More

    ಇನ್​ಸ್ಟಾಗ್ರಾಂನಲ್ಲಿ ಒಂದು ಜಾಹೀರಾತು ಪೋಸ್ಟ್​​ಗೆ ಕೊಹ್ಲಿ ಚಾರ್ಜ್​ ಮಾಡುವ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!​

    ನವದೆಹಲಿ: ಇನ್​ಸ್ಟಾಗ್ರಾಂ ವಿಚಾರಕ್ಕೆ ಬಂದಾಗ ವಿರಾಟ್​ ಕೊಹ್ಲಿ ಭಾರತದ ನಂಬರ್​ 1 ಸೆಲೆಬ್ರಿಟಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಫುಟ್​ಬಾಲ್​ ಸ್ಟಾರ್​ ಕ್ರಿಶ್ಚಿಯಾನೊ ರೊನಾಲ್ಡೋ ಇನ್​ಸ್ಟಾಗ್ರಾಂನಲ್ಲೇ ಅತ್ಯಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಈ ವಿಚಾರದಲ್ಲಿ ಕೊಹ್ಲಿ ಕೂಡ ಹಿಂದೆ ಉಳಿದಿಲ್ಲ. ಬರೋಬ್ಬರಿ 178 ಮಿಲಿಯನ್ಸ್​ ಹಿಂಬಾಲಕರನ್ನು ಕೊಹ್ಲಿ ಹೊಂದಿದ್ದಾರೆ.

    ಬಹುತೇಕ ಸೆಲೆಬ್ರಿಟಿಗಳು ಇನ್​ಸ್ಟಾಗ್ರಾಂನಿಂದಲೇ ಸಾಕಷ್ಟು ಹಣ ಸಂಪಾದಿಸುತ್ತಾರೆ ಎಂಬುದು ಜಗಜ್ಜಾಹೀರು. ತಾವು ಮಾಡುವ ಪ್ರತಿ ಪೋಸ್ಟ್​ಗೆ ಅತ್ಯಧಿಕ ಹಿಂಬಾಲಕರನ್ನು ಹೊಂದಿರುವ ಸೆಲೆಬ್ರಿಟಿಗಳು ಇಂತಿಷ್ಟು ಹಣ ಅಂತಾ ಚಾರ್ಜ್​ ಮಾಡುತ್ತಾರೆ. ಈ ರೀತಿ ಸಂಪಾದನೆ ಮಾಡುವಲ್ಲಿ ರೊನಾಲ್ಡೋ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್​ ಕೊಹ್ಲಿ 19ನೇ ಸ್ಥಾನ ಮತ್ತು ಭಾರತದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

    2021ರಲ್ಲಿ ರೊನಾಲ್ಡೋ ತಮ್ಮ ಪ್ರತಿ ಪೋಸ್ಟ್​ಗೆ 1,604,000 ಡಾಲರ್​ ಅಂದರೆ, ಭಾರತೀಯ ಕರೆನ್ಸಿ ಪ್ರಕಾರ 118788149 ರೂಪಾಯಿ ಚಾರ್ಜ್​ ಮಾಡುತ್ತಾರೆ. ಇನ್ನು ಕೊಹ್ಲಿ ಪ್ರತಿ ಪೋಸ್ಟ್​ಗೆ 6,80,000 ಡಾಲರ್ ಅಂದರೆ 5,03,59,066 ರೂ. ಚಾರ್ಜ್​ ಮಾಡುತ್ತಾರೆ.

    ಕೊಹ್ಲಿಯನ್ನು ಬಿಟ್ಟರೆ ಭಾರತದಿಂದ ಇನ್​ಸ್ಟಾಗ್ರಾಂನ ಟಾಪ್​ ಸೆಲೆಬ್ರಿಟಿಗಳ ಸ್ಥಾನದಲ್ಲಿರುವುದು ನಟಿ ಪ್ರಿಯಾಂಕಾ ಚೋಪ್ರಾ ಮಾತ್ರ. 27ನೇ ಸ್ಥಾನದಲ್ಲಿರುವ ಪಿಗ್ಗಿ ಪ್ರತಿ ಇನ್​ಸ್ಟಾಗ್ರಾಂ ಪೋಸ್ಟ್​ಗೆ 403,000 ಡಾಲರ್​ ಅಂದರೆ, 2, 98,45,152 ರೂಪಾಯಿ ಚಾರ್ಜ್​ ಮಾಡುತ್ತಾರೆ.

    ಫೋರ್ಬ್ಸ್ ಇಂಡಿಯಾದ ಪ್ರಕಾರ, ಈ ಇಬ್ಬರು ಭಾರತೀಯ ಸೂಪರ್‌ಸ್ಟಾರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರದ ವೀಡಿಯೊಗಳನ್ನು ಬಿಡುಗಡೆ ಮಾಡುವ ಮೂಲಕ ಸಾಕಷ್ಟು ಹಣವನ್ನು ಗಳಿಸುತ್ತಿದ್ದಾರೆ.

    ಕೊಹ್ಲಿಯ ವಿಷಯಕ್ಕೆ ಬಂದರೆ, ಅವರು 2008 ರಲ್ಲಿ ತಮ್ಮ ಚೊಚ್ಚಲ ಇನ್​ಸ್ಟಾಗ್ರಾಂ ಪ್ರವೇಶದಿಂದ ಮೈದಾನದ ಒಳಗೆ ಮತ್ತು ಹೊರಗೆ ಹೆಚ್ಚು ಬೇಡಿಕೆಯಿರುವ ಸೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಹಲವಾರು ವ್ಯವಹಾರಗಳನ್ನು ಪ್ರಚಾರ ಮಾಡಿದ್ದಾರೆ ಮತ್ತು ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts