೊಂದುವುದು ಕಡಿಮೆ ಮಾತಲ್ಲ. ಆದಾಗ್ಯೂ ಟ್ರೆಷರ್ ಐಲ್ಯಾಂಡ್, ಯೆರ್ಬಾ ಬ್ಯೂನಾ, ಅಲ್ಕಾಟ್ರಾಜ್ ಮತ್ತು ಸೀಲ್ ರಾಕ್ಸ್‌ಗಳಲ್ಲಿ ಒಂದಾದ ‘ರೆಡ್ ರಾಕ್ ಐಲ್ಯಾಂಡ್’ ದ್ವೀಪವನ್ನು ಹೊಂದುವುದು ಅಷ್ಟು ಸುಲಭವಲ್ಲ. ಕೆಲವು ತಾಂತ್ರಿಕ ಅಡಚಣೆಗಳು ಇವೆ ಎನ್ನಲಾಗುತ್ತಿದೆ.

    ಗುಲಾಬಿ ಬಣ್ಣದ ಕಲ್ಲುಗಳು, ರಕ್ತ ಚಂದನದಂತಹ ಕೆಂಪು ಮಣ್ಣು ಇದ್ದ ಕಾರಣ ‘ರೆಡ್ ರಾಕ್ ಐಲ್ಯಾಂಡ್’ ಎಂದು ಕರೆಯಲಾಗುತ್ತದೆ. ಮ್ಯಾಂಗನೀಸ್​ ಖನಿಜ ಸಹ ಹೇರಳವಾಗಿತ್ತು. ಆದರೆ ಖನಿಜ, ಗುಲಾಬಿ ಕಲ್ಲುಗಳನ್ನು ರಹಸ್ಯ ಗಣಿಗಾರಿಕೆ ಮೂಲಕ ಖಾಲಿ ಮಾಡಲಾಗಿದೆ. ಸರ್ಕಾರ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ವಶಪಡಿಸಿಕೊಳ್ಳಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ.

    ಯುಎಸ್ ವೀಸಾ ಪಡೆಯುವ ಭಾರತೀಯ ವಿದ್ಯಾರ್ಥಿಗಳಿಗೆ ಇಂದಿನಿಂದ ಹೊಸ ನಿಯಮ ಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts