More

    2025ರವರೆಗೆ ಕಡಿಮೆ ಊಟ ಮಾಡುವಂತೆ ಉತ್ತರ ಕೊರಿಯಾ ಜನತೆಗೆ ಕಿಮ್​ ಜಾಂಗ್​ ಉನ್​ ಆದೇಶ

    ಪ್ಯೊಂಗ್ಯಾಂಗ್: ದೇಶದಲ್ಲಿ ಆಹಾರ ಬಿಕ್ಕಟ್ಟು ಸೃಷ್ಟಿಯಾಗಿದೆ 2025 ರವರೆಗೆ ಕಡಿಮೆ ಊಟ ಮಾಡುವಂತೆ ಉತ್ತರ ಕೊರಿಯಾದ ಸುಪ್ರೀಂ ಲೀಡರ್​ ಕಿಮ್​ ಜಾಂಗ್​ ಉನ್​ ಜನರಿಗೆ ಆದೇಶಿಸಿದ್ದಾರೆ.

    ಕರೊನಾ ಶುರುವಾಗಿನಿಂದ ಉತ್ತರ ಕೊರಿಯಾ ತನ್ನ ಎಲ್ಲ ಗಡಿಗಳನ್ನು ಮುಚ್ಚಿರುವುದರಿಂದ ಚೀನಾದಿಂದ ಯಾವುದೇ ಆಹಾರ ಪೂರೈಕೆ ಆಗುತ್ತಿಲ್ಲ. ಇದಲ್ಲದೆ, ಜಾಗತಿಕವಾಗಿ ಪರಮಾಣು ಮತ್ತು ಶಸ್ತ್ರಾಸ್ತ್ರ ಕಾರ್ಯಕ್ರಮವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದ್ದು, ಪರಮಾಣು ರಾಷ್ಟ್ರವೆಂದೇ ಕುಖ್ಯಾತಿ ಆಗಿರುವ ಉತ್ತರ ಕೊರಿಯಾ ಮೇಲಿನ ಕಠಿಣ ನಿರ್ಬಂಧಗಳು ಕೂಡ ಆಹಾರ ಸಂಪನ್ಮೂಲಗಳು ಒಣಗಲು ಕಾರಣವಾಗಿವೆ.

    ಉತ್ತರ ಕೊರಿಯಾವು ಈ ವರ್ಷ ಸುಮಾರು 860,000 ಟನ್‌ಗಳ ಆಹಾರದ ಕೊರತೆಯನ್ನು ಎದುರಿಸುತ್ತಿದೆ. ಯುಎನ್‌ನ ಆಹಾರ ಮತ್ತು ಕೃಷಿ ಸಂಸ್ಥೆಯ ಮುನ್ಸೂಚನೆ ಪ್ರಕಾರ ಮುಂದಿನ ತಿಂಗಳ ಆರಂಭದಲ್ಲಿ ದೇಶವು ಕಠಿಣವಾದ ಅವಧಿಯನ್ನು ಅನುಭವಿಸಬಹುದು ಎಂದು ಎಚ್ಚರಿಸಿದೆ.

    ಸೋವಿಯತ್ ಒಕ್ಕೂಟದ ವಿಘಟನೆ, 1994 ರಲ್ಲಿ ನೈಸರ್ಗಿಕ ವಿಕೋಪಗಳ ಸರಣಿಯ ನಂತರ ಆಹಾರದ ಬಿಕ್ಕಟ್ಟು, ಆಲಿಕಲ್ಲು ಚಂಡಮಾರುತಗಳು, 1995 ರಿಂದ 1996 ರವರೆಗಿನ ಪ್ರವಾಹಗಳು ಮತ್ತು 1997ರಲ್ಲಿ ಬರಗಾಲಗಳು ಉತ್ತರ ಕೊರಿಯಾವನ್ನು ಆರ್ಥಿಕ ಬಿಕ್ಕಟ್ಟಿಗೆ ತಳ್ಳಿದವು. ನಿರ್ಬಂಧಗಳು ಮತ್ತು ವ್ಯಾಪಾರ ನಿರ್ಬಂಧಗಳು ದೇಶದ ಆರ್ಥಿಕ ಭವಿಷ್ಯವನ್ನು ಮತ್ತಷ್ಟು ಘಾಸಿಗೊಳಿಸಿವೆ. ಸೋವಿಯತ್ ಒಕ್ಕೂಟದ ಪತನದ ನಂತರ ಉತ್ತರ ಕೊರಿಯಾವನ್ನು ಅಪ್ಪಳಿಸಿದ ಕ್ಷಾಮದಲ್ಲಿ ಸುಮಾರು 3 ಮಿಲಿಯನ್ ಜೀವಗಳು ಬಲಿಯಾಗಿದ್ದು, ಕ್ಷಾಮದ ಅವಧಿಯನ್ನು ಅಧಿಕಾರಿಗಳು ‘ಕಷ್ಟದ ಮಾರ್ಚ್’ ಎಂದು ನಾಮಕರಣ ಮಾಡಲಾಗಿದೆ.

    ಜೂನ್‌ನಲ್ಲಿ ಹಿರಿಯ ನಾಯಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಿಮ್​ ಜಾಂಗ್​ ಉನ್​ ದೇಶದ ಆಹಾರ ಸಂಪನ್ಮೂಲಗಳ ಕೆಟ್ಟ ಸ್ಥಿತಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದರು. ವಿವಿಧ ಪ್ರಾಂತ್ಯಗಳಲ್ಲಿ ಭಾರೀ ಮಳೆ ಮತ್ತು ಟೈಫೂನ್ ಕೂಡ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ. ಆಹಾರ ಬಿಕ್ಕಟ್ಟು 2025 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಇದೇ ವೇಳೆಗೆ ಉತ್ತರ ಕೊರಿಯಾ ಮತ್ತು ಚೀನಾ ನಡುವಿನ ಕಸ್ಟಮ್ಸ್ ಪುನರಾರಂಭಗೊಳ್ಳುವ ಸಾಧ್ಯತೆಯು ತುಂಬಾ ಕಡಿಮೆಯಾಗಿದೆ.

    ಉತ್ತರ ಕೊರಿಯಾದಲ್ಲಿ ಈಗಾಗಲೇ ಲಕ್ಷಾಂತರ ಜನರು ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದಾರೆ ಮತ್ತು ಹೆಚ್ಚಿನ ಕುಟುಂಬಗಳು ದಿನಕ್ಕೆ ಒಂದು ಅಥವಾ ಎರಡು ಊಟಗಳನ್ನು ಮಾತ್ರ ತಿನ್ನುತ್ತವೆ. ಕಿಮ್ ಜಾಂಗ್-ಉನ್ ಅವರ ದೇಶವು ಕಳೆದ ಕೆಲವು ತಿಂಗಳುಗಳಿಂದ ಆಹಾರದ ಬಿಕ್ಕಟ್ಟನ್ನು ಎದುರಿಸುತ್ತಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. (ಏಜೆನ್ಸೀಸ್​)

    ನವೆಂಬರ್​ 1ರಿಂದ ಈ ಮೊಬೈಲ್​ಗಳಲ್ಲಿ ವಾಟ್ಸ್​ಆ್ಯಪ್ ಸ್ಥಗಿತ: ಸಂಪೂರ್ಣ ಪಟ್ಟಿ ಇಲ್ಲಿದೆ

    ಪುನೀತ್​ರನ್ನು ಸದಾ ಜೀವಂತವಾಗಿಡಲು ಇರುವ ಮಾರ್ಗವನ್ನು ತಿಳಿಸಿದ ನಟಿ ರಮ್ಯಾ

    ಹೆಣ್ಣು ಮಕ್ಕಳ ಖಾಸಗಿ ಅಂಗ ಮೋಜಿನ ವಸ್ತುವಂತೆ! ಸ್ನೇಹಿತನೊಬ್ಬನ ಕರಾಳ ಮುಖ ಬಿಚ್ಚಿಟ್ಟ ಚಿನ್ಮಯಿ

    ನಗು ನಗುತ್ತಾ ಗಂಡನ ಕಳುಹಿಸಿದ ಬೆನ್ನಲ್ಲೇ ಪತ್ನಿ ಮಾಡಿದ ನಿರ್ಧಾರಕ್ಕೆ ಪತಿಯು ಬಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts