More

    ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುವುದು ಕೆಟ್ಟ ಟ್ರೆಂಡ್ ಆಗಿದೆ​: ಮುಖ್ಯ ನ್ಯಾಯಮೂರ್ತಿ

    ನವದೆಹಲಿ: ದೇಶದಲ್ಲಿ ಪೊಲೀಸರು ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿರುವುದು “ಮನಕದಡುವ ಟ್ರೆಂಡ್”​ ಆಗಿದೆ ಎಂದು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ. ರಮಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

    ಹಲವಾರು ರಾಜ್ಯಗಳಲ್ಲಿ ರಾಜಕೀಯ ಪ್ರೇರಿತ ತನಿಖೆಗಳ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ವಿಷಾದ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ಉತ್ತಮ ಪುಸ್ತಕಗಳಲ್ಲಿ ಇರಲು ಬಯಸುವ ಪೊಲೀಸ್ ಅಧಿಕಾರಿಗಳ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡುವ ದಾಳವಾಗಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆಂದು ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ ಅವರನ್ನೊಳಗೊಂಡ ನ್ಯಾಯ ಪೀಠ ಕಳವಳ ವ್ಯಕ್ತಪಡಿಸಿತು. ಇದರೊಂದಿಗೆ ಪೊಲೀಸರು ಕಾನೂನುಗಳಿಗೆ ಅಂಟಿಕೊಂಡಿರಬೇಕೆಂದು ಸಲಹೆ ನೀಡಿತು.

    ಅಮಾನತು ಮಾಡಿ, ದೇಶದ್ರೋಹದ ಆರೋಪ ಹೊರಿಸಿರುವ ಛತ್ತೀಸ್​ಗಢ ಪೊಲೀಸ್ ಅಧಿಕಾರಿಯ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೊರ್ಟ್, ಇಂದಿನ ಟ್ರೆಂಡ್​ಗೆ ಪೊಲೀಸರೇ ಜವಾಬ್ದಾರರು ಎಂದು ಹೇಳಿತು.

    ಛತ್ತೀಸ್​ಗಢ ಸರ್ಕಾರದ ವಿರುದ್ಧ ಸಂಚು ಮತ್ತು ಭ್ರಷ್ಟಾಚಾರ ಆರೋಪ ಹೊರಿಸಿ ದಾಖಲಾಗಿರುವ ಎಫ್​ಐಆರ್​ ಅನ್ನು ರದ್ದು ಮಾಡುವಂತೆ 1994ರ ಬ್ಯಾಚಿನ ಐಪಿಎಸ್​ ಅಧಿಕಾರಿ ಗುರ್ಜಿಂದರ್​ ಪಾಲ್​ ಸಿಂಗ್ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ ತುಂಬಾ ಹತ್ತಿರವಾಗಿದ್ದೇ ಎಂಬ ಕಾರಣಕ್ಕೆ ರಾಜ್ಯ ಕಾಂಗ್ರೆಸ್​ ಸರ್ಕಾರ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದೆ ಎಂದು ಗುರ್ಜಿಂದರ್​ ಪಾಲ್​ ಸಿಂಗ್ ದೂರಿದ್ದಾರೆ.

    ಅಧಿಕಾರಿಯನ್ನು ಬಂಧಿಸದಂತೆ ಛತ್ತೀಸ್‌ಗಢ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆದಾಯಕ್ಕಿಂತ ಹೆಚ್ಚಿನ ಹಣ ಸಂಪಾದನೆ ಮಾಡಿರುವ ಆರೋಪವೂ ಇದೆ. (ಏಜೆನ್ಸೀಸ್​)

    ಹುಡುಗ-ಹುಡುಗಿಯರನ್ನು ಬೆತ್ತಲೆ ನೋಡ್ಬಹುದು! ಚಾಮುಂಡಿ ಬೆಟ್ಟದ ತಪ್ಪಲಿನ ಕರಾಳತೆ ಬಿಚ್ಚಿಟ್ಟ ನಿವೃತ್ತ ಅಧಿಕಾರಿ

    ದುಬಾರಿ ಬೆಲೆ ಕಾರಿನ ಒಡೆಯನಾದ ಬಿಗ್​ಬಾಸ್ ವಿನ್ನರ್…ಅದರ ಬೆಲೆ ಎಷ್ಟು ಗೊತ್ತಾ?

    ತನ್ನ ಮದುವೆ ದಿಬ್ಬಣದಲ್ಲಿ ಸೊಂಟ ಬಳುಕಿಸಿದ ವಧುವಿಗೆ ಖುಲಾಯಿಸಿದ ಲಕ್​: ಹುಡುಕಿಕೊಂಡು ಬಂತು ಬಿಗ್​ ಆಫರ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts